ಮೈಸೂರು (ಜ.31): ಇಂತಹ ಕೆಟ್ಟ ಸರ್ಕಾರವನ್ನ ನಾನು ಯಾವತ್ತೂ ನೋಡಿಲ್ಲ. ಸಂಪುಟದಲ್ಲಿ ಸಾಮರಸ್ಯವಿಲ್ಲ. ಮಂತ್ರಿಗಳ ಖಾತೆ ಪದೆ ಪದೇ ಬದಲಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್ ಹೇಳಿದ್ದಾರೆ. 

ಮೈಸೂರಿನಲ್ಲಿಂದು ಮಾತನಾಡಿದ ಧೃವನಾರಾಯಣ್ ರಾಜ್ಯ ಸರ್ಕಾರದ ವೈಫಲ್ಯ, ಜೆಡಿಎಸ್ ಮೈತ್ರಿ ರಾಜಕಾರಣ ಹಾಗೂ ಕೈ ಪಕ್ಷದ ಮೇಲಿನ ಒಲವಿನ ಬಗ್ಗೆ ಮಾತನಾಡಿದರು

ಕೊಟ್ಟ ಖಾತೆಗಳಲ್ಲಿ ಪ್ರಗತಿ ತೋರಿಸಬೇಕು. ಒಳ್ಳೆ ಆಡಳಿತ ತೋರುವಲ್ಲಿ ಸಿಎಂ ವಿಫಲವಾಗಿದ್ದಾರೆ. ಒಳ್ಳೆ ಆಡಳಿತ ಕೊಡುವ ಅವಕಾಶವನ್ನು ಬಿಜೆಪಿ ಕಳೆದು ಕೊಂಡಿದೆ ಎಂದರು.
ಇನ್ನು ಜೆಡಿಎಸ್ ಕೂಡ ಅವಕಾಶವಾದಿ ರಾಜಕಾರಣ ಮಾಡುತ್ತಿದೆ.  ಕಾಂಗ್ರೆಸ್ ಜೆಡಿಎಸ್ ಗೆ ಎಲ್ಲಾ ರೀತಿಯಲ್ಲೂ ಸಹಾಯ ಮಾಡಿದೆ. ಕಾಂಗ್ರೆಸ್ ನಿಂದ ಒಂದು ಅಂಶವೂ ಜೆಡಿಎಸ್ ಗೆ ಅನ್ಯಾಯವಾಗಿಲ್ಲ. ಶಾಸಕರ ವಿಶ್ವಾಸ ಗಳಿಸಿದ್ದರೆ ಕುಮಾರಸ್ವಾಮಿ ಐದು ವರ್ಷ ಸಿಎಂ ಆಗಿ ಇರುತ್ತಿದ್ದರು. ಜೆಡಿಎಸ್ ಹಾಗೂ ಬಿಜೆಪಿ ಇಬ್ಬರು ಸಹ ಗೋಲ್ಡನ್ ಅವಕಾಶ ಕಳೆದುಕೊಂಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್ ಹೇಳಿಕೆ.

ಜೆಡಿಎಸ್-ಬಿಜೆಪಿ ಮೈತ್ರಿ: ಪಕ್ಷದಲ್ಲಿ ಶುರುವಾಯ್ತು ಅಸಮಾಧಾನ..! .

ಪರಿಶಿಷ್ಟ ಜಾತಿ, ಪಂಗಡದ ಜನರ ಬಗ್ಗೆ ರಾಜ್ಯ ಸರ್ಕಾರಕ್ಕೆ ಇಚ್ಛಾಸಕ್ತಿ ಇಲ್ಲ.  ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಎಸ್​ಟಿ, ಎಸ್​ಟಿಗೆ ವಿಶೇಷ ಘಟಕ ಯೋಜನೆ ಜಾರಿಗೆ ತಂದಿದ್ರು. ಪ್ರತಿವರ್ಷ ಅವರಿಗೆ ಬಜೆಟ್‌ ನಲ್ಲಿ ಹಣ ಇಡುತ್ತಿದ್ದರು. ಆ ಹಣವನ್ನು ಪ್ರತಿ ವರ್ಷ ಕಡ್ಡಾಯವಾಗಿ ಖರ್ಚು ಮಾಡಬೇಕಿತ್ತು. ನಾನು ಎಂಎಲ್‌ಎ ಆಗಿದ್ದವನು. ಸಮಾಜ ಕಲ್ಯಾಣ ಇಲಾಖೆ ಎರಡು ವರ್ಷ ಕೆಲಸ ಮಾಡಿದ್ದೇನೆ. ಇಲಾಖೆಯಲ್ಲಿ ಸರಿಯಾದ ರೀತಿಯಲ್ಲಿ ಹಣ ಖರ್ಚು ಮಾಡಿಲ್ಲ. ಈ ಹಣವನ್ನು ಬೇರೆ ಉದ್ದೇಶಕ್ಕೆ ಕೆಲಸ ಬಳಸುತ್ತಿದ್ದಾರೆ.ಈ ವಿಷಯ ಅಸೆಂಬ್ಲಿಯಲ್ಲಿಯೂ ಚರ್ಚೆ ಆಗಿದೆ. ಬಿಜೆಪಿ ಶಾಸಕರೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಸರ್ಕಾರಕ್ಕೆ ಪರಿಶಿಷ್ಟ ಜಾತಿ, ಪಂಗಡದ ಕಲ್ಯಾಣ ಬೇಕಿಲ್ಲ. ಬಿಜೆಪಿ ನಾಯಕರಿಗೆ ಈ ವರ್ಗದ ಅಭಿವೃದ್ಧಿ ಬೇಕಿಲ್ಲ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದು ಮೈಸೂರಿನಲ್ಲಿ ಆರ್.ಧ್ರುವನಾರಾಯಣ ಹೇಳಿದರು.

ಕಟೀಲ್ ವಿರುದ್ಧ ವಾಗ್ದಾಳಿ :  ನಳಿನ್ ಕಟೀಲ್ ಕುಮಾರ್ ಕಟೀಲ್ ಒಬ್ಬ ಪೆದ್ದನ ರೀತಿ ಮಾತನಾಡುತ್ತಾರೆ.   ಒಬ್ಬ ರಾಜ್ಯಾಧ್ಯಕ್ಷನಾಗಿ ಗಂಭೀರತೆ ಇಲ್ಲದೆ ಹೇಳಿಕೆ ಕೊಡ್ತಾರೆ. ಬಿಜೆಪಿಯಲ್ಲಿ ನಳೀನ್ ಕುಮಾರ್ ಕಟೀಲ್ ಅವರದ್ದೆ ಗುಂಪಿದೆ.  ಈ ಸಿಎಂ ಬದಲಾವಣೆ, ಯತ್ನಾಳ್ ಹೇಳಿಕೆಗಳೆಲ್ಲ ಆ ಗುಂಪಿನಂದಲೇ ಬರೋದು‌. ಯತ್ನಾಳ್ ಆ ರೀತಿ ಹೇಳಿಕೆ ನೀಡಿದರೂ ಅವರ ಮೇಲೆ ಕ್ರಮ ಯಾಕೀಲ್ಲ. ಬಿಜೆಪಿಯಲ್ಲೆ ವಿರೋಧ ಪಕ್ಷದವರಂತೆ ಮಾತನಾಡುವ ವ್ಯಕ್ತಿಗಳಿದ್ದಾರೆ. ಅವರೇಲ್ಲರಿಗೆ ನಳೀನ್ ಅವರೇ ಕುಮ್ಮಕ್ಕು ನೀಡುತ್ತಿದ್ದಾರೆ.

'ಯುಗಾದಿಯ ಹೊಸ ವರ್ಷಕ್ಕೆ ಹೊಸ ಸಿಎಂ ಬಂದೇ ಬರ್ತಾರೆ, ನೋಡ್ತಾ ಇರಿ' .

ಯಡಿಯೂರಪ್ಪ ಬಗ್ಗೆ ಮಾತನಾಡಿದರೂ ಕ್ರಮ ಇಲ್ಲ ಅಂದರೆ ಏನರ್ಥ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿರುದ್ದ ಮಾಜಿ ಸಂಸದ ಧೃವನಾರಾಯಣ್ ವಾಗ್ದಾಳಿ ನಡೆಸಿದ್ದಾರೆ. 

ನನಗೆ ಜೀವ ಕೊಟ್ಟ ಪಕ್ಷ :  ಇನ್ನು ಇದೇ ವೇಳೆ ರಾಜ್ಯ ರಾಜಕೀಯಕ್ಕೆ ಬರುವುದರ ಬಗ್ಗೆ ಇನ್ನೂ ಚಿಂತನೆ ಮಾಡಿಲ್ಲ. ನಮಗೆ ಯಾವುದೆ ಆಸೆ ಇಲ್ಲ. ನನಗೆ ಜೀವನ ಕೊಟ್ಟ ಪಕ್ಷ ಕಾಂಗ್ರೆಸ್ ಪಕ್ಷ. ನಾನು ಕಾಂಗ್ರೆಸ್ ಪಕ್ಷದಿಂದ‌ ಯಾವುದನ್ನು ನಿರೀಕ್ಷೆ ಮಾಡಿಲ್ಲ. ನಾನು ಸೋತಾಗಲೂ ಪಕ್ಷ ನನ್ನ‌ ಬಿಟ್ಟಿಲ್ಲ. ನಾನು ಸೋತೆ ಅಂತ ಕೆಲಸ‌ ಮಾಡುವುದನ್ನ ಬಿಟ್ಟಿಲ್ಲ.  ನಾನು ಸದಾ ಜನರ ಜೊತೆ ಇದ್ದೇನೆ. ನಾನು ಯಾವುದಕ್ಕೂ ಆಸೆ ಪಡಲ್ಲ ಎಂದು ಮೈಸೂರಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್ ಹೇಳಿದ್ದಾರೆ.