ರಾಹುಲ್‌ ಅನರ್ಹತೆಯಿಂದ 56 ಇಂಚು ಮೋದಿ ರಣಹೇಡಿಯೆಂದು ಸಾಬೀತು: ಬಿ.ಕೆ.ಹರಿಪ್ರಸಾದ್

ಕಳ್ಳರನ್ನು ಕಳ್ಳ ಎಂದು ಹೇಳುವುದು ತಪ್ಪು ಎಂಬ ಭಾವನೆ ಬಿಜೆಪಿಯಲ್ಲಿದೆ. 56 ಇಂಚು ನರೇಂದ್ರ ಮೋದಿ ಈ ದೇಶದಲ್ಲಿ ರಣಹೇಡಿ ಎಂದು ತೋರಿಸಿಕೊಳ್ಳುತ್ತಿದ್ದಾರೆ ಎಂದು ಮಂಗಳೂರಿನಲ್ಲಿ ಪರಿಷತ್ ವಿಪಕ್ಷ ನಾಯಕ‌ ಬಿ.ಕೆ. ಹರಿಪ್ರಸಾದ್ ಸಂಸದ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹಗೊಳಿಸಿರುವ ವಿಚಾರವಾಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
 

Congress Leader BK Hariprasad Slams On PM Narendra Modi At Mangaluru gvd

ಮಂಗಳೂರು (ಮಾ.25): ಕಳ್ಳರನ್ನು ಕಳ್ಳ ಎಂದು ಹೇಳುವುದು ತಪ್ಪು ಎಂಬ ಭಾವನೆ ಬಿಜೆಪಿಯಲ್ಲಿದೆ. 56 ಇಂಚು ನರೇಂದ್ರ ಮೋದಿ ಈ ದೇಶದಲ್ಲಿ ರಣಹೇಡಿ ಎಂದು ತೋರಿಸಿಕೊಳ್ಳುತ್ತಿದ್ದಾರೆ ಎಂದು ಮಂಗಳೂರಿನಲ್ಲಿ ಪರಿಷತ್ ವಿಪಕ್ಷ ನಾಯಕ‌ ಬಿ.ಕೆ.ಹರಿಪ್ರಸಾದ್ ಸಂಸದ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹಗೊಳಿಸಿರುವ ವಿಚಾರವಾಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 

ರಾಹುಲ್ ಗಾಂಧಿ ಮೇಲೆ ತೆಗೆದುಕೊಂಡ ಕ್ರಮವನ್ನು‌ ಕಾನೂನು, ರಾಜಕೀಯವಾಗಿ ಹೋರಾಟ ಮಾಡುತ್ತೇವೆ. ಕೋರ್ಟ್‌ನಲ್ಲಿ ನ್ಯಾಯದೇವತೆ ಕಣ್ಣಿಗೆ ಕಟ್ಟಿಕೊಂಡಿರುವ ಕಪ್ಪುಪಟ್ಟಿ ಬಿಚ್ಚಿಕೊಂಡಿದೆ. ಈ ಬೆಳವಣಿಗೆ ತಾಪತ್ರಯ ಆಗುತ್ತಿದೆ. ಪ್ರಜಾಪ್ರಭುತ್ವದ ಎಲ್ಲಾ ನೀತಿ ಸಂಹಿತೆಗಳನ್ನು ಗಾಳಿಗೆ ತೂರಲಾಗಿದೆ ಎಂದರು.  ರಾಹುಲ್ ಗಾಂಧಿಯವರ ಬಗ್ಗೆ ನರೇಂದ್ರ ಮೋದಿಗೆ ಎಷ್ಟು ಭಯ ಇದೆ ಎಂದು ಗೊತ್ತಾಗುತ್ತೆ. 

ರಾಹುಲ್‌ ಗಾಂಧಿ ಅನರ್ಹತೆಯಿಂದ ಮೋದಿ ಹೇಡಿತನ ಸಾಬೀತು: ಸಿದ್ದರಾಮಯ್ಯ

ರಾಹುಲ್ ಗಾಂಧಿ ಅನರ್ಹಗೊಳಿಸಿದ ಪ್ರಕ್ರಿಯೆ ಪ್ರಶ್ನಾರ್ಹ. ನರಮೇಧ, ಕೈ, ಕಾಲು ಕತ್ತರಿಸಬೇಕು ಎಂದು ಹೇಳುವವರಿಗೆ ಪಾಕಿಸ್ತಾನಕ್ಕೆ ಓಡಿಸುತ್ತೇವೆ ಎಂದವರ ವಿರುದ್ಧ ಯಾವುದೇ ಕ್ರಮ ಆಗಿಲ್ಲ. ನರಮೇಧದ ಭಾಷಣ ಮಾಡುವವರು ಇನ್ನು ಸಹ ಆರಾಮವಾಗಿ ತಿರುಗಾಡುತ್ತಿದ್ದಾರೆ. ಬಿಜೆಪಿಗೊಂದು ಕಾನೂನು ಬೇರೆಯವರಿಗೊಂದು ಕಾನೂನೆಂದು ಆಗುತ್ತಿದೆ. ದ್ವೇಷ ಭಾಷಣ ಮಾಡಿದವರು, ಸಂಘರ್ಷಕ್ಕೆ ಕರೆ ಕೊಟ್ಟವರು, ಶಾಂತಿ‌ಸೌಹಾರ್ಧತೆ ಕೆಡಿಸಿದವರ ಮೇಲೆ ಕ್ರಮ ಆಗಿಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ದ ಬಿ.ಕೆ.ಹರಿಪ್ರಸಾದ್ ಕಿಡಿಕಾರಿದರು.

ಮುಸ್ಲಿಂರ ಮೀಸಲಾತಿಗೆ ಕತ್ತರಿ ವಿಚಾರವಾಗಿ  ಮಾತನಾಡಿದ ಬಿ.ಕೆ.ಹರಿಪ್ರಸಾದ್, ಸಂಪೂರ್ಣ ಮೀಸಲಾತಿ ರದ್ದುಗೊಳಿಸುವ ಹುನ್ನಾರವಿದು. 2015ರಲ್ಲಿ ಬಿಹಾರದಲ್ಲಿ ಮೋಹನ್ ಭಾಗವತ್ ನಾವು ಅಧಿಕಾರಕ್ಕೆ ಬಂದ್ರೆ ಮೀಸಲಾತಿ ತೆಗಿತೇವೆ ಅಂದ್ರು. ಈ ಸಂವಿಧಾನದಲ್ಲಿ ಸರ್ಕಾರ ನಡೆಸಲು ಆಗಲ್ಲ ಎಂದು ಜೋಶಿಯವರು ಹೇಳಿದ್ದಾರೆ. 

ನನಗೆ ಆದೇಶ ಮಾಡೋ ಅಧಿಕಾರ ಅಂಬರೀಶ್‌ಗಷ್ಟೇ: ಸಂಸದೆ ಸುಮಲತಾ

ಬಿಜೆಪಿಯ ಸೂತ್ರಧಾರಿಗಳ ಹೇಳಿಕೆಯಂತೆ ಪಾತ್ರಧಾರಿಗಳು ಮಾಡುತ್ತಿದ್ದಾರೆ. ಸಂಪೂರ್ಣವಾಗಿ ಮೀಸಲಾತಿ ವಿರೋಧಿ ನೀತಿಯಿದು.ಇದು ಕೇವಲ ಮೊಸಳೆ ಕಣ್ಣೀರು ಹಾಕುವಂತದ್ದು. ಮೊದಲು ಮೂಗಿಗೆ ತುಪ್ಪ ಹಚ್ಚುತ್ತಿದ್ದರು.  ಈಗ ತಲೆ ಮೇಲೆ ತುಪ್ಪ ಹಚ್ಚುತ್ತಿದ್ದಾರೆ. ಮೂಗಿಗೆ ತುಪ್ಪ ಹಚ್ಚಿದ್ರೆ ವಾಸನೆಯಾದರು ಬರ್ತಿತ್ತು. ತಲೆ ಚೆನ್ನಾಗಿ ಬಾಚಿಕೊಳ್ಳಿಯೆಂದು ತಲೆಗೆ ತುಪ್ಪ ಹಚ್ಚಿದ್ದಾರೆ ಎಂದು ಹರಿಪ್ರಸಾದ್ ಹೇಳಿದರು.

Latest Videos
Follow Us:
Download App:
  • android
  • ios