ನವದೆಹಲಿ, (ಡಿ. 09): ಮತದಾರರು ನೀಡಿದ ತೀರ್ಪಿಗೆ ತಲೆ ಬಾಗಲೇಬೇಕು, 15 ಕ್ಷೇತ್ರಗಳಲ್ಲಿ ಯಾವ ರೀತಿ ಫಲಿತಾಂಶ ಬಂದರೂ ಸ್ವೀಕರಿಸಲು ಸಿದ್ಧವಾಗಿದ್ದೇವೆ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಹತಾಶೆಯ ಮಾತುಗಳನ್ನಾಡಿದರು.

ಇಂದು (ಸೋಮವಾರ) ನವದೆಹಲಿಯಲ್ಲಿ ಎನ್‌ಎನ್‌ಐ ಜತೆ ಮಾತನಾಡಿದ ಡಿಕೆಶಿ, ಅನರ್ಹರಂದು ಜನರು ಒಪ್ಪಿಕೊಂಡು ಆಶೀರ್ವದಿಸಿದರೆ, ನಾವು ನಮ್ಮ ಸೋಲೊಪ್ಪಿಕೊಳ್ಳಬೇಕಾಗುತ್ತದೆ. ಇದರಿಂದ ಹಿನ್ನಡೆಯಾಗಿದೆ ಎನ್ನಲಾಗುವುದಿಲ್ಲ ಎಂದು ಹೇಳಿದರು.

LIVE: ಮತ ಎಣಿಕೆ ಆರಂಭ, ಬಿಜೆಪಿಯದ್ದೇ ಪಾರಮ್ಯ

 ಹವಾಲಾ ಹಣ ಪ್ರಕರಣದಲ್ಲಿ ಜೈಲಿಗೆ ಹೋಗಿಬಂದ ಡಿಕೆ ಶಿವಕುಮಾರ್ ಅವರಿಗೆ ಈ ಹಿಂದೆ ನಡೆದಿದ್ದ ಉಪಚುನಾವಣೆಗಳಲ್ಲಿದ್ದ ಹುಮ್ಮಸ್ಸು, ಈ ಬಾರಿ ವಿಧಾನಸಭೆ ಉಪಚುನಾವಣೆ ಇರಲಿಲ್ಲ.

ಅಭ್ಯರ್ಥಿಗಳ ಒತ್ತಾಯದ ಮೇರೆಗೆ ಕೆಲ ಕ್ಷೇತ್ರಗಳಲ್ಲಿ ಮಾತ್ರ ಪ್ರಚಾರ ಮಾಡಿದ್ದರು. ಆದ್ರೆ, ಈ ಮೊದಲು ಇದ್ದ ಖದರ್ ಈ ಬೈ ಎಲೆಕ್ಷನ್‌ಲ್ಲಿ ಇದ್ದಿಲ್ಲ.

ಸದ್ಯದ ಮಾಹಿತಿ ಪ್ರಕಾರ 15 ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ಕ್ಷೇತ್ರಗಳಲ್ಲಿ ಬಜೆಪಿ ಗೆಲುವಿನತ್ತ ದಾಪುಗಾಲಿಟ್ಟಿದ್ದು, ಬಿಜೆಪಿ ಸರ್ಕಾರ ಸೇಫ್ ಆಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

ಉಪಚುನಾವಣೆಯಲ್ಲಿ ಅನರ್ಹರನ್ನು ಸೋಲಿಸಿ ಪ್ರಜಾಪ್ರಭುತ್ವ ಸೋಲಿಸಿ ಎಂದು ಪ್ರಚಾರಕ್ಕಿಳಿದ್ದ ಕಾಂಗ್ರೆಸ್‌ಗೆ ಭಾರೀ ಮುಖಭಂಗವಾಗಿದೆ.  
ಕರ್ನಾಟಕ ವಿಧಾನಸಭೆಯಲ್ಲಿ ಬಿಜೆಪಿ 105 ಸದಸ್ಯ ಬಲ ಹೊಂದಿದೆ. ವಿಧಾನಸಭೆ ಸದಸ್ಯ ಬಲ 112 ಆಗಲು ಬಿಜೆಪಿ 7 ಸ್ಥಾನವನ್ನು ಗೆಲ್ಲಲೇಬೇಕು. ಆಗ ಮಾತ್ರ ಸರ್ಕಾರ ಬಹುಮತ ಪಡೆಯಲು ಸಾಧ್ಯ. 

ಇನ್ನೂ 2 ಕ್ಷೇತ್ರದ ಉಪ ಚುನಾವಣೆ (ಮಸ್ಕಿ, ರಾಜರಾಜೇಶ್ವರಿನಗರ) ನಡೆಯಬೇಕು. ಆದ್ದರಿಂದ, ಸೋಮವಾರ ಫಲಿತಾಂಶ ಪ್ರಕಟಗೊಂಡ ಬಳಿಕ ಸದನದ ಬಲ 222ಕ್ಕೆ ಏರಿಕೆಯಾಗಲಿದೆ.