Asianet Suvarna News Asianet Suvarna News

ದೆಹಲಿಗೆ ತೆರಳಿದ ಪರಮೇಶ್ವರ್‌: ಸೋನಿಯಾ ಭೇಟಿ ಯತ್ನ

ಚುನಾವಣಾ ಘೋಷಣೆ ಪ್ರಕಟಿಸುವ ವಿಚಾರದಲ್ಲಿ ತಮ್ಮನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂಬ ಕಾರಣಕ್ಕೆ ಬೇಸರಗೊಂಡಿರುವ ಕೆಪಿಸಿಸಿ ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಡಾ.ಜಿ.ಪರಮೇಶ್ವರ್‌ ಅವರು ಭಾನುವಾರ ತಡರಾತ್ರಿ ದೆಹಲಿಗೆ ತೆರಳಲಿದ್ದಾರೆ. 

Congress Leader Dr G Parameshwar To Visit Delhi To Meet Sonia Gandhi gvd
Author
First Published Feb 5, 2023, 6:23 AM IST

ಬೆಂಗಳೂರು (ಫೆ.05): ಚುನಾವಣಾ ಘೋಷಣೆ ಪ್ರಕಟಿಸುವ ವಿಚಾರದಲ್ಲಿ ತಮ್ಮನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂಬ ಕಾರಣಕ್ಕೆ ಬೇಸರಗೊಂಡಿರುವ ಕೆಪಿಸಿಸಿ ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಡಾ.ಜಿ.ಪರಮೇಶ್ವರ್‌ ಅವರು ಭಾನುವಾರ ತಡರಾತ್ರಿ ದೆಹಲಿಗೆ ತೆರಳಲಿದ್ದಾರೆ. ಮೂಲಗಳ ಪ್ರಕಾರ ಸೋಮವಾರ ಎಐಸಿಸಿ ವರಿಷ್ಠೆ ಸೋನಿಯಾ ಗಾಂಧಿ ಅವರ ಭೇಟಿಗೆ ಕಾಲಾವಕಾಶವನ್ನು ಪರಮೇಶ್ವರ್‌ ಕೋರಿದ್ದು, ಈ ಹಿನ್ನೆಲೆಯಲ್ಲಿ ಅವರು ದೆಹಲಿಗೆ ತೆರಳಲಿದ್ದಾರೆ.

ತಮ್ಮ ದೆಹಲಿ ಭೇಟಿಗೆ ತುಮಕೂರಿನಲ್ಲಿ ಹೊಸದಾಗಿ ನಿರ್ಮಿಸಿರುವ ಕಾಂಗ್ರೆಸ್‌ ಭವನ ಉದ್ಘಾಟನೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಹ್ವಾನಿಸಲು ತೆರಳುತ್ತಿರುವುದಾಗಿ ಪರಮೇಶ್ವರ್‌ ಆಪ್ತರು ಹೇಳುತ್ತಾರೆ. ಇದೇ ವೇಳೆ ಸೋನಿಯಾಗಾಂಧಿ ಭೇಟಿಗೂ ಕಾಲಾವಕಾಶ ಕೋರಿರುವುದು ಮೂಲಗಳಿಂದ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಪರಮೇಶ್ವರ್‌ ಅವರ ದೆಹಲಿ ಭೇಟಿ ಕುತೂಹಲ ಕೆರಳಿಸಿದೆ.

ಭಿನ್ನಾಭಿಪ್ರಾಯ ಇದೆ, ಅಸಮಾಧಾನ ಅಲ್ಲ: ಪರಮೇಶ್ವರ್‌ ಮೊದಲ ಬಹಿರಂಗ ಹೇಳಿಕೆ

ಪ್ರಣಾಳಿಕೆ ಸಮಿತಿ ಅಧ್ಯಕ್ಷರಾದ ತಮ್ಮನ್ನು ನಿರ್ಲಕ್ಷಿಸಿ ಚುನಾವಣಾ ಘೋಷಣೆಗಳನ್ನು ಮಾಡಲಾಗುತ್ತಿದೆ ಎಂದು ಪರಮೇಶ್ವರ್‌ ಬೇಸರಗೊಂಡಿದ್ದರು. ರಾಜೀನಾಮೆ ಸಹ ನೀಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಇತ್ತೀಚೆಗೆ ಪರಮೇಶ್ವರ್‌ ಅವರನ್ನು ಭೇಟಿ ಮಾಡಿ ಮನವೊಲಿಕೆ ಯತ್ನ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರಣಾಳಿಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ: ಕಾಂಗ್ರೆಸ್‌ನ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನಾನು ರಾಜೀನಾಮೆ ನೀಡಿದ್ದಾಗಿ ಸುದ್ದಿ ಹರಿದಾಡಿತ್ತು. ಆದರೆ ಅದೆಲ್ಲ ಸುಳ್ಳು. ಕೆಲವರು ನಮ್ಮಲ್ಲಿ ಅಸಮಾಧಾನ ಮೂಡಿಸಲು ಈ ರೀತಿ ಸುದ್ದಿ ಹಬ್ಬಿಸುತ್ತಿದ್ದಾರೆಂದು. ಕಾಂಗ್ರೆಸ್‌ನಲ್ಲಿ ಯಾರೂ ನನ್ನನ್ನು ಸೈಡ್‌ಲೈನ್‌ ಮಾಡಿಲ್ಲ. ಹಾಗೆ ಮಾಡಿದ್ದರೆ ಪ್ರಣಾಳಿಕೆ ಸಮಿತಿ ಅಧ್ಯಕ್ಷರನ್ನಾಗಿ ಮಾಡುತ್ತಿದ್ದರಾ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್‌ ಹೊರಡಿಸಿದ ಎಲ್ಲಾ ಪ್ರಣಾಳಿಕೆಗಳು ನನ್ನ ಗಮನಕ್ಕೆ ಬಂದಿದ್ದು, ಅದನ್ನು ಎಲ್ಲರೂ ಒಟ್ಟಿಗೆ ಸೇರಿ ಮಾಡಿದ್ದೇವೆ. ಇನ್ನು ಕೆಲ ವಿಚಾರಗಳ ಬಗ್ಗೆ ಸುರ್ಜೆವಾಲಾ ಅವರ ಜೊತೆ ಚರ್ಚಿಸಿದ್ದೇನೆ. ನಾವು ಯಾವ ರೀತಿ ಚುನಾವಣೆಗೆ ಹೋಗಬೇಕು, ಚುನಾವಣೆಗೆ ನಮ್ಮ ನೀತಿ ಏನು ಇರಬೇಕು? ಅಲ್ಲದೆ, ಚುನಾವಣಾ ಪ್ರಣಾಳಿಕೆಗಳು ಹೇಗಿರಬೇಕು ಎನ್ನುವುದರ ಬಗ್ಗೆ ಚರ್ಚೆ ನಡೆಸಿದ್ದೇವೆ. ಆದರೆ ಇದನ್ನೇ ಬೇರೆ ರೀತಿ ಬಿಂಬಿಸಲಾಗಿದೆ ಎಂದರು.

ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಪರಮೇಶ್ವರ್‌ ರಾಜೀನಾಮೆ: ಮನವೊಲಿಕೆಗೆ ನಾಯಕರ ಕಸರತ್ತು

ಸೈಡ್‌ಲೈನ್‌ ಮಾಡಿಲ್ಲ: ಕಾಂಗ್ರೆಸ್‌ನಲ್ಲಿ ನನ್ನನ್ನು ಯಾರೂ ಸೈಡ್‌ಲೈನ್‌ ಮಾಡಿಲ್ಲ. ಹಾಗೆ ಮಾಡಿದರೆ ಪ್ರಣಾಳಿಕೆ ಸಮಿತಿ ಅಧ್ಯಕ್ಷರನ್ನಾಗಿ ಮಾಡುತ್ತಿದ್ರಾ ಎಂದು ಪ್ರಶ್ನಿಸಿದ ಪರಮೇಶ್ವರ್‌, ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಮ್ಮ ಪಕ್ಷದಿಂದ ಈಗಾಗಲೇ ಒಂದು ಸ್ಯಾಂಪಲ್‌ ಸಮೀಕ್ಷೆ ನಡೆಸಿದ್ದು, ಆ ಸಮೀಕ್ಷೆಯಲ್ಲಿ ಬಂದ ಫಲಿತಾಂಶದ ಆಧಾರದ ಮೇಲೆ ಕೆಲ ಬದಲಾವಣೆ ಮಾಡಲು ತೀರ್ಮಾನಿಸಲಾಗಿದೆ ಎಂದರು.

Follow Us:
Download App:
  • android
  • ios