ಭ್ರಷ್ಟೋತ್ಸವ. ಬಿಜೆಪಿಯ ವಿಜಯೋತ್ಸವಕ್ಕೆ ಸೂಕ್ತವಾದ ಹೆಸರು ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್‌ ಹೇಳಿದರು.

ಚಿಕ್ಕಮಗಳೂರು (ಮಾ.07): ಭ್ರಷ್ಟೋತ್ಸವ. ಬಿಜೆಪಿಯ ವಿಜಯೋತ್ಸವಕ್ಕೆ ಸೂಕ್ತವಾದ ಹೆಸರು ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್‌ ಹೇಳಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ರಾಜ್ಯದಲ್ಲಿ ವಿಜಯ ಸಂಕಲ್ಪಯಾತ್ರೆ ಆರಂಭಿಸಿದ್ದಾರೆ ಯಾವ ಮುಖಂಡರು ಯಾವ ವಿಜಯೋತ್ಸವ ಆಚರಿಸುತ್ತಿದ್ದಾರೆ ಯಾರಿಗೂ ತಿಳಿಯುತ್ತಿಲ್ಲ. ವಿರೂಪಾಕ್ಷ ಮಾಡಾಳ್‌ ಅವರ ಘಟನೆ ನೋಡಿದಾಗ ಗೊತ್ತಾಗುತ್ತಿದೆ. ನಿರಂತವಾಗಿ ಎರಡು ವರ್ಷಗಳಿಂದಲೂ ಬಿಜೆಪಿ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದರೂ ಸಹ ಸಾಕ್ಷಿ ಕೊಡಿ ಎಂದು ಹೇಳುತ್ತಲೇ ಬಂದರು. 

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕದೆ ಭ್ರಷ್ಟಾಚಾರವನ್ನು ವೈಭವೀಕರಣ ಮಾಡುತ್ತಾ ಬಂದಿದ್ದಾರೆ ಎಂದು ಆರೋಪಿಸಿದರು. ಲೋಕಾಯುಕ್ತ ತನಿಖೆಯಾದ ನಂತರ ಶಾಸಕ ವಿರೂಪಾಕ್ಷಪ್ಪನವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆಂದು ಕೇಂದ್ರದ ಸಚಿವ ಪ್ರಹ್ಲಾದ್‌ ಜೋಷಿಯವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕಾಗಿಲ್ಲ. ಲೋಕಾಯುಕ್ತ ಸ್ಪಷ್ಟವಾಗಿ ವಿರೂಪಾಕ್ಷಪ್ಪನವರ ಮಗನನ್ನು ಅರಸ್ಟ್‌ ಮಾಡಿದ್ದಾರೆ. ಅವರ ಮನೆಯಲ್ಲಿ 6 ಕೋಟಿ ರು. ಸಿಕ್ಕಿದೆ. ಇನ್ನೂ ಸಾಕ್ಷಿ ಬೇಕೆಂದಿದ್ದರೆ ಇವರು ಕುರುಡರೊ ಎಂದು ಪ್ರಶ್ನಿಸಿದರು.

ದೇಶದಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್‌ ತಬ್ಬಲಿ: ಬಿ.ಎಸ್‌.ಯಡಿಯೂರಪ್ಪ

ಕೇಂದ್ರ ಸಚಿವರಾಗಿದ್ದಾಗ ನಡ್ಡಾರವರು ಅಡಿಕೆ ತಿನ್ನುವುದರಿಂದ ರೋಗ ಬರುತ್ತದೆ ಎಂದು ಹೇಳಿದ್ದರು. ಅವರು ಕೊಪ್ಪದಲ್ಲಿ ಅಡಿಕೆ ಬೆಳೆಗಾರರ ಸಮ್ಮೇಳನ ಮಾಡಿ ದಡ್ಡತನ ಪ್ರದರ್ಶನ ಮಾಡಿದ್ದಾರೆ. ಅಡಿಕೆ ವಿಷಯದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಬೇಜವಾಬ್ದಾರಿ ತನ ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿದರು. ಚಿಕ್ಕಮಗಳೂರು ಕ್ಷೇತ್ರಕ್ಕೆ 8 ಸಾವಿರ ಕೋಟಿ ಅನುದಾನ ತಂದಿದ್ದಾರೆ ಎನ್ನುತ್ತಿರುವವರು ಯಾವುದಾದರೂ ಒಂದು ಯೋಜನೆ ಪೂರ್ಣಗೊಳಿಸಿದ್ದಾರಾ ? ಆಧುನಿಕ ಭಗೀರಥ ಎಂದು ಚಿಕ್ಕಮಗಳೂರಿನಲ್ಲಿ ಯಾರಾದರೂ ಇದ್ದರೆ ಅದು ಮಾಜಿ ಸಚಿವ ಸಗೀರ್‌ ಅಹಮದ್‌ ಅವರು, ಶಾಸಕರಾಗಿದ್ದ ಸಂದರ್ಭದಲ್ಲಿ ಯಗಚಿಯಿಂದ ನೀರು ಹರಿಸಿ 1.20 ಲಕ್ಷ ಜನಕ್ಕೆ ಕುಡಿಯುವ ನೀರು ಕೊಡುವ ಕೆಲಸ ಮಾಡಿದ್ದಾರೆ. 

ಅಂದು ಈ ಕಾರ್ಯ ಮಾಡದಿದ್ದರೆ ಚಿಕ್ಕಮಗಳೂರಿಗೆ ಕುಡಿಯುವ ನೀರೆ ಸಿಗುತ್ತಿರಲಿಲ್ಲ ಎಂದ ಅವರು, ಕೇವಲ ಮಳೆಯಿಂದ ನೀರು ಹೆಚ್ಚಾಗಿ ಕಾಲುವೆಯಲ್ಲಿ ಹರಿದಿದ್ದಕ್ಕೆ ಆಧುನಿಕ ಭಗೀರಥ ಎನ್ನುವುದು ಎಷ್ಟುಸರಿ. ಕೆಲಸ ಮಾಡಿ ಬೆನ್ನುತಟ್ಟಿಕೊಳ್ಳಲಿ ಆದರೆ ಬೇರೆಯವರ ಕೆಲಸಕ್ಕೆ ಲೇಬಲ್‌ ಹಾಕಿಕೊಂಡಿರುವುದನ್ನು ನೋಡುತ್ತಿದ್ದೇವೆ ಎಂದು ಟೀಕಿಸಿದರು. ಬಿಜೆಪಿಗರಿಗೆ ಸ್ವಾಭಿಮಾನವಿಲ್ಲ ಹಾಗಾಗಿ ಗುಜರಾತ್‌, ಉತ್ತರ ಪ್ರದೇಶ ಮಾಡಲ್‌ ಎನ್ನುತ್ತಿದ್ದಾರೆ. ಆ ಮಾಡೆಲ್‌ ನಮಗೆ ಬೇಕಾಗಿಲ್ಲ, ಕರ್ನಾಟಕ ಮಾಡೆಲ್‌ ಕಾಂಗ್ರೆಸ್‌ ಪಕ್ಷ ಮತ್ತು ಜನತಾ ಪರಿವಾರ ನೀಡಿರುವುದನ್ನು ಮುನ್ನೆಡೆಸುತ್ತೇವೆ.

ಕರ್ನಾಟಕದಲ್ಲಿ ಕಾಂಗ್ರೆಸ್‌ ಐಸಿಯೂನಲ್ಲಿದೆ: ಜಗದೀಶ್‌ ಶೆಟ್ಟರ್‌ ಲೇವಡಿ

ವಿನಃ ಬಿಜೆಪಿ ರೀತಿ ಎಲ್ಲವನ್ನು ಖಾಸಗೀಕರಣ ಮಾಡಿ ಬಡವರಿಗೆ ಎಟುಕದಿರುವಂತೆ ಮಾಡುವುದು ಕಾಂಗ್ರೆಸ್‌ ಪಕ್ಷದ ಕಾರ್ಯಕ್ರಮ ಹಾಗೂ ಸಿದ್ದಾಂತವಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ಕೇರಳ ಶಾಸಕ ರೋಜಿ ಜಾನ್‌, ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್‌, ಜಿಲ್ಲಾ ಉಸ್ತುವಾರಿ ಮಂಜುನಾಥ್‌ ಭಂಡಾರಿ, ಜಿಲ್ಲಾಧ್ಯಕ್ಷ ಡಾ.ಕೆ.ಪಿ.ಅಂಶುಮಂತ್‌, ಗಫರ್‌, ಕೆಪಿಸಿಸಿ ಮಹಿಳಾ ಘಟಕದ ಉಪಾಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಡಾ.ಡಿ.ಎಲ್‌.ವಿಜಯ್‌ಕುಮಾರ್‌, ಹಿರೇಮಗಳೂರು ಪುಟ್ಟಸ್ವಾಮಿ, ರೂಬಿನ್‌ ಮೋಸಸ್‌, ಬಿ.ಎಚ್‌. ಹರೀಶ್‌, ಎ.ಎನ್‌.ಮಹೇಶ್‌ ಇದ್ದರು.