Conversion Politics: ಸೋನಿಯಾ ಗಾಂಧಿ ಟೀಕಿಸುವ ಯೋಗ್ಯತೆ ಮುತಾಲಿಕ್‌ಗೆ ಇಲ್ಲ: ಆಂಜನೇಯ
* ಯಾವ ಧರ್ಮದಲ್ಲಿ ಇರಬೇಕು ಅನ್ನೋದು ನನಗೆ ಬಿಟ್ಟದ್ದು
* ಸ್ವಾಮಿಗಳು ಸ್ವಲ್ಪ ಯೋಚನೆ ಮಾಡಿ ಹೇಳಿಕೆ ನೀಡಬೇಕು
* ಯಾವ ಕಾರಣಕ್ಕೆ ಸತ್ತಿದ್ದಾರೆ ಅಂತ ಯಾರಿಗೆ ಗೊತ್ತು?
ಬಾಗಲಕೋಟೆ(ಡಿ.12): ಎಐಸಿಸಿ ವರಿಷ್ಠೆ ಸೋನಿಯಾ ಗಾಂಧಿ(Sonia Gandhi) ಅವರು ಪ್ರಧಾನಿ ಹುದ್ದೆ ನಿರಾಕರಿಸಿ ಆರ್ಥಿಕ ತಜ್ಞ ಮನಮೋಹನ್ ಸಿಂಗ್(Manmohan SinghO ಅವರನ್ನ ಪ್ರಧಾನಿ(Prime Minister) ಮಾಡಿದ ತ್ಯಾಗ ಮಹಿಳೆಯಾಗಿದ್ದಾರೆ. ಭಾರತದ(India) ಹೆಸರನ್ನು ಇಡೀ ಪ್ರಪಂಚಕ್ಕೆ ಎತ್ತಿ ಹಿಡಿದು ಕೀರ್ತಿ ತಂದಿದ್ದಾರೆ. ಅಂತ ಮಹಿಳೆ ಟೀಕಿಸುವ ಯೋಗ್ಯತೆ, ನೈತಿಕತೆ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್‌ಗೆ ಇಲ್ಲ ಅಂತ ಮಾಜಿ ಸಚಿವ ಎಚ್.ಆಂಜನೇಯ(H Anjaneya) ಕಿಡಿಕಾರಿದ್ದಾರೆ.
ಕಾಂಗ್ರೆಸ್ಸಿಗರು ಸೋನಿಯಾ ಗಾಂಧಿಗೆ ಹೆದರಿ ಮತಾಂತರ ಕಾಯ್ದೆ ವಿರೋಧಿಸುತ್ತಿದ್ದಾರೆ ಎಂಬ ಪ್ರಮೋದ್ ಮುತಾಲಿಕ್(Pramod Mutalik) ಹೇಳಿಗೆ ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಅವನ್ಯಾವನು ಮುತಾಲಿಕ್ ಬಿಡ್ರಿ, ಸೋನಿಯಾ ಗಾಂಧಿ ಈ ದೇಶದ ಆದರ್ಶ ಮಹಿಳೆಯಾಗಿದ್ದಾರೆ. ಅವರನ್ನು ಓಲೈಸಿ ಹೇಳುವಂತಹದ್ದೇನಿಲ್ಲ. ದೇಶದಲ್ಲಿ ಜನರು ವಿರೋಧ ಮಾಡುವ ಕಾಯ್ದೆ ಜಾರಿಗೆ ತಂದ್ರೂ ನಾವು ವಿರೋಧಿಸುತ್ತೇವೆ. ಅವರಿವರನ್ನು ಓಲೈಸೋರು ನಾವಲ್ಲ. ಸೋನಿಯಾ ಗಾಂಧಿ ಎಲ್ಲ ದೇವರನ್ನು ಆರಾಧಿಸಿ ಸರ್ವ ಧರ್ಮಿಯ ನಾಯಕಿಯಾಗಿದ್ದಾರೆ ಎಂದು ಹೇಳುವ ಮೂಲಕ ಮುತಾಲಿಕ್ ವಿರುದ್ಧ ಹರಿಹಾಯ್ದಿದ್ದಾರೆ.
Religious Conversion: ಬಿಜೆಪಿ ಸರ್ಕಾರದಲ್ಲಿಯೇ ಗೋ ಕಳ್ಳತನ, ಮತಾಂತರ ಹೆಚ್ಚು: ಮುತಾಲಿಕ್
ಸೋನಿಯಾ ಬಗ್ಗೆ ಟೀಕೆ ಮಾಡೋರಿಗೆ ಜ್ಞಾನ ಇಲ್ಲ
ವಿದೇಶದಿಂದ ಬಂದು ಅತ್ತೆ ಕಳೆದುಕೊಂಡಳು, ಗಂಡನನ್ನ ಕಳೆದುಕೊಂಡು ವಿಧವೆ ಆದಳು. ಹಾಗಿದ್ರೆ ಪ್ಯಾಕಪ್ ಮಾಡಿಕೊಂಡು ಹೋಗಲಿಲ್ಲ. ಎಲ್ಲವನ್ನು ಬಿಟ್ಟು ಇಲ್ಲಿಯೇ ಉಳಿದರು. ಇಂತವರನ್ನು ಟೀಕೆ ಮಾಡೋರಿಗೆ ಯಾವುದೇ ಜ್ಞಾನ ಇಲ್ಲ ಎಂದ ಮಾಜಿ ಸಚಿವ ಎಚ್.ಆಂಜನೇಯ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಯಾವ ಧರ್ಮದಲ್ಲಿ ಇರಬೇಕು ಅನ್ನೋದು ನನಗೆ ಬಿಟ್ಟದ್ದು
ಮತಾಂತರ ನಿಷೇಧ ಕಾಯ್ದೆ(Conversion Prohibition Act) ಜಾರಿ ವಿಚಾರದ ಬಗ್ಗೆ ಮಾತನಾಡಿದ ಆಂಜನೇಯ, ಮತಾಂತರ ಅದು ವ್ಯಕ್ತಿಯ ಅಭಿವ್ಯಕ್ತಿತ್ವ ಸ್ವಾತಂತ್ರ್ಯವಾಗಿದೆ. ನಾನೀಗ ಹಿಂದೂ(Hindu) ಧರ್ಮದಲ್ಲಿ ಇದ್ದೇನೆ. ರಾಮ ರಾಮ ಅಂತಾರೆ ರಾಮನೇನು ಇವರಪ್ಪನ ಮನೆಯ ಸ್ವತ್ತಲ್ಲ. ರಾಮನಿಗೆ ಅತಿ ಹತ್ತಿರದವನು ಆಂಜನೇಯ. ಆಂಜನೇಯ ಇಲ್ಲದೆ ರಾಮನಿಲ್ಲ, ರಾಮನಿಲ್ಲದ ಆಂಜನೇಯ ಇಲ್ಲ. ನನ್ನ ಹೆಸರು ನಮ್ಮವ್ವ ಆಂಜನೇಯ ಅಂತ ಹೇಳಿ ಇಟ್ಟಿದ್ದಾಳೆ. ನಾನು ಹಿಂದೂ ಧರ್ಮದಲ್ಲಿ ಇದ್ದೇನೆ ಕಾಂಗ್ರೆಸ್‌ನಲ್ಲಿ(Congress) ಇದ್ದೇನೆ. ಕೆಲವರು ಒಂದು ಪಾರ್ಟಿಯಲ್ಲಿ ಇದ್ದುಕೊಂಡು ಹಿಂದೂಗಳನ್ನು ಖರೀದಿ ಮಾಡಿದ್ದೇವೆ ಎನ್ನುವ ರೀತಿಯಲ್ಲಿದ್ದಾರೆ. ಯಾವ ಧರ್ಮದಲ್ಲಿ(Religion) ಇರಬೇಕು ಅನ್ನೋದು ನನಗೆ ಬಿಟ್ಟದ್ದು. ವ್ಯಕ್ತಿಗೆ ಅವನಿಗೆ ಬೇಕಾದ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಇದೆ ಅಂತ ಹೇಳಿದ್ದಾರೆ.
ಬಲವಂತವಾಗಿ ಬೇಕಾದಷ್ಟು ಕಾಯ್ದೆಗಳನ್ನು ಮಾಡಿ ಹಾಕಿದ್ದಾರೆ. ಇವೆಲ್ಲ ಜನವಿರೋಧಿ ಕಾಯ್ದೆಗಳು. ನಾವು ಬಂದಮೇಲೆ ಅವುಗಳನ್ನೆಲ್ಲ ಸಾಯಿಸಿಬಿಡ್ತೇವೆ. ಜನಾಭಿಪ್ರಾಯಕ್ಕೆ ಮನ್ನಣೆ ಕೊಡುತ್ತೇನೆ ಎಂದ ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.
Karnataka Politics: ಕಾಂಗ್ರೆಸ್ ಶಾಸಕರನ್ನು ಬಿಜೆಪಿಯವರು ನಾಯಿ, ನರಿಗಳಂತೆ ಖರೀದಿಸಿದರು: ಆಂಜನೇಯ
ಯಾವ ಕಾರಣಕ್ಕೆ ಸತ್ತಿದ್ದಾರೆ ಅಂತ ಯಾರಿಗೆ ಗೊತ್ತು?
ಮಂಗಳೂರಿನಲ್ಲಿ ಆತ್ಮಹತ್ಯೆ(Mangaluru Suicide) ಮಾಡಿಕೊಂಡ ಬಾಗಲಕೋಟೆ(Bagalkot) ಜಿಲ್ಲೆಯ ಸುನಗ ಗ್ರಾಮದ ನಾಲ್ವರ ಆತ್ಮಹತ್ಯೆ ಪ್ರಕರಣ ವಿಚಾರದ ಬಗ್ಗೆಯೂ ಮಾತನಾಡಿ ಆಂಜನೇಯ, ಮತಾಂತರದ(Conversion) ಒತ್ತಾಯ ಇಲ್ಲ, ಪತ್ತಾಯ ಇಲ್ಲ, ಹಾಗೆ ಮಾಡಿರ್ತಾರೆ ಬಿಡ್ರಿ. ಪೋಲಿಸ್(police) ಇಲಾಖೆ ತನಿಖೆಯಾಗಿ ನ್ಯಾಯಾಂಗ ರಿಪೋರ್ಟ್ ಆಗಿ ನ್ಯಾಯಾಧೀಶರು(Judge) ಹೇಳಿದರೆ ಬಲವಂತ ಅಂತ ಒಪ್ಪಬಹುದು. ಯಾವ ಕಾರಣಕ್ಕೆ ಸತ್ತುಹೋಗಿದ್ದಾರೆ ಯಾರಿಗೆ ಗೊತ್ತು. ಅವರವರು ಧರ್ಮದ್ದು ಅವರು ಪ್ರಚಾರ ಮಾಡ್ತಾರೆ. ಕ್ರೈಸ್ತರು ತಮ್ಮ ಧರ್ಮದ್ದು ಸ್ವಲ್ಪ ಸ್ವಲ್ಪ ಪ್ರಚಾರ ಮಾಡ್ತಾರೆ. ಅವರ ಧರ್ಮ ಬೋಧನೆ ಮಾಡಿ ಅವರ ಧರ್ಮದ್ದು ಅವರು ಹೇಳ್ತಾರೆ. ನಮ್ಮ ಧರ್ಮವೂ ಚೆನ್ನಾಗಿದೆ ಅಂತ ಪ್ರಚಾರ ಮಾಡಿ ಇವರು ಉಳಿಸಿಕೊಳ್ಳಲು ಯಾರು ಬೇಡ ಅಂತಾರೆ. ಹಿಂದೂ ಧರ್ಮ ಪ್ರಚಾರ ಮಾಡಿ ಮನಸ್ಸು ಪರಿವರ್ತನೆ ಮಾಡಿ ನಮ್ಮ ಧರ್ಮದಲ್ಲೇ ಉಳಿಯುವಂತೆ ಮಾಡಲಿ ಅಂತ ಅಂತ ಹೇಳುವ ಮೂಲಕ ಘಟನೆ ಬಗ್ಗೆ ತಿಳಿಯದೆ ಬೇಜವಾಬ್ದಾರಿಯಾಗಿ ಉತ್ತರಿಸಿದ್ದಾರೆ
ಶಾಲಾ ಮಕ್ಕಳಿಗೆ(School Children) ಮೊಟ್ಟೆ(Eggs) ವಿತರಣೆ ವಿಚಾರ ಬಗ್ಗೆ ಮಾತನಾಡಿದ ಆಂಜನೇಯ ಅವರು, ಆಹಾರ ಆಯ್ಕೆ ಅವರ ಇಷ್ಟಕ್ಕೆ ಬಿಟ್ಟ ವಿಚಾರವಾಗಿದೆ. ವೀಕ್ ಇದ್ದ ಮಕ್ಕಳಿಗೆ ಮೊಟ್ಟೆ ತಿನ್ನುವಂತೆ ಡಾಕ್ಟರೇ ಸಲಹೆ ಕೊಡ್ತಾರೆ. ಅದನ್ನ ಸ್ವಾಮೀಜಿಗಳು(Swamijis) ವಿರೋಧ ಮಾಡೋದು ಸರಿಯಲ್ಲ. ಮೊಟ್ಟೆ ತಿನ್ನದ ಸಮುದಾಯವಿದ್ದರೆ ತಿನ್ನೋದು ಬೇಡಾ, ತಿನ್ನುವ ಮಕ್ಕಳಿದ್ದರೆ ತಿನ್ನಲಿ. ಸ್ವಾಮಿಗಳು ಸ್ವಲ್ಪ ಯೋಚನೆ ಮಾಡಿ ಹೇಳಿಕೆ ನೀಡಬೇಕು. ನಾನು ಎಲ್ಲ ಮಕ್ಕಳಿಗೂ ತಿನ್ನಿಸಿ ಅಂತಾ ಹೇಳಲ್ಲ. ಇಷ್ಟ ಪಡೋ ಮಕ್ಕಳಿಗೆ ಮೊಟ್ಟೆ ನೀಡಿ ಅಂತಾ ಹೇಳುತ್ತೇನೆ. ನಾವು ಸ್ಕೂಲ್‌ಗೆ ಹೋಗೋವಾಗ ಏನೇನೂ ಇರಲಿಲ್ಲ. ಬಡತನ ಸ್ಕೂಲ್‌ಗೆ ಉಪವಾಸ ಹೋಗ್ತಿದ್ದೇವು. ತಲೆ ತಿರುಗಿ ಬಿಳ್ತಿದ್ದೆವು. ಈಗಿನ ಶಾಲಾ ಮಕ್ಕಳಿಗೆ ಮಧ್ಯಾಹ್ನನದ ಬಿಸಿಯೂಟ, ಕ್ಷೀರಭಾಗ್ಯ, ಮೊಟ್ಟೆ ಎಲ್ಲವನ್ನೂ ನೀಡುತ್ತಿದೆ. ಸರ್ಕಾರ ಮಕ್ಕಳ ಆರೋಗ್ಯ(Health) ಗಮನಿಸಿ ಪೌಷ್ಠಿಕ ಆಹಾರ ನೀಡುತ್ತದೆ ಅಂತ ಹೇಳಿದ್ದಾರೆ.