ವಿಜಯೇಂದ್ರ ಜೊತೆ ಡಿಕೆಶಿ ಒಪ್ಪಂದ ಆರೋಪ : ಯೋಗ್ಯತೆ ಇಲ್ಲ ಎಂದ ಡಿಕೆಸು
- ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ಸಂಸದ ಡಿ.ಕೆ.ಸುರೇಶ್ ಕಿಡಿಕಾರಿದ್ದಾರೆ
- ಎಲ್ಲಾ ಪಾರ್ಟಿ ನೋಡಿದ್ದರಲ್ಲಾ ಅದಕ್ಕೆ ಹೇಳಿದ್ದಾರೆ ಎಂದು ಗರಂ
- ಡಿಕೆಶಿ ಬಗ್ಗೆ ಮಾತನಾಡುವ ಯೋಗ್ಯತೆ ಅವರಲ್ಲಿಲ್ಲ ಎಂದ ಸುರೇಶ್
ರಾಮನಗರ (ಮೇ.30): ಮೂರು ಪಾರ್ಟಿ ಸರ್ಕಾರ ಇದೇ ರಾಜ್ಯದಲ್ಲಿ ಎಂಬ ಯೋಗೇಶ್ವರ್ ಹೇಳಿಕೆ ಸಂಬಂಧ ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ಸಂಸದ ಡಿ.ಕೆ.ಸುರೇಶ್ ಕಿಡಿಕಾರಿದ್ದಾರೆ.
ರಾಮನಗರದ ಬಿಡದಿಯಲ್ಲಿಂದು ಮಾತನಾಡಿದ ಸಂಸದ ಡಿ.ಕೆ.ಸುರೇಶ್ ಅವರು ಎಲ್ಲಾ ಪಾರ್ಟಿ ನೋಡಿದ್ದರಲ್ಲಾ ಅದಕ್ಕೆ ಹೇಳಿದ್ದಾರೆ ಎಂದರು.
ವಿಜಯೇಂದ್ರ ಜೊತೆಗೆ ಡಿಕೆಶಿ ರಾಜಕೀಯ ಒಪ್ಪಂದ ಎಂಬ ಹೇಳಿಕೆ ಸಂಬಂಧವೂ ಪ್ರತಿಕ್ರಿಯಿಸಿದ ಸುರೇಶ್ ವಿಜಯೇಂದ್ರ ಜೊತೆ ಸರ್ಕಾರ ತರಲು ಪ್ಲ್ಯಾನ್ ಮಾಡಿದವರು ಯಾರು ? ದೆಹಲಿಗೆ ಹೋದವರು ಯಾರು, ಶಾಸಕರಿಗೆ ಹಣ ಕೊಟ್ಟೋರು ಯಾರು ? ಎಲ್ಲಾ ಮಾಹಿತಿ ಅವರ ಬಳಿಯೇ ಇದೇ, ಅದರ ಬಗ್ಗೆ ಮಾತನಾಡಲಿ ಎಂದರು.
ಯೋಗಿ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸಿಎಂಗೆ ಹೇಳಿದ ಡಿಕೆಶಿ ...
ಅಲ್ಲದೆ ಡಿ.ಕೆ.ಶಿವಕುಮಾರ್ ಬಗ್ಗೆ ಮಾತನಾಡುವ ಯೋಗ್ಯತೆ, ಅವಶ್ಯಕತೆ ಇಲ್ಲ ಎಂದು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಏನೋ ಒಂದು ಕೆಲಸ ಕೊಟ್ಟಿದ್ದಾರೆ, ಮಂತ್ರಿ ಮಾಡಿದ್ದಾರೆ. ಮೊದಲು ಆ ಯೋಗ್ಯತೆಯನ್ನ ಉಳಿಸಿಕೊಂಡು ಹೋಗಲಿ ಎಂದರು.
ರಾಮನಗರ ಜಿಲ್ಲೆಯಲ್ಲಿ ಹೆಚ್ಡಿಕೆ - ಡಿಕೆಶಿ ಪಾರುಪತ್ಯ ಎಂಬ ಹೇಳಿಕೆ ಸಂಬಂಧ ಮಾತನಾಡಿದ ಡಿ.ಕೆ.ಸುರೇಶ್ ಅದನ್ನ ಡಿಸಿಎಂ ಅಶ್ವತ್ಥ್ ನಾರಾಯಣ ಅವರ ಬಳಿ ಕೇಳಲಿ. ಜಿಲ್ಲೆಯಲ್ಲಿ ಯಾರ ಅಧಿಕಾರ ನಡೆಯುತ್ತಿದೆ ಎಂದು ಕೇಳಲಿ. ಸದ್ಯಕ್ಕೆ ನಾವು ಎಲ್ಲರಿಂದಲೂ ದೂರ ಇದ್ದೇವೆ . ನಾವು ಯಾವ ವಿಚಾರಕ್ಕೂ ತಲೆ ಹಾಕುತ್ತಿಲ್ಲವೆಂದು ಡಿ.ಕೆ ಸುರೇಶ್ ಹೇಳಿದರು.