Asianet Suvarna News Asianet Suvarna News

ಶಿಸ್ತಿನ ಪಕ್ಷವೆಂದು ಕೊಚ್ಚಿಕೊಳ್ಳುವ ಬಿಜೆಪಿಯಿಂದ ನಿಷ್ಠಾವಂತರ ಪಕ್ಷಾಂತರ!

ಬಿಜೆಪಿ ಬಹಳ ಶಿಸ್ತಿನ ಪಕ್ಷ ಎನ್ನುತ್ತಿದ್ದರು. ಅಲ್ಲಿರೋದು ಅಂಧ ಭಕ್ತರು, ಡೋಂಗಿಗಳು ಅಂತಾ ಗೊತ್ತಾಗಿದೆ. ಕುದುರೆ ವ್ಯಾಪಾರಕ್ಕೆ ಖರೀದಿಯಾಗಿರೋರಿಗೆ ಮಾತ್ರ ಅಲ್ಲಿ ಬೆಲೆ ಎಂದು ಕಿಡಿಕಾರಿದ್ದಾರೆ.

congress leader BK hariprasad slams BJP on  jagadish shettar resignation gow
Author
First Published Apr 16, 2023, 6:20 PM IST | Last Updated Apr 16, 2023, 6:20 PM IST

ಬೆಂಗಳೂರು (ಏ16): ಬಿಜೆಪಿಯಲ್ಲಿ ಟಿಕೆಟ್ ಭಿನ್ನಮತ ಮತ್ತು ಪಕ್ಷಾಂತರ ಪರ್ವಕ್ಕೆ  ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕ ಬಿಕೆ  ಹರಿಪ್ರಸಾದ್‌ ಕಿಡಿಕಾರಿದ್ದಾರೆ. ಬಿಜೆಪಿ ಶಿಸ್ತಿನ ಪಕ್ಷ, ದೇಶಭಕ್ತರು ಅಂತ ಕೊಚ್ಚಿಕೊಳ್ಳುತ್ತಿದ್ದರು. ಬಿಜೆಪಿ ಡೋಂಗಿ ಭಾಷಣ‌ ಮಾಡಿದರೆ ಆಗೊಲ್ಲ. ಇದನ್ನ ಜನ ನಂಬೊಲ್ಲ. ಬಿಜೆಪಿಯಲ್ಲಿ ನಿಷ್ಠೆಯಿಂದ ಕೆಲಸ ಮಾಡೋರಿಗೆ ಬೆಲೆ ಇಲ್ಲ. ಯಡಿಯೂರಪ್ಪ ಅವರನ್ನ ಮಾರ್ಗದರ್ಶ ಮಂಡಳಿಗೆ ಕಳುಹಿಸಿದ್ದಾರೆ. ಹೀಗೆ ಒಬ್ಬೊಬ್ಬರನ್ನಾಗಿ ಮಾರ್ಗ ಮಂಡಳಿಗೆ ಕಳುಹಿಸುತ್ತಾರೆ. ಬಿಜೆಪಿಯಲ್ಲಿ ಈಗ ಅಲ್ಲೋಲ ಕಲ್ಲೋಲ ಆಗಿದೆ. ಗುಜರಾತ್ ನಿಂದ ಬಂದ ಅಮಿತ್ ಶಾ ಮತ್ತು  ಮೋದಿ ಕರ್ನಾಟಕ ಖರೀದಿಗೆ ಮುಂದಾಗಿದ್ದಾರೆ  ಎಂದು ಹೇಳಿಕೆ ನೀಡಿದ್ದಾರೆ.

ಬಿಜೆಪಿಗೆ ಜಗದೀಶ್ ಶೆಟ್ಟರ್ ರಾಜೀನಾಮೆ ನೀಡಿರುವ ವಿಚಾರ ಮತ್ತು ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಬಿಜೆಪಿ ಬಹಳ ಶಿಸ್ತಿನ ಪಕ್ಷ ಎನ್ನುತ್ತಿದ್ದರು. ಅಲ್ಲಿರೋದು ಅಂಧ ಭಕ್ತರು, ಡೋಂಗಿಗಳು ಅಂತಾ ಗೊತ್ತಾಗಿದೆ. ಕುದುರೆ ವ್ಯಾಪಾರಕ್ಕೆ ಖರೀದಿಯಾಗಿರೋರಿಗೆ ಮಾತ್ರ ಅಲ್ಲಿ ಬೆಲೆ.  ಶೆಟ್ಟರ್ ಅದನ್ನ ತಿಳಿದುಕೊಳ್ಳಬೇಕಿತ್ತು, ಬಹಳ ಲೇಟ್ ಆಗಿ ತಿಳಿಯಿತು. ಶೆಟ್ಟರ್ ಒಬ್ಬ ಪ್ರಾಮಾಣಿಕ ಸಿಎಂ ಆಗಿದ್ದರು. ಅಂಥಹವರು ರಾಜಕಾರಣದಲ್ಲಿ ಇರ‌ಬೇಕು.  ನಮ್ಮ‌ ಪಕ್ಷಕ್ಕೆ ಬಂದ್ರೆ ಶಕ್ತಿ ಬರುತ್ತೆ. ಅವರು ಕಾಂಗ್ರೆಸ್ ಗೆ ಬಂದರೆ ಸ್ವಾಗತ ಎಂದಿದ್ದಾರೆ.

ಕೈ ತಪ್ಪಿದ ಬಿಜೆಪಿ ಚನ್ನಗಿರಿ ಟಿಕೆಟ್, ಪಕ್ಷೇತರವಾಗಿ ಸ್ಪರ್ಧಿಸುವ ಘೊಷಣೆ ಮಾಡಿದ ಮಾಡಾಳ್!

ವರುಣಾದಲ್ಲಿ ಜೆಡಿಎಸ್ ಅಭ್ಯರ್ಥಿ ಬದಲಾವಣೆ ವಿಚಾರಕ್ಕೆ ಸಬಂಧಿಸಿದಂತೆ ಮಾತನಾಡಿದ ಅವರು, ರಾಜಕೀಯದಲ್ಲಿ ತಂತ್ರ, ಕುತಂತ್ರ ಎಲ್ಲಾ ಮಾಡ್ತಾರೆ. ನಾವು ಇದಕ್ಕೆ ನೇರವಾಗಿ ಹೆಜ್ಜೆ ಇಡುತ್ತೇವೆ. ಇದನ್ನು ಹೇಗೆ ಎದುರಿಸಬೇಕು ಅಂತ ಗೊತ್ತಿದೆ ಎಂದರು. ಇನ್ನು ಶಿಕಾರಿಪುರದಲ್ಲಿ ಕಾಂಗ್ರೆಸ್ ನಿಂದ ಡಮ್ಮಿ ಅಭ್ಯರ್ಥಿ ಹಾಕಿರೋ ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಕಳೆದ ಬಾರಿ ಅವರು ಸೋತ ಅಭ್ಯರ್ಥಿ. ಹೀಗಾಗಿ ಅವರಿಗೆ ಈ ಬಾರಿ ಟಿಕೆಟ್ ಕೊಟ್ಡಿದ್ದೇವೆ ಎಂದರು.

ಚಾಮರಾಜನಗರದಲ್ಲಿ ನಾಗಶ್ರೀ ಬಂಡಾಯ ಶಮನ, ಸೋಮಣ್ಣ ಹಾದಿ ಸುಗಮ!

ಏಪ್ರಿಲ್‌ 13 ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ.  ಏಪ್ರಿಲ್‌ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್‌ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

Latest Videos
Follow Us:
Download App:
  • android
  • ios