ಬೆಂಗಳೂರು, (ಏ.19): ಕರ್ನಾಟಕದಲ್ಲಿ ಕೊರೋನಾ ವೈರಸ್​ ಸೋಂಕಿನ ಪ್ರಸರಣ ದಿನೇದಿನೆ ಏರಿಕೆಯಾಗುತ್ತಿದೆ. ಇದರಿಂದ ಜನರು ಆತಂಕದಲ್ಲಿದ್ದರೆ, ಇನ್ನೂ ಕೆಲ ಕಿಡಿಗೇಡಿಗಳು ರಾಜ್ಯ ಸರ್ಕಾರದ ಹೆಸರಿನಲ್ಲಿ ಇಲ್ಲದ್ದನ್ನು ಹರಿಬಿಟ್ಟು ಸಾರ್ವಜನಿಕರಲ್ಲಿ ಭಯಭೀತಿಯನ್ನು ಸೃಷ್ಟಿಸುತ್ತಿದ್ದಾರೆ.

ಹೌದು...ಇಂದು (ಏ.19) ರಾಜ್ಯ ಸರ್ಕಾರ ಲೆಟರ್ ಹೆಡ್‌ನಲ್ಲಿ ಹರಿದಾಡುತ್ತಿರುವ ಮಾರ್ಗಸೂಚಿ ಪ್ರತಿ ನಕಲಿಯಾಗಿದೆ. ಆದ್ದರಿಂದ ಯಾರು ಆತಂಕಪಡುವ ಅಗತ್ಯತೆ ಇಲ್ಲ.

ಮೇ 3 ರ ವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದ್ದು, ಅನಗತ್ಯವಾಗಿ ಯಾರೂ ಓಡಾಡುವಂತಿಲ್ಲ.   ದೈನಂದಿನ ಕಾರ್ಯಚಟುವಟಿಕೆಗಳಿಗೆ ತೊಂದರೆಯಾಗದಂತೆ ಇನ್ನುಳಿದವುಗಳಿಗೆ ನಿರ್ಬಂಧಿಸಿದೆ. ಹೀಗೆ ಸರ್ಕಾರದ ನಕಲಿ ಮಾರ್ಗಸೂಚಿ ಹರಿದಾಡುತ್ತಿದೆ.

ಇನ್ನು ಈ ಬಗ್ಗೆ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ರವಿಕುಮಾರ್ ಸ್ಪಷ್ಟನೆಕೊಟ್ಟಿದ್ದು,  ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾರ್ಗಸೂಚಿ ನಕಲಿಯಾಗಿದ್ದು ಸರ್ಕಾರ ಆ ರೀತಿಯ ಯಾವುದೇ ಮಾರ್ಗಸೂಚಿ ಹೊರಡಿಸಿರುವುದಿಲ್ಲ ಎಂದರು.

ವಿಪಕ್ಷ ನಾಯಕರ ರಾಜ್ಯಪಾಲರು ಹಾಗು ಮಾನ್ಯ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ಇದ್ದು, ಸಭೆಯ ನಂತರ ಹೊಸ ಮಾರ್ಗಸೂಚಿ ಅಥವ ಹೊಸ ನಿಯಮಾವಳಿಗಳನ್ನು ಹೊರಡಿಸುವ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ತೀರ್ಮಾನಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಇನ್ನು ಈ ಸುಳ್ಳು ಗೈಡ್ ಲೈನ್ಸ್ ನಲ್ಲಿ ಏನೇನು ಇತ್ತು ಎನ್ನುವುದು ಈ ಕೆಳಗಿನಂತಿದೆ ನೋಡಿ..

ರಾಜ್ಯಾದ್ಯಂತ ಚಿತ್ರಮಂದಿರಗಳು ಬಂದ್
ಶಾಲಾ-ಕಾಲೇಜುಗಳು ಬಂದ್
ಧಾರ್ಮಿಕ ಕಾರ್ಯಕ್ರಮಗಳಿಗೆ ನಿಷೇಧ
ಹೋಟೆಲ್‌ಗಳಲ್ಲಿ ಶೇ.50ರಷ್ಟು ಜನರಿಗೆ ಮಾತ್ರ ಅವಕಾಶ
ಬಾರ್ ಮತ್ತು ರೆಸ್ಟೋರೆಂಟ್ ಬಂದ್