Asianet Suvarna News Asianet Suvarna News

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕಪಾಠ: ಮೇಟಿ

ಐದು ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲಾಗುತ್ತಿದೆ. ನಾಡಿನ ಜನತೆ ಸರಕಾರದ ಮೇಲೆ ಉತ್ತಮ ಅಭಿಪ್ರಾಯವ ಹೊಂದುವ ಜತೆಗೆ ಸಾಕಷ್ಟು ವಿಶ್ವಾಸ ಇಟ್ಟುಕೊಂಡಿದ್ದಾರೆ. ಇದು ಬಿಜೆಪಿ ನಾಯಕರಲ್ಲಿ ತಳಮಳ ಶುರುವಾಗಿದೆ ಎಂದ ಕಾಂಗ್ರೆಸ್‌ ನಾಯಕ ಡಾ. ಭೀಮಣ್ಣ ಮೇಟಿ 

Congress Leader Dr Bhimanna Meti Slams BJP grg
Author
First Published Aug 13, 2023, 8:10 PM IST

ಯಾದಗಿರಿ(ಆ.13): ರಾಜ್ಯ ಸರಕಾರ ಉತ್ತಮವಾಗಿ ಆಡಳಿತ ನೀಡುತ್ತಿರುವುದನ್ನು ಸಹಿಸಿಕೊಳ್ಳಲು ಬಿಜೆಪಿಗೆ ಆಗುತ್ತಿಲ್ಲ. ಹೀಗಾಗಿಯೇ ಸುಖಾಸುಮ್ಮನೇ ಆರೋಪ ಮಾಡುತ್ತಿದ್ದಾರೆ. ಇವರಿಗೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಾಡಿನ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ಡಾ. ಭೀಮಣ್ಣ ಮೇಟಿ ಹೇಳಿದರು.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಐದು ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲಾಗುತ್ತಿದೆ. ನಾಡಿನ ಜನತೆ ಸರಕಾರದ ಮೇಲೆ ಉತ್ತಮ ಅಭಿಪ್ರಾಯವ ಹೊಂದುವ ಜತೆಗೆ ಸಾಕಷ್ಟು ವಿಶ್ವಾಸ ಇಟ್ಟುಕೊಂಡಿದ್ದಾರೆ. ಇದು ಬಿಜೆಪಿ ನಾಯಕರಲ್ಲಿ ತಳಮಳ ಶುರುವಾಗಿದೆ ಎಂದರು.

ಯಾದಗಿರಿ: ಬಸವಸಾಗರ ಜಲಾಶಯ ಭರ್ತಿ, ಸಚಿವ ದರ್ಶನಾಪುರ್‌ ಬಾಗಿನ ಅರ್ಪಣೆ

ಸಚಿವರು ಪಾರದರ್ಶಕವಾದ ಆಡಳಿತ ನೀಡುತ್ತಿದ್ದಾರೆ. ಆದರೆ, ಅವರ ಮೇಲೆ ಬಿಜೆಪಿ ಯಾವುದೇ ದಾಖಲಾತಿಗಳು ಇಲ್ಲದೇ ಕಮಿಷನ್‌ ಆರೋಪ ಮಾಡುತ್ತಿದ್ದಾರೆ. ಇದು ಅತ್ಯಂತ ನಾಚಿಗೇಡು ಸಂಗತಿ ಆಗಿದೆ. ಹಿಂದೆ ಇವರು ಆಡಳಿತ ಇದ್ದಾಗ ನಡೆಸಿದ ಶೇ.40ರಷ್ಟುಕಮಿಷನ್‌ ಕುರಿತಂತೆ ತನಿಖೆ ಕೂಡ ನಡೆಸಲಾಗುತ್ತಿದೆ. ಇದು ಅವರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಗಣಮಿಸಿದೆ. ಹೀಗಾಗಿಯೇ ಜನರನ್ನು ದಾರಿ ತಪ್ಪಿಸುವಂತಹ ಕೆಲಸ ಮಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದ ಬಳಿಕ ನುಡಿದಂತೆ ನಡೆಯಲಾಗುತ್ತಿದೆ. ಐದು ಗ್ಯಾರಂಟಿಗಳನ್ನು ಸಹ ಅನುಷ್ಠಾನ ಮಾಡಲಾಗುತ್ತಿದೆ. ಬಿಜೆಪಿ ಅವರು ಬರೀ ಸುಳ್ಳು ಹೇಳಿ ಆಡಳಿತ ನಡೆಸಿದ ಪರಿಣಾಮವಾಗಿ ಅವರಿಗೆ ಜನರು ಸೋಲಿನ ರುಚಿ ತೋರ್ಪಡಿಸಿದ್ದಾರೆ ಎಂದಿದ್ದಾರೆ.

Follow Us:
Download App:
  • android
  • ios