ಬೆಂಗಳೂರು, (ಏ.19): ಕೊರೋನಾ ನಿಯಂತ್ರಣಕ್ಕೆ ಇಂದು (ಸೋಮವಾರ) ಬೆಂಗಳೂರಿನ ಎಲ್ಲಾ ಪಕ್ಷದ ಜನಪ್ರತಿನಿಧಿಗಳ ಸಭೆ ಅಂತ್ಯವಾಗಿದೆ.

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಸಿಎಂ ಇಬ್ರಾಹಿಂ, ಲಸಿಕೆ ಹಾಕಿಸಿಕೊಂಡ‌ ಬಳಿಕವೂ ಜನ ಸಾಯ್ತಿದ್ದಾರೆ. ಇದಕ್ಕೇನು ಪರಿಹಾರ? ಹೀಗಾಗಿ ಲಾಕ್​​ಡೌನ್ ಪ್ರಯೋಜನ ಇಲ್ಲ ಅಭಿಪ್ರಾಯ ವ್ಯಕ್ತಪಡಿಸಿದರು. 

ಕರ್ನಾಟಕದಲ್ಲಿ ಅರ್ಧ ಬಂದ್..ಬಂದ್..: ಹರಿದಾಡುತ್ತಿರುವ Fake ಮಾರ್ಗಸೂಚಿ

 ಸರ್ಕಾರ ಗೊಂದಲದಲ್ಲಿದೆ. ಆಕ್ಸಿಜನ್, ವೆಂಟಿಲೇಟರ್, ಇಂಜೆಕ್ಷನ್ ಕೊರತೆ ಇದೆ. ಇದರ ಬಗ್ಗೆ ಸ್ಪಷ್ಟ ಉತ್ತರ ಕೊಡಲಿಲ್ಲ. ಸರ್ಕಾರ 144 ಸೆಕ್ಷನ್ ಹೇರಲಿ. ಲಾಕ್​ಡೌನ್ ಬದಲು 144 ಸೆಕ್ಷನ್ ಹಾಕಲಿ. ಸತ್ತ ಮೇಲೆ ಮರ್ಯಾದೆಯಿಂದ ಸಂಸ್ಕಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.

ಇನ್ನಷ್ಟು ಚಿತಾಗಾರಗಳು, ಸ್ಮಶಾನಗಳನ್ನು ಮಾಡುವಂತೆ ಸಲಹೆ ಕೊಟ್ಡಿದ್ದೇವೆ. ಎಲ್ರೂ ನಮ್ಮ ಸಲಹೆ ಕೊಟ್ಟಿದ್ದೇವೆ. ಲಾಕ್​ಡೌನ್ ಬೇಡ ಅಂದಿದ್ದೇವೆ. ತಕ್ಷಣ ಚೌಟ್ರಿಗಳನ್ನು ಆಸ್ಪತ್ರೆಗಳಾಗಿ ಪರಿವರ್ತಿಸಲಿ. ಇಲ್ಲದಿದ್ದರೆ ಸಮಸ್ಯೆ ಆಗುತ್ತದೆ. ಜನ ಸಾಯ್ತಿದಾರೆ, ತಪ್ಪಾದ್ರೆ ಒಪ್ಪಿಕೊಳ್ಳಿ ಎಂದರು,

ಸಭೆಯಲ್ಲೇ ಸಾಮಾಜಿಕ ಅಂತರ ಇಲ್ಲ. ಇವ್ರೇ ಸಾಮಾಜಿಕ‌ ಅಂತರ ಪಾಲಿಸ್ತಿಲ್ಲ. ಜನ ಇನ್ನು ಹೇಗೆ ಪಾಲಿಸ್ತಾರೆ? 144 ಸೆಕ್ಷನ್ ಜಾರಿಗೆ ಸಲಹೆ ಕೊಟ್ಟಿದ್ದೇವೆ. ಪೊಲೀಸರಿಗೆ ಜನರ ನಿರ್ಬಂಧಿಸಲು ಸೂಚಿಸಿ ಅಂದಿದ್ದೇವೆ ಎಂದು ಹೇಳಿದರು.