ಬೋಪಯ್ಯಗೆ ಮಾನ ಮರ್ಯಾದೆ ಇದ್ರೆ ಮೊದಲು ಕ್ಷಮೆ ಕೇಳಲಿ: ಮಾಜಿ ಸಚಿವ ಆಂಜನೇಯ ಆಗ್ರಹ
* ಅಪರಾಧವನ್ನು ಬೇರೆಯವರ ಮೇಲೆ ಹಾಕೋದ್ರಲ್ಲಿ ಬಿಜೆಪಿಗರು ನಿಸ್ಸೀಮರು.* ಬೋಪಯ್ಯಗೆ ಮಾನ ಮರ್ಯಾದೆ ಇದ್ರೆ ಮೊದಲು ಕ್ಷಮೆ ಕೇಳಲಿ ಎಂದ ಮಾಜಿ ಸಚಿವ ಹೆಚ್ ಆಂಜನೇಯ. * ಕಾಂಗ್ರೆಸ್ ತಾಳ್ಮೆ ಪರೀಕ್ಷೆ ಮಾಡಬೇಡಿ ಎಂದು ಡಿಕೆಶಿ ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಅದನ್ನು ಮರಯಬೇಡಿ ಎಂದ ಆಂಜನೇಯ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ, (ಆ.20): ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಕಿಡಿಗೇಡಿಗಳ ವಿರುದ್ದ ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ಚಿತ್ರದುರ್ಗ ಜಿಲ್ಲೆಯ ಕಾಂಗ್ರೆಸ್ ನಾಯಕ ಹೆಚ್ ಆಂಜನೇಯ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ನವರೇ ಹೊಡೆದಿರಬೇಕು ಎಂಬ ಕೆ.ಜಿ ಬೋಪಯ್ಯ ಹೇಳಿಕೆ ವಿಚಾರಕ್ಕೆ, ಚಿತ್ರದುರ್ಗದಲ್ಲಿ ಮಾಜಿ ಸಚಿವ ಹೆಚ್ ಆಂಜನೇಯ ಟಾಂಗ್ ಕೊಟ್ಟರು.
ಜನರನ್ನು ತಪ್ಪು ದಾರಿಗೆ ತಂದು, ಅಪರಾಧ ಬೇರೆಯವರ ಮೇಲೆ ಹಾಕೋದ್ರಲ್ಲಿ ಬಿಜೆಪಿ ನಿಸ್ಸೀಮರು. ಬೋಪಯ್ಯಗೆ ಮಾನ ಮರ್ಯಾದೆ ಇದ್ರೆ ಮೊದಲು ಕ್ಷಮೆ ಕೇಳಬೇಕಿತ್ತು. ನನ್ನ ಜಿಲ್ಲೆಯಲ್ಲಿ ಯಾರೋ ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ ಎಂದು ಕ್ಷಮೆ ಕೇಳ ಬೇಕಿತ್ತು. ಅವರೂ ಕೂಡ ಗೂಂಡಾಗಳ ರೀತಿ ಮಾತನಾಡಿರೋದು ದುರದೃಷ್ಟಕರ ಎಂದು ಕಿಡಿಕಾರಿದರು. ರಾಜಕಾರಣ ಯಾವ ಕಡೆ ಹೋಗ್ತಿದೆ ಎಂದು ನೀವೆ ನೋಡಿ. ಸಿದ್ದರಾಮಯ್ಯ ರಾಜ್ಯದ ಪ್ರಭಾವಿಶಾಲಿ ನಾಯಕ. ನಮ್ಮ ನಾಯಕನ ಮೇಲೆ ಅಡ್ಡಿ ಆತಂಕ ಪಡಿಸುವ ಕೀಳು ಮಟ್ಟಕ್ಕೆ ಬಿಜೆಪಿ ಇಳಿದಿದೆ. ಈ ಘಟನೆಯಿಂದ ನಿಮ್ಮ ಸಣ್ಣತನವನ್ನು ತೋರಿಸಿದ್ದೀರಿ. ಯಡಿಯೂರಪ್ಪ ನವರು ವಿವಾದವನ್ನು ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಬಿಜೆಪಿಯವರು ಬೇಷರತ್ ಕ್ಷಮೆ ಕೇಳಬೇಕು ಆಗ್ರಹಿಸಿದರು..
ಸಿದ್ದು ಕಾರಿಗೆ ಮೊಟ್ಟೆ ಎಸೆದಿದ್ದು ಖಂಡಿಸಿ ರಾಜ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆ
ಕೃತ ಎಸಗಿರೋರನ್ನ ರೌಡಿ ಲೀಸ್ಟ್ ಗೆ ಸೇರಿಸಿ, ಗಡಿಪಾರು ಮಾಡಬೇಕು. ಬೋಪಯ್ಯ ಸ್ವಲ್ಪ ವಿಡಿಯೋ ನೋಡಪ್ಪ ಕ್ರಮ ಕೈಗೊಳ್ಳು ಮೊದಲು, ಬೋಪಯ್ಯ ಗೆ ಮಾಜಿ ಸಚಿವ ಹೆಚ್ ಆಂಜನೇಯ ಟಾಂಗ್. ಯಾವನೋ ಒಬ್ಬ ಕೊಡಗು ಸಿದ್ದರಾಮಯ್ಯ ಅವರ ವಿರುದ್ಧವಾದ ಜಿಲ್ಲೆ ಅಂತ ಹೆಸರೇಳದೇ ಸಂಸದ ಪ್ರತಾಪ್ ಸಿಂಹ ವಿರುದ್ದ ಆಂಜನೇಯ ಕಿಡಿಕಾರಿದರು.
ಕೊಡಗು, ಮೈಸೂರು ಭಾಗದ ಜನ ನಾಯಕ ಸಿದ್ದರಾಮಯ್ಯ ಸಿದ್ದರಾಮಯ್ಯ ಗೆ ಯಾವ ಜಿಲ್ಲೆಯಲ್ಲೂ ವಿರೋಧ ಇಲ್ಲ. ಕಾಂಗ್ರೆಸ್ ತಾಳ್ಮೆ ಪರೀಕ್ಷೆ ಮಾಡಬೇಡಿ ಎಂದು ಡಿಕೆಶಿ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ನಮ್ಮ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರ ಕರೆಗಾಗಿ ನಿರೀಕ್ಷೆ ಮಾಡ್ತಿದ್ದೀವಿ. ಅವರು ಏನ್ ಹೇಳ್ತಾರೋ ಆ ರೀತಿ ಮುಂದಿನ ಹೋರಾಟ ಮಾಡ್ತೀವಿ. ಕ್ರಿಯೆಗೆ ಪ್ರತಿಕ್ರಿಯೆ ಎಂಬಂತೆ ಬಿಜೆಪಿ ಕಾರ್ಯಾಲಯಕ್ಕೆ ಕೈ ಕಾರ್ಯಕರ್ತರ ಮೊಟ್ಟೆ ಎಸೆತ ಪ್ರಕರಣ. ನಿನ್ನೆ ಪ್ರತಿಭಟನೆ ವೇಳೆ ನಡೆದಿದ್ದ ಘಟನೆ. ಬಿಜೆಪಿ ಕಾರ್ಯಾಲಯಕ್ಕೆ ಎಸೆದಿದ್ದಾರೆ ಅಷ್ಟೆ, ಯಾವುದೇ ಜನರ ಮೇಲಲ್ಲ. ಅದನ್ನೂ ಕೂಡ ನಾವು ಮಾಡ್ರಿ ಎಂದು ನಮ್ಮವರಿಗೆ ಹೇಳಲ್ಲ. ಮೊಟ್ಟೆ, ಮಾಂಸ,ಟಮೊಟೊ ಎಸೆಯೋದು ನಮ್ಮ ಸಂಸ್ಕೃತಿ ಅಲ್ಲ. ಭಾಷಣದ ಮೂಲಕ ವಿರೋಧ ಪಕ್ಷಗಳಿಗೆ ಎಚ್ಚರಿಕೆ ಕೊಡುವುದು ನಮ್ಮ ಕೆಲಸ ಎಂದರು..