ಮೀಸಲಾತಿ ವಿಚಾರದಲ್ಲಿ ಜನರಿಗೆ ಲಾಲಿಪಾಪ್ ನೀಡಿದ ಬಿಜೆಪಿ ಸರ್ಕಾರ: ಗೌರವ್ ವಲ್ಲಭ್
ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಸರ್ಕಾರ ಸುಪ್ರೀಂಕೋರ್ಚ್‌ಗೆ ಅಫಿಡವಿಟ್ ಸಲ್ಲಿಸಲು ವಿಫಲವಾಗಿದೆ. ಮೀಸಲಾತಿಯ ಲಾಲಿಪಪ್‌ನಲ್ಲಿ ಕೇವಲ ಕಡ್ಡಿ ಇದೆಯೇ ಹೊರತು ಬೇರೇನೂ ಇಲ್ಲ ಎಂದು ಎಐಸಿಸಿ ವಕ್ತಾರ ಗೌರವ್ ವಲ್ಲಭ್ ಆರೋಪಿಸಿದರು.
ಬೆಂಗಳೂರು (ಏ.19): ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಸರ್ಕಾರ ಸುಪ್ರೀಂಕೋರ್ಚ್‌ಗೆ ಅಫಿಡವಿಟ್ ಸಲ್ಲಿಸಲು ವಿಫಲವಾಗಿದೆ. ಮೀಸಲಾತಿಯ ಲಾಲಿಪಪ್‌ನಲ್ಲಿ ಕೇವಲ ಕಡ್ಡಿ ಇದೆಯೇ ಹೊರತು ಬೇರೇನೂ ಇಲ್ಲ ಎಂದು ಎಐಸಿಸಿ ವಕ್ತಾರ ಗೌರವ್ ವಲ್ಲಭ್ ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಚ್‌ಗೆ ರಾಜ್ಯ ಸರ್ಕಾರ ಅಫಿಡವಿಟ್ ಸಲ್ಲಿಸಲು ವಿಫಲವಾಗಿದೆ. ಅಫಿಡವಿಟ್ ಸಲ್ಲಿಸುವವರೆಗೂ ಸರ್ಕಾರದ ಆದೇಶ ಜಾರಿಗೆ ಬರಲು ಸಾಧ್ಯವೇ ಇಲ್ಲ. ಆ ಮೂಲಕ ಮೀಸಲಾತಿ ವಿಚಾರದಲ್ಲಿ ಬಿಜೆಪಿ ಸರ್ಕಾರ ರಾಜ್ಯದ ಜನರಿಗೆ ಲಾಲಿಪಪ್ ನೀಡಿದ್ದು, ಅದರಲ್ಲಿ ಕೇವಲ ಕಡ್ಡಿ ಇದೆಯೇ ಹೊರತು ಬೇರೇನೂ ಇಲ್ಲವಾಗಿದೆ ಎಂದು ಟೀಕಿಸಿದರು.
ಮೀಸಲಾತಿ ಹೆಸರಿನಲ್ಲಿ ಲಿಂಗಾಯತರು, ಒಕ್ಕಲಿಗರು, ಪರಿಶಿಷ್ಟಜಾತಿ-ಪಂಗಡ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರಿಗೆ ಮಾಡಿದ ಮೋಸ ಮತ್ತೊಮ್ಮೆ ಸುಪ್ರೀಂ ಕೋರ್ಚ್‌ನಲ್ಲಿ ಬಯಲಾಗಿದೆ. ಈ ಮೀಸಲಾತಿ ಆಧಾರದಲ್ಲಿ ಯಾವುದೇ ನೇಮಕಾತಿ ಮಾಡಿಕೊಳ್ಳುವುದಿಲ್ಲ ಎಂದು ಸರ್ಕಾರ ಹೇಳಿದೆ. ಯಾವುದೇ ತಯಾರಿ, ಯೋಜನೆ ಇಲ್ಲದೆ ಕೇವಲ ರಾಜ್ಯದ 6.50 ಕೋಟಿ ಕನ್ನಡಿಗರಿಗೆ ದ್ರೋಹ ಬಗೆಯಲು ಬಿಜೆಪಿ ಸರ್ಕಾರ ಮೀಸಲಾತಿ ಹೆಚ್ಚಳ ಆದೇಶ ನೀಡಿತ್ತು ಎಂಬುದು ಇದರಿಂದ ಬಹಿರಂಗವಾಗಿದೆ ಎಂದು ತರಾಟೆ ತೆಗೆದುಕೊಂಡರು.
ಕಾಂಗ್ರೆಸ್ ಅಭ್ಯರ್ಥಿ ನನಗೆ ಲೆಕ್ಕಕ್ಕಿಲ್ಲ: ಶಾಸಕ ಎಂ.ಸತೀಶ್ ರೆಡ್ಡಿ
ಟ್ರಬಲ್ ಎಂಜಿನ್ ಸರ್ಕಾರ: ಕಳೆದ 90 ದಿನದಲ್ಲಿ ಸರ್ಕಾರವು ಮೀಸಲಾತಿ ವರ್ಗೀಕರಣವನ್ನು 3 ಬಾರಿ ಬದಲಿಸಿತ್ತು. ಇದು ಸರ್ಕಾರದ ಅಪ್ರಾಮಾಣಿಕತೆಗೆ ಸಾಕ್ಷಿಯಾಗಿದೆ. ಸಮಾಜಗಳನ್ನು ವಿಭಜಿಸಿ ಜನರಲ್ಲಿ ದ್ವೇಷ ಬಿತ್ತುವ ಬಸವರಾಜ ಬೊಮ್ಮಾಯಿ ಸರ್ಕಾರದ ಷಡ್ಯಂತ್ರ ಸ್ಪಷ್ಟವಾಗಿ ಬಹಿರಂಗವಾಗಿದೆ. ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದ ಬಸವರಾಜ ಬೊಮ್ಮಾಯಿ ಅವರ ಸರ್ಕಾರಗಳು ಜಾತಿ ಗಣತಿ ಅಂಕಿ ಅಂಶ ಬಹಿರಂಗಪಡಿಸುತ್ತಿಲ್ಲ. ಮಾತೆತ್ತಿದರೆ ಡಬಲ್ ಎಂಜಿನ್ ಸರ್ಕಾರ ಎನ್ನುತ್ತಾರೆ. ಆದರೆ ಈ ಎಂಜಿನ್‌ಗಳು ಜನರಿಗೆ ಮೋಸ ಮಾಡುತ್ತಿದ್ದು, ಇವು ಟ್ರಬಲ್ ಎಂಜಿನ್ ಸರ್ಕಾರವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಇದ್ದರು.
ಮೀಸಲಾತಿ ಉಳಿಸುವ ನಾಯಕತ್ವ ಬೆಂಬಲಿಸಿ: ಪ್ರಸ್ತುತ ಚುನಾವಣೆಯಲ್ಲಿ ಸಾಮಾಜಿಕ ನ್ಯಾಯವನ್ನು ಪೋಷಿಸುವ, ಮೀಸಲಾತಿಯನ್ನು ಉಳಿಸುವ ನಾಯಕತ್ವವವನ್ನು ಬೆಂಬಲಿಸಬೇಕಿದೆ ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಸಂದೇಶ್ ಸಲಹೆ ನೀಡಿದರು. ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆ ಅಂಗವಾಗಿ ನಡೆದ ಹಿಂದುಳಿದ ವರ್ಗಗಳ ನಾಯಕತ್ವ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು.
ಅತೀ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ಅತ್ಯಗತ್ಯವಾಗಿದೆ. ಇದರ ಸಂರಕ್ಷಣೆ ಹಿಂದುಳಿದವರ ಹೊಣೆಯಾಗಿದೆ. ಇದಕ್ಕಾಗಿ ಅಸಂಘಟಿತ ಹಿಂದುಳಿದ ಸಮಾಜಗಳು ಮೀಸಲಾತಿ ರಕ್ಷಣೆಗಾಗಿ ಮತದಾನವನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳಬೇಕು. ಜಾತಿ ಹೆಸರಲ್ಲಿ ವಿಭಜನೆಗೊಂಡಿರುವ ಹಿಂದುಳಿದ ಸಮಾಜಗಳು ವರ್ಗದ ಹೆಸರಲ್ಲಿ ಸಂಘಟಿತರಾಗಬೇಕು. ರಾಜಕೀಯವಾಗಿ ಒಗ್ಗೂಡಿ ಒಮ್ಮತದ ತೀರ್ಮಾನವನ್ನು ತೆಗೆದುಕೊಳ್ಳುವುದರ ಮೂಲಕ ಪ್ರಸ್ತುತ ಚುನಾವಣೆಯಲ್ಲಿ ನಿರ್ಣಾಯಕ ಶಕ್ತಿಯಾಗಬೇಕು ಎಂದು ಹೇಳಿದರು.
ಶೆಟ್ಟರ್ ಸೇರಿ ಏಳು ಮಂದಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆ: 3 ಹೊಸಬರಿಗೆ ಮಣೆ
ಹಿಂದುಳಿದ ವರ್ಗಗಳ ಜನಸಂಖ್ಯೆ ಎರಡೂಕಾಲು ಕೋಟಿ ಇದ್ದರೂ ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ ಮಾನ್ಯತೆ ಸಿಗದಿರುವುದು ದುರುದೃಷ್ಟಕರ. ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮೀಸಲಾತಿ ಇಲ್ಲದ ಕಾರಣ ಹಿಂದುಳಿದ ವರ್ಗದವರ ಸಂಖ್ಯೆ ಗಣನೀಯವಾಗಿ ಕಡಿಮೆ ಪ್ರಮಾಣದಲ್ಲಿದೆ. ದೇವರಾಜ ಅರಸು ಅವಧಿಯಲ್ಲಿ 60 ರಿಂದ 70 ಮಂದಿ ಹಿಂದುಳಿದವರು ಶಾಸಕರಾಗಿದ್ದರು. ಆದರೆ ಇಂದು 24ಕ್ಕೆ ಇಳಿದಿದೆ ಎಂದು ವಿಷಾದಿಸಿದರು. ಸ್ಥಳೀಯ ಸಂಸ್ಥೆಗಳ ಮಾದರಿಯಲ್ಲಿ ಲೋಕಸಭೆ ಮತ್ತು ವಿಧಾನಸಭೆಗೆ ಹಿಂದುಳಿದವರಿಗೆ ಮೀಸಲಾತಿ ಸಿಗಬೇಕು. ಅಲ್ಲಿಯವರೆಗೂ ಪ್ರಮುಖ ರಾಜಕೀಯ ಪಕ್ಷಗಳು ಸ್ವಯಂಪ್ರೇರಣೆಯಿಂದ ಹಿಂದುಳಿದವರಿಗೆ ಟಿಕೆಚ್ ನೀಡಬೇಕು. ಆದರೆ, ಅಂತಹ ಪ್ರಯತ್ನಗಳು ನಡೆಯುತ್ತಿಲ್ಲ. ಆದ್ದರಿಂದ ಹಿಂದುಳಿದವರ ಪರವಾಗಿ ಧನಿ ಎತ್ತುವವರನ್ನು ಆಯ್ಕೆ ಮಾಡುವ ಪ್ರಜ್ಞಾವಂತಿಕೆಯನ್ನು ಬೆಳೆಸಿಕೊಳ್ಳಬೇಕು ಎಂದರು.