ರಾಜ್ಯ ಮತ್ತು ಕೇಂದ್ರದಲ್ಲಿ ಆಳ್ವಿಕೆ ನಡೆಸುತ್ತಿರುವ ಬಿಜೆಪಿ ಸರ್ಕಾರಗಳು ಶಾಪಗ್ರಸ್ತ ಸರ್ಕಾರ ಬೆಲೆ ಏರಿಸಿ ಜನರ ಹಸಿ ಗಾಯದ ಮೇಲೆ ಬರೆ ಎಳೆದಿವೆ  ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಆಕ್ರೋಶ 

ಬೆಂಗಳೂರು (ಜೂ.15): ರಾಜ್ಯ ಮತ್ತು ಕೇಂದ್ರದಲ್ಲಿ ಆಳ್ವಿಕೆ ನಡೆಸುತ್ತಿರುವ ಬಿಜೆಪಿ ಸರ್ಕಾರಗಳು ಶಾಪಗ್ರಸ್ತ ಸರ್ಕಾರಗಳಾಗಿವೆ. ಜನರ ಸಂಕಷ್ಟಕ್ಕೆ ನೆರವಾಗಬೇಕಾದ ಬಿಜೆಪಿಯ ಡಬಲ್ ಎಂಜಿನ್‌ ಸರ್ಕಾರಗಳು ಬೆಲೆ ಏರಿಸಿ ಜನರ ಹಸಿ ಗಾಯದ ಮೇಲೆ ಬರೆ ಎಳೆದಿವೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಆಕ್ರೋಶ ವ್ಯಕ್ತಪಡಿಸಿದರು. 

ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಬೇಜವಾಬ್ದಾರಿಯಿಂದ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಹೆಚ್ಚಳವಾಗುತ್ತಿದೆ. ಮತ್ತೊಂದೆಡೆ, ರಾಜ್ಯ ಸರ್ಕಾರ ಸರಿಯಾದ ಕ್ರಮಗಳನ್ನು ಕೈಗೊಳ್ಳದಿದ್ದರಿಂದ ಜನತೆ ಕೊರೋನಾ ಎರಡನೇ ಅಲೆಯ ಭೀಕರ ಪರಿಣಾಮ ಎದುರಿಸುವಂತಾಯಿತು ಎಂದು ವಾಗ್ದಾಳಿ ನಡೆಸಿದರು. 

ಮಹತ್ವದ ನಿರ್ಧಾರ ಕೈಗೊಂಡ ಶಾಸಕರ ನಿಯೋಗ: ರಾಜ್ಯ ಬಿಜೆಪಿಯಲ್ಲಿ ರಾಜಕೀಯ ಚಟುವಟಕೆ ಬಿರುಸು ..

ಲಾಕ್‌ಡೌನ್‌ನಿಂದಾಗಿ ಸೇವಾ ವಲಯ ಮತ್ತು ಉತ್ಪಾದನಾ ವಲಯ ನೆಲಕಚ್ಚಿ ಲಕ್ಷಾಂತರ ಜನರಿಗೆ ಉದ್ಯೋಗ ನಷ್ಟವಾಗಿದೆ. ಜನರ ಸಂಕಷ್ಟಕ್ಕೆ ನೆರವಾಗಬೇಕಾದ ಬಿಜೆಪಿಯ ಡಬಲ್ ಎಂಜಿನ್‌ ಸರ್ಕಾರಗಳು ಬೆಲೆ ಏರಿಸಿ ಜನ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಕಿಡಿಕಾರಿದರು.

ದಿಗ್ವಿಜಯ್‌ ಹೇಳಿಕೆ ತಿರುಕನ ಕನಸು: ಸಿಎಂ ಯಡಿಯೂರಪ್ಪ ...

ಕೋವಿಡ್‌ ಸಂಕಷ್ಟದ ಮಧ್ಯೆ ಕೇಂದ್ರ ಸರ್ಕಾರ ನಿರಂತರವಾಗಿ ತೈಲ ಬೆಲೆ ಏರಿಸುತ್ತಿದೆ. ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ 1 ಲೀಟರ್‌ ಪೆಟ್ರೋಲ್‌ 30 ರು. ಹೆಚ್ಚಳವಾಗಿ ಸೆಂಚುರಿ ಬಾರಿಸಿದೆ. ಡೀಸೆಲ್‌ ಸಹ ಶತಕದ ಗಡಿ ಸಮೀಪಿಸಿದೆ. ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದಾಗ ಕಚ್ಚಾತೈಲದ ಬೆಲೆ 125 ಡಾಲರ್‌ ಇತ್ತು. ಆಗ ಪೆಟ್ರೋಲ್‌ ಬೆಲೆ 70 ರು. ಆಗಿತ್ತು. ಈಗ ಕಚ್ಚಾತೈಲದ ಬೆಲೆ 70 ಡಾಲರ್‌ ಇದ್ದರೂ ಪೆಟ್ರೋಲ್ 100 ರು. ದಾಟಿದೆ ಎಂದು ಆರೋಪಿಸಿದರು.