ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವರ ಹೇಳಿಕೆಗೆ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿರುಗೇಟು ಕೊಟ್ಟಿದ್ದಾರೆ.
ಬೆಂಗಳೂರು, (ಜ.12): ಬಿಜೆಪಿಗೆ ಗೋವು ವೋಟು ತರುವ ಕಾಮಧೇನುವಾಗಿದೆ ಎಂದು ಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ನಳಿನ್ ಕುಮಾರ್ ಕಟೀಲ್‌ಗೆ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್‍ಗೆ ಗೋಹತ್ಯೆ ಶಾಪವಿದೆ ಎಂಬ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವರ ಹೇಳಿಕೆಗೆ ದಿನೇಶ್ ಗುಂಡೂರಾವ್ ಅವರು ಟ್ವೀಟ್ ಮೂಲಕ ತಿರುಗೇಟು ಕೊಟ್ಟಿದ್ದಾರೆ.
ನಿಜವಾಗಿಯೂ ಬಿಜೆಪಿಯವರಿಗೆ ಗೋವಿನ ಬಗ್ಗೆ ಭಕ್ತಿ ಇದ್ದರೆ ದೇಶಾದ್ಯಂತ ಗೋಹತ್ಯೆ ನಿಷೇಧಿಸುವ ಧೈರ್ಯ ತೋರಲಿ. ಇಲ್ಲವೇ ತಮ್ಮದು ಗೊಡ್ಡು ಭಕ್ತಿ ಎಂದು ಒಪ್ಪಿಕೊಳ್ಳಲಿ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್‌ಗೆ 3 ಶಾಪಗಳು ಇವೆಯಂತೆ: ಯಾವುವು..?
ಕಾಂಗ್ರೆಸ್‍ಗೆ ಗೋಹತ್ಯೆ ಶಾಪವಿದೆ ಎಂಬ ನಿಮ್ಮ ಹೇಳಿಕೆ ಅಪಕ್ವ ರಾಜಕಾರಣಿಯ ಬಡಬಡಿಕೆಯಂತಿದೆ. ಗೋ ಶಾಪದ ಬಗ್ಗೆ ಮಾತನಾಡುವ ಬಿಜೆಪಿ ರಾಜ್ಯಾಧ್ಯಕ್ಷರು ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರದಲ್ಲಿ ಎಷ್ಟು ಮೆಟ್ರಿಕ್ ಟ್ರನ್ ಗೋಮಾಂಸ ರಫ್ತಾಗಿದೆ ಎಂಬ ಅಂಕಿ ಅಂಶವನ್ನು ತೆರೆದಿಡಲಿ. ಇವರ ಪ್ರಕಾರ ಗೋಮಾಂಸ ತಿಂದರೆ ಶಾಪ. ಮಾಂಸಕ್ಕಾಗಿ ಗೋವುಗಳನ್ನು ಕೊಂದರೆ ಶಾಪವಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಗೋಹತ್ಯೆ ನಿಷೇಧ ಸಮರ್ಥಿಸಿಕೊಳ್ಳುವ ಕಟೀಲ್ ಅವರು, ಬಿಜೆಪಿ ಆಡಳಿತವಿರುವ ಗೋವಾದಲ್ಲಿ ಗೋಹತ್ಯೆ ನಿಷೇಧಿಸುವುದಕ್ಕೆ ಯಾಕೆ ಒತ್ತಾಯಿಸುವುದಿಲ್ಲ. ಬಿಜೆಪಿಯವರಿಗೆ ಗೋವು ವೋಟು ತರುವ ಕಾಮಧೇನುವಾಗಿದೆ. ನಳೀನ್‍ಕುಮಾರ್ ಅವರದು ಎಲುಬಿಲ್ಲದ ನಾಲಿಗೆ ಎಂಬುದು ಸಾಬೀತಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮಹಾತ್ಮಗಾಂಧಿಯನ್ನು ಕೊಂದ ಗೋಡ್ಸೆಯನ್ನು ಬೆಂಬಲಿಸುವ ನೀವು, ಗಾಂಧಿ ಮತ್ತು ಅಂಬೇಡ್ಕರ್ ವಿಚಾರಧಾರೆಗಳ ಬಗ್ಗೆ ಮಾತನಾಡುವುದು ವರ್ತಮಾನದ ದುರಂತ ಎಂದು ಹೇಳಿದ್ದಾರೆ.ಅಂತರಂಗದಲ್ಲಿ ಗಾಂಧಿ, ಅಂಬೇಡ್ಕರ್ ಅವರನ್ನು ದ್ವೇಷಿಸಿ ಸಾರ್ವಜನಿಕರ ಮುಂದೆ ಹೊಳಗುವ ಮುಖವಾಡವೇಕೆ ಎಂದಿದ್ದಾರೆ.
3
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) January 11, 2021
ಗೋ ಹತ್ಯೆ ನಿಷೇಧ ಸಮರ್ಥಿಸಿ ಮಾತನಾಡುವ ಕಟೀಲ್ರವರು ಇವರದ್ದೇ ಆಡಳಿತವಿರುವ ಗೋವಾದಲ್ಲಿ ನಿಷೇಧಿಸಲು ಯಾಕೆ ಒತ್ತಾಯಿಸುವುದಿಲ್ಲ?
BJPಯವರಿಗೆ ಗೋವು ಓಟು ತರುವ ಕಾಮದೇನು ಅಷ್ಟೆ.
ನಿಜವಾಗಿಯೂ BJPಯವರಿಗೆ ಗೋ ಭಕ್ತಿಯಿದ್ದರೆ ದೇಶಾದ್ಯಾಂತ ಗೋಹತ್ಯೆ ನಿಷೇಧಿಸುವ ಧೈರ್ಯ ತೋರಿಸಲಿ.
ಇಲ್ಲವೆ ತಮ್ಮದು ಗೊಡ್ಡು ಭಕ್ತಿ ಎಂದು ಒಪ್ಪಿಕೊಳ್ಳಲಿ.
2
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) January 11, 2021
ಕಾಂಗ್ರೆಸ್ಗೆ ಗೋಹತ್ಯೆಯ ಶಾಪವಿದೆ ಎಂಬ ಕಟೀಲ್ರವರ ಹೇಳಿಕೆ ಅಪಕ್ವ ರಾಜಕಾರಣಿಯ ಬಡಬಡಿಕೆಯಂತಿದೆ.
ಗೋ ಶಾಪದ ಬಗ್ಗೆ ಮಾತನಾಡುವ ಕಟೀಲ್ರವರು ಮೋದಿಯವರ ಸರ್ಕಾರದಲ್ಲಿ ಎಷ್ಟು ಮೆಟ್ರಿಕ್ ಟನ್ ಗೋಮಾಂಸ ರಫ್ತಾಗಿದೆ ಎಂಬ ಅಂಕಿ ಅಂಶ ತೆರೆದಿಡಲಿ.
ಇವರ ಪ್ರಕಾರ ಗೋ ಮಾಂಸ ತಿಂದರೆ ಶಾಪ. ಮಾಂಸಕ್ಕಾಗಿ ಗೋವುಗಳನ್ನು ಕೊಂದರೆ ಶಾಪವಲ್ಲವೆ?
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 12, 2021, 3:07 PM IST