ನವದೆಹಲಿ (ಜ.26):  ಮಾಜಿ ಸಚಿವ ಡಿಕೆ ಶಿವಕುಮಾರ್ ಭಾನುವಾರ ದೆಹಲಿಯ ತುಘಲಕ್ ರಸ್ತೆ ಹಾಗೂ ಖಾನ್ ಮಾರ್ಕೆಟ್ ಠಾಣೆಗಳಿಗೆ ಭೇಟಿ ನೀಡಿದ್ದಾರೆ.

 ತುಘಲಕ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಪಿಎಸ್ಒ ಗೋವಿಂದ್ ಚೌಹಾಣ್ ಹಾಗೂ ಖಾನ್ ಮಾರ್ಕೆಟ್ ಪೊಲೀಸ್ ಠಾಣೆಯ ಸುನೀಲ್ ಕುಮಾರ್ ಅವರನ್ನು ಮಾಜಿ ಸಚಿವ ಡಿಕೆ ಶಿವಕುಮಾರ್ ಭಾನುವಾರ ಭೇಟಿ ಮಾಡಿ ಧನ್ಯವಾದ ತಿಳಿಸಿದ್ದಾರೆ.

ಮಿಣಿ ಮಿಣಿ ಮಿಂಚಿದ ಕನ್ನಡ ಕ್ವೀನ್ಸ್, ಕಿವೀಸ್ ಮಣಿಸಿದ ಕೊಹ್ಲಿ ಬಾಯ್ಸ್; ಜ.26ರ ಟಾಪ್ 10 ಸುದ್ದಿ!

 ದೆಹಲಿ ನಿವಾಸದಲ್ಲಿ ಸಿಕ್ಕ ಅಕ್ರಮ ಹಣದ ಕುರಿತು ಇಡಿ ವಿಚಾರಣೆ ವೇಳೆ ತುಘಲಕ್ ಪೊಲೀಸ್ ಠಾಣೆಯಲ್ಲಿ ಡಿಕೆಶಿ ಇದ್ದರು. ಈ ವೇಳೆ ಡಿಕೆಶಿಗೆ ಅಲ್ಲಿನ ಪೊಲೀಸರು ಒಳ್ಳೆ ರೀತಿಯಿಂದ ನೋಡಿಕೊಂಡಿದ್ದಕ್ಕೆ ಅಭಿನಂದನೆ ತಿಳಿಸಲು ಡಿಕೆಶಿ ತುಘಲಕ್ ಪೊಲೀಸ್ ಠಾಣೆ ಹೋಗಿದ್ದಾರೆ. ಬಳಿಕ ಗಣರಾಜ್ಯೋತ್ಸವ ಪೆರೇಡ್ ವೀಕ್ಷಿಸಲು ತೆರಳಿದರು.

ಐಟಿ ವಿಚಾರಣೆ ವೇಳೆ 13 ದಿನಗಳ ಕಾಲ ತುಘಲಕ್ ಪೊಲೀಸ್ ಠಾಣೆಯಲ್ಲಿಯಲ್ಲಿದ್ದ ಸಂದರ್ಭದಲ್ಲಿ ನನಗೆ ನೈತಿಕ ಬೆಂಬಲ ನೀಡಿದ್ದಕ್ಕಾಗಿ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ಧನ್ಯವಾದ ತಿಳಿಸಿದ್ದೇನೆಂದು ಸ್ವತಃ ಡಿಕೆ ಶಿವಕುಮಾರ್ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.