Asianet Suvarna News Asianet Suvarna News

'ರಮೇಶ್‌ ಜಾರಕಿಹೊಳಿಗೊಂದು ಕಾನೂನು, ಮುರುಘಾ ಶ್ರೀಗಳಿಗೆ ಒಂದು ಕಾನೂನಾ?'

ಮುರುಘಾಮಠದ ಶ್ರೀಗಳ ಬಂಧನ ವಿಚಾರವಾಗಿ ಬೇಳೂರು ಗೋಪಾಲಕೃಷ್ಣ ಪ್ರತಿಕ್ರಿಯೆ ನೀಡಿದ್ದು, ಸರ್ಕಾರ ಈ ಪ್ರಕರಣದಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ.

Congress Leader belur gopalakrishna Bats For chitradurga Muruga Mutt Seer rbj
Author
First Published Sep 9, 2022, 3:58 PM IST

ಶಿವಮೊಗ್ಗ, (ಸೆಪ್ಟೆಂಬರ್.09):  ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎನ್ನುವ ಆರೋಪ ಚಿತ್ರದುರ್ಗದ ಮುರುಘಾ ಮಠದ ಶರಣ ಮೇಲೆ ಕೇಳಿಬಂದಿದ್ದು, ಈ ಪ್ರಕರಣದಲ್ಲಿ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇನ್ನು ಈ ಬಗ್ಗೆ ಕಾಂಗ್ರೆಸ್ ನಾಯಕ ಬೇಳೂರು ಗೋಪಾಲಕೃಷ್ಣ ಪ್ರತಿಕ್ರಿಯಿಸಿದ್ದು,  ರಮೇಶ್‌ ಜಾರಕಿಹೊಳಿಗೆ ಒಂದು ಕಾನೂನು ಆದರೆ, ಮುರುಘಾ ಶ್ರೀಗಳಿಗೆ ಅವರಿಗೆ ಒಂದು ಕಾನೂನಾ? ಎಂದು ಪ್ರಶ್ನಿಸಿದ್ದಾರೆ.

ಶಿವಮೊಗ್ಗದಲ್ಲಿ ಇಂದು(ಶುಕ್ರವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ರಮೇಶ ಜಾರಕಿಹೊಳಿಗೆ ಕ್ಲೀನ್ ಚಿಟ್ ನೀಡಲು ಮುಂದಾಗಿದೆ. ಎಸ್ಐಟಿಗೆ ತನಿಖೆಗೆ ನೀಡಿ ಎಳ್ಳು ನೀರು ಬಿಡಲು ಸರ್ಕಾರ ಮುಂದಾಗಿದೆ. ಶ್ರೀಗಳಿಗೊಂದು ಜಾರಕಿಹೊಳಿಗೊಂದು ನ್ಯಾಯ. ರಾಜ್ಯ ಸರ್ಕಾರದ ದ್ವಂದ್ವ ನೀತಿ ಸರ್ಕಾರ ವಿರುದ್ಧ ಕಿಡಿಕಾರಿದರು. 

ಮುರುಘಾಶ್ರೀ ವಿರುದ್ಧ ಫೋಕ್ಸೋ ಪ್ರಕರಣ: ಜೈಲಲ್ಲಿ ಶ್ರೀಗಳು ಏನೇನ್‌ ಮಾಡ್ತಾರೆ?

ರಮೇಶ್‌ ಜಾರಕಿಹೊಳಿ ಕೇಸ್‌ ಅನ್ನು ಎಸ್‌ ಐಟಿಗೆ ವಹಿಸಿದ್ದರು. ಶ್ರೀಗಳ ಪ್ರಕರಣವನ್ನು ಏಕೆ ವಿಶೇಷ ತನಿಖೆಗೆ ವಹಿಸಿಲ್ಲ. ಇದು ಸರ್ಕಾರದಿಂದ ವೀರಶೈವ ಸಮುದಾಯದ ಮಠಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ರಮೇಶ್ ಜಾರಕಿಹೊಳಿ ಕೇಸ್‌ನಲ್ಲಿ ಅವರಿಗೆ ಯಾವುದೇ ಪೊಲೀಸ್ ತನಿಖೆಯಿಲ್ಲ, ಬಂಧನವಿಲ್ಲ. ಶ್ರೀಗಳಿಗೆ ಮಾತ್ರ ಈ ಧೋರಣೆ ಯಾಕೆ? ಶ್ರೀಗಳನ್ನು ದೇವರಿದ್ದಂತೆ ಎಂದು ಈಶ್ವರಪ್ಪ ಹೇಳ್ತಾರೆ. ಆದರೆ ನಿಮ್ಮ ಸರ್ಕಾರ ಶ್ರೀಗಳಿಗೆ ಮಾಡಿದ್ದೇನು? ಆದರೆ ಸರ್ಕಾರ ಈಶ್ವರಪ್ಪ ಮೇಲೂ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಾಗರ ಶಾಸಕ ಹಾಲಪ್ಪ ಮೇಲೂ ಕ್ರಮಕೈಗೊಂಡಿರಲಿಲ್ಲ. ಒಂದು ದಿನ ಜೈಲಿಗಿಟ್ಟಂತೆ ಮಾಡಿ ಕ್ಲೀನ್ ಚಿಟ್ ನೀಡಿದ್ರು. ತನಿಖೆಯ ಅಸ್ತ್ರ ಬಳಸಿ ಯಾರ್ಯಾರನ್ನೋ ಉಳಿಸಿದ್ದಾರೆ.ಆದರೆ ಗುರುಗಳ ಬಗ್ಗೆ ಸರ್ಕಾರ ಈ ನಿಲುವು ಪಡೆದಿಲ್ಲ ಎಂದು ಮುರುಘಾ ಶ್ರೀಗಳ ಪರ ಬ್ಯಾಟಿಂಗ್ ಮಾಡಿದರು.

ಹಿಂದುತ್ವ ಉಳಿಸುವ ಕೆಲಸ ಸರ್ಕಾರದಿಂದ ಆಗಿಲ್ಲ. ಹಿಂದು ಹರ್ಷರಂತಹ ಹಿಂದುಗಳನ್ನು ಬಿಜೆಪಿ ಸರ್ಕಾರ ಹತ್ಯೆ ಮಾಡಿದೆ.  ನಿಮಗೋಸ್ಕರ ಮಂತ್ರಿ, ನಿಮಗೋಸ್ಕರ ಶಾಸಕರ ರಕ್ಷಣೆ. ಹಿಂದು ಧರ್ಮದ ಶ್ರೀಗಳ ರಕ್ಷಣೆ ಯಾಕೆ ಮಾಡುತ್ತಿಲ್ಲ? ಎಂದು ಬೇಳೂರು ಗೋಪಾಲಕೃಷ್ಣ ಪ್ರಶ್ನಿಸಿದರು.

ಏನಿದು ಶ್ರೀಗಳ ಪ್ರಕರಣ?: 
ಮುರುಘಾಮಠದ ಆವರಣದಲ್ಲಿದ್ದ ಅಕ್ಕಮಹಾದೇವಿ ಹಾಸ್ಟೆಲ್‌ನ ಇಬ್ಬರು ಅಪ್ರಾಪ್ತ ಬಾಲಕಿಯರು ತಮ್ಮ ಮೇಲೆ ಶರಣರು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ ಒಡನಾಡಿ ಸಂಸ್ಥೆಯ ನೆರವಿನಿಂದ ಮೈಸೂರಿನ ನಜರ್‌ಬಾದ್‌ ಠಾಣೆಗೆ ದೂರು ನೀಡಿದ್ದರು. ಅದರಂತೆ ಶ್ರೀಗಳು, ಅಕ್ಕಮಹಾದೇವಿ ಹಾಸ್ಟೆಲ್‌ನ ವಾರ್ಡನ್‌, ಕಿರಿಯ ಶ್ರೀಗಳು ಸೇರಿ ಐವರ ವಿರುದ್ಧ ಪ್ರಕರಣ ದಾಖಲಾಗಿದೆ. ಕೃತ್ಯ ನಡೆದ ಸ್ಥಳ, ಆರೋಪಿಗಳು ಮತ್ತು ಬಾಲಕಿಯರು ಚಿತ್ರದುರ್ಗ ಜಿಲ್ಲೆಗೆ ಸೇರಿದವರಾಗಿದ್ದರಿಂದ ಈ ಪ್ರಕರಣವನ್ನು ಚಿತ್ರದುರ್ಗ ಜಿಲ್ಲೆಗೆ ವರ್ಗಾಯಿಸಲಾಗಿತ್ತು.

ಜಾರಿಕಿಹೊಳಿ ಪ್ರಕರಣ
ರಮೇಶ್ ಜಾರಕಿಹೊಳಿ ಅವರು ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಯುವತಿಯೋರ್ವಳನ್ನು ಲೈಂಗಿಕವಾಗಿ ಬಳಸಿಕೊಂಡಿದ್ದು, ಆ ವಿಡಿಯೋ ಫುಲ್ ವೈರಲ್ ಆಗಿತ್ತು. ಬಳಿಕ ಈ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಅಲ್ಲದೇ ರಮೇಶ್ ಜಾರಕಿಹೊಳಿ ಅವರ ಸಚಿವ ಸ್ಥಾನವನ್ನು ಸಹ ಬಲಿಪಡೆದುಕೊಂಡಿತ್ತು. ಸಂತ್ರಸ್ಥ ಯುವತಿ ಪೊಲೀಸ್ ಮೆಟ್ಟಿಲು ಹೇರಿದ್ರು. ಇದರ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಸಹ ಯುವತಿ ವಿರುದ್ಧ ಹನಿಟ್ರ್ಯಾಪ್ ಕೇಸ್ ದಾಖಲಿಸಿದ್ದರು.

ಇದಾದ ಬಳಿಕ ಯುವತಿ ನೇರವಾಗಿ ಕೋರ್ಟ್‌ ಮುಂದೆ ಹಾಜರಾಗಿ 164 ಹೇಳಿಕೆಯನ್ನು ಸಹ ನೀಡಿದ್ದಳು. ಬಳಿಕ ಕೋರ್ಟ್‌ನಲ್ಲಿ ವಿಚಾರಣೆ ಶುರುವಾಗಿfತತು. ಇದರ ಮಧ್ಯೆ ಇತ್ತ ಸರ್ಕಾರ ಈ ಪ್ರಕರಣವನ್ನು ತನಿಖೆಗೆ ಎಸ್‌ಐಟಿಗೆ ವಹಿಸಿತ್ತು.

Follow Us:
Download App:
  • android
  • ios