ಮುರುಘಾಶ್ರೀ ವಿರುದ್ಧ ಫೋಕ್ಸೋ ಪ್ರಕರಣ: ಜೈಲಲ್ಲಿ ಶ್ರೀಗಳು ಏನೇನ್ ಮಾಡ್ತಾರೆ?
ಸಂತ್ರಸ್ತರ ಸಮ್ಮುಖದಲ್ಲಿಯೇ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ
ಚಿತ್ರದುರ್ಗ(ಸೆ.07): ಮುರುಘಾಶ್ರೀ ವಿರುದ್ಧ ಫೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರುಘಾಶ್ರೀ ಜಾಮೀನು ಅರ್ಜಿ ವಿಚಾರಣೆ ನಾಳೆಗೆ(ಗುರುವಾರ) ಮುಂದೂಡಿಕೆಯಾಗಿದೆ. ನಾಳೆ ಆಕ್ಷೇಪಣೆ ಸಲ್ಲಿಸಲು ಕೋರ್ಟ್ ಸೂಚನೆ ನೀಡಿದೆ. ಮಧ್ಯಾಹ್ನ ಸಂತ್ರಸ್ತೆಯರು ಕೋರ್ಟಿಗೆ ಹಾಜರಾಗಲಿದ್ದಾರೆ. ಸಂತ್ರಸ್ತರ ಸಮ್ಮುಖದಲ್ಲಿಯೇ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ ಅಂತ ತಿಳಿದು ಬಂದಿದೆ.
ಮುರುಘಾಶ್ರೀ ಜಾಮೀನಿಗೆ ಸಂತ್ರಸ್ತೆಯರ ಪರ ವಕೀಲ ನಾಳೆ ಆಕ್ಷೇಪಣೆ ಸಲ್ಲಿಸಲಿದ್ದಾರೆ. ನಾಳೆ ಆಕ್ಷೇಪಣೆ ಸಲ್ಲಿಕೆಗೆ ಕೋರ್ಟ್ ಸೂಚನೆ ನೀಡಿದೆ ಅಂತ ಸಂತ್ರಸ್ತೆಯರ ಪರ ವಕೀಲ ಶ್ರೀನಿವಾಸ್ ಹೇಳಿದ್ದಾರೆ. 3ನೇ ಆರೋಪಿ ಮಠದ ಉತ್ತರಾಧಿಕಾರಿ (ಬಸವಾದಿತ್ಯ -17), 4ನೇ ಆರೋಪಿ ಮಠದ ಕಾರ್ಯದರ್ಶಿ ಪರಮಶಿವಯ್ಯ, 5ನೇ ಆರೋಪಿ ವಕೀಲ ಗಂಗಾಧರಯ್ಯ ಅವರ ನಿರೀಕ್ಷಣಾ ಜಾಮೀನು ಅರ್ಜಿ ಕೂಡ ನಾಳೆಗೆ ಮುಂದೂಡಿಕೆಯಾಗಿದೆ.
Sexual Assault Case ಬಂಧನದಲ್ಲಿರುವ ಮುರುಘಾ ಶರಣರಿಗೆ ಮತ್ತೊಂದು ಶಾಕ್!
ಈಗಾಗಲೇ ಫೋಕ್ಸೋ ಪ್ರಕರಣದಲ್ಲಿ ಆರೋಪಿ 1 ಮುರುಘಾಶ್ರೀ ಅವನ್ನ ಪೊಲೀಸರು ಬಂಧಿಸಿದ್ದಾರೆ. ಮುರುಘಾಶ್ರೀಗೆ ಕರೊನರಿ ANGIOGRAMಗೆ ಚಿತ್ರದುರ್ಗ ಜಿಲ್ಲಾ 2ನೇ ಅಪರ ಮತ್ತು ಸತ್ರ ನ್ಯಾಯಾಲಯ ಸೂಚನೆ ನೀಡಿದೆ. ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ನ್ಯಾಯಾಲಯ ಸೂಚನೆ ನೀಡಿದೆ. ಶ್ರೀಗಳಿಗೆ ಹೃದಯ ಖಾಯಿಲೆ, ಅನಾರೋಗ್ಯ ಇರುವ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ಸೂಚಿಸಿದೆ. ಮುರುಘಾಶ್ರೀ ಪರ ವಕೀಲ ಉಮೇಶ್ ಮನವಿ ಹಿನ್ನೆಲೆಯಲ್ಲಿ ಕೋರ್ಟ್ ಸೂಚನೆ ನೀಡಿದೆ.
ಸೆ.2ರಂದು ಎದೆನೋವು ಎಂದು ಮುರುಘಾಶ್ರೀಗಳು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಜಿಲ್ಲಾಸ್ಪತ್ರೆಯಲ್ಲಿ ಇಸಿಜಿ, ಸ್ಕ್ಯಾನ್, ರಕ್ತದ ಮಾದರಿ ಪರೀಕ್ಷಿಸಿದ್ದ ವೈದ್ಯರು. ವೈದ್ಯರ ವರದಿ ಇಂದು ಕೋರ್ಟಿಗೆ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ತಪಾಸಣೆಗೆ ಸೂಚನೆ ನೀಡಿದೆ. ದಾವಣಗೆರೆಯ ಚಿಗಟೇರಿ ಆಸ್ಪತ್ರೆಗೆ ಮುರುಘಾಶ್ರೀಗಳನ್ನ ಶಿಫ್ಟ್ ಮಾಡುವ ಸಾಧ್ಯತೆ ಇದೆ.
ಚಿತ್ರದುರ್ಗ ಜಿಲ್ಲಾ ಕಾರಾಗೃಹದಲ್ಲಿ ಬಂಧಿಯಾಗಿರುವ ಮುರುಘಾಶ್ರೀಗಳ ರಾತ್ರಿಗೆ ಲೂಟಕ್ಕೆ ಅನ್ನ- ಸಾರು ಸೇವಿಸಿದ್ದಾರೆ. ಜೈಲಿನ ಕೋಣೆಯಲ್ಲಿ ಶ್ರೀಗಳು ಬರವಣಿಗೆಯಲ್ಲಿ ತೊಡಗಿದ್ದಾರೆ. ಪುಸ್ತಕ ಓದು ಮತ್ತು ಬರೆಯುವುದರಲ್ಲಿ ಮುರುಘಾಶ್ರೀ ನಿರತರಾಗಿದ್ದಾರೆ. ಜೈಲಿನಲ್ಲೇ ಕುಳಿತು ಶ್ರೀಗಳು ಡೈರಿ ಬರೆಯುತ್ತಿದ್ದಾರೆ ಅಂತ ತಿಳಿದು ಬಂದಿದೆ.
ನಮ್ಮಂಥವರಿಗೆ ಬುದ್ಧಿ ಹೇಳುವ ನೀವೇ ಹೀಗಾದ್ರೆ ಹೇಗೆ? ವಿಚಾರಾಣಾಧೀನ ಖೈದಿಗಳ ಪ್ರಶ್ನೆಗೆ ಶ್ರೀಗಳ ಉತ್ತರವಿದು
ಜೈಲಿನಲ್ಲಿ ಶ್ರೀಗಳಿಗೆ ಯಾವುದೇ ವಿಐಪಿ ಸೌಲಭ್ಯ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಮುರುಘಾ ಶರಣರು ಸಾಮಾನ್ಯ ವಿಚಾರಣಾಧೀನ ಖೈದಿಗಳ ಜೊತೆಯಲ್ಲಿದ್ದಾರೆ. ಈ ವೇಳೆ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಗಗಳು ಶ್ರೀಗಳಿಗೆ ಕೆಲ ಪ್ರಶ್ನೆಗಳು ಕೇಳಿದ್ದಾರೆ.
Murugha Shri: ಮುರುಘಾ ಶ್ರೀ ವಿಚಾರಣಾಧೀನ ಖೈದಿ ನಂಬರ್ 2261
ನಮ್ಮಂಥವರಿಗೆ ಬುದ್ಧಿ ಹೇಳುವ ನೀವೇ ಹೀಗಾದ್ರೆ ಹೇಗೆ ಸ್ವಾಮಿ? ಇದೇ ಕಾರಾಗೃಹಕ್ಕೆ ಬಂದು ಮನಪರಿವರ್ತನೆ ಶಿಬಿರ ನಡೆಸಿದ್ದೀರಿ. ಈಗ ನೀವೇ ಶಿಕ್ಷೆ ಅನುಭವಿಸುವಂತ ಸ್ಥಿತಿ ಬಂತು ಎಂದು ಖೈದಿಗಳು ಪ್ರಶ್ನಿಸಿದ್ದಾರೆ.
ಇದಕ್ಕೆ ಶ್ರೀಗಳು ಪ್ರತಿಕ್ರಿಯಿಸಿ, ನನ್ನನ್ನು ಜೈಲಿಗೆ ಕಳುಹಿಸುವ ದೊಡ್ಡ ಷಡ್ಯಂತ್ರ ನಡೆದಿದೆ.ನಾನು ಬಲಿಪಶು ಆಗಿದ್ದೇನೆ ಎಂದು ಉತ್ತರಿಸಿದ್ದಾರಂತೆ. ಇಷ್ಟು ಹೇಳಿ ಬಳಿ ಯಾರ ಪ್ರಶ್ನೆಗೂ ಹೆಚ್ಚು ಪ್ರತಿಕ್ರಿಯಿಸದೆ ಮುರುಘಾ ಶ್ರೀಗಳು ಮೌನಕ್ಕೆ ಜಾರಿದ್ದಾರಂತೆ.
ಚಿತ್ರದುರ್ಗದಲ್ಲಿರುವ ಜಗದ್ಗುರು ಮುರುಘ ರಾಜೇಂದ್ರ ಬೃಹನ್ಮಠವು ಕರ್ನಾಟಕದ ಸಾಮಾಜಿಕ ಇತಿಹಾಸದೊಂದಿಗೆ ಬೆಸೆದುಕೊಂಡಿರುವ ಜನಪ್ರಿಯ ಶ್ರದ್ಧಾಕೇಂದ್ರ. ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿಯೂ ಮಠಕ್ಕೆ ಭಕ್ತರಿದ್ದಾರೆ. ಲಿಂಗಾಯತ ಪರಂಪರೆಯ ಮಠವಾದರೂ ವಿವಿಧ ಜಾತಿ ಮತ್ತು ಧರ್ಮಗಳಲ್ಲಿಯೂ ಪ್ರಭಾವ ಹೊಂದಿದೆ. ಸಮಾಜ ಸುಧಾರಣೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಬಹುಕಾಲದಿಂದ ಸಕ್ರಿಯವಾಗಿದೆ. ಮುರುಘಾ ಶ್ರೀಗಳು ಸಾಮಾಜಿ ಕ್ಷೇತ್ರದಲ್ಲಿ ಅರಿವು ಮೂಡಿಸುವಂತ ಕಾರ್ಯಕ್ರಮ, ಅಭಿಯಾನಗಳನ್ನು ನಡೆಸಿಕೊಟ್ಟಿದ್ದಾರೆ. ಆದ್ರೆ, ಇದೀಗ ಬುದ್ಧಿವಾದ ಮಾತುಗಳನ್ನ ಹೇಳುತ್ತಿದ್ದ ಸ್ವಾಮೀಜಿಗಳೇ ಜೈಲು ಸೇರಿರುವುದು ದುರಂತ.