Asianet Suvarna News Asianet Suvarna News

ಸವಳಂಗ ರಸ್ತೆಯಲ್ಲಿ ನಮ್ಮಪ್ಪಂದು ಯಾವ ಆಸ್ತಿ ಇಲ್ಲ: ಆಯನೂರು ಮಂಜುನಾಥ್

ರಾಜ್ಯ ಬಜೆಟ್‌ನಲ್ಲಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವಂತೆ ಎನ್‌ಪಿಎಸ್‌, ಒಪಿಎಸ್ ಬಗ್ಗೆ ಸಮಾಧಾನಕರ ಪರಿಹಾರ ನೀಡಲಿದ್ದಾರೆ ಎಂಬ ವಿಶ್ವಾಸ ಇದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದರು.

Congress Leader Ayanur Manjunath Slams On MP BY Raghavendra gvd
Author
First Published Feb 16, 2024, 3:30 AM IST

ಶಿವಮೊಗ್ಗ (ಫೆ.16): ರಾಜ್ಯ ಬಜೆಟ್‌ನಲ್ಲಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವಂತೆ ಎನ್‌ಪಿಎಸ್‌, ಒಪಿಎಸ್ ಬಗ್ಗೆ ಸಮಾಧಾನಕರ ಪರಿಹಾರ ನೀಡಲಿದ್ದಾರೆ ಎಂಬ ವಿಶ್ವಾಸ ಇದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದರು. ಇಲ್ಲಿನ ಪ್ರೆಸ್‌ಟ್ರಸ್ಟ್‌ನಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಏಳನೇ ವೇತನ ಆಯೋಗವನ್ನು ಗಮನದಲ್ಲಿ ಇಟ್ಟುಕೊಂಡು ನೌಕರರಿಗೆ ಅನ್ವಯ ಆಗುವಂತೆ ಬಜೆಟ್ ಘೋಷಣೆ ಮಾಡಲಿದ್ದಾರೆ ಎಂಬ ನಿರೀಕ್ಷೆ ಇದೆ ಎಂದರು.

ಜೊತೆಗೆ ಬಿಜೆಪಿ ಸರ್ಕಾರದ ಮಾಜಿ ಸಿಎಂ ಬೊಮ್ಮಾಯಿ ಕಾಲದಲ್ಲಿ ಕಾರ್ಮಿಕ ವಿರೋಧ ಕಾಯ್ದೆ ಜಾರಿ ಆಗಿದೆ. ಎಂಟು ಗಂಟೆ ಕೆಲಸದ ಅವಧಿಯನ್ನು 12 ಗಂಟೆಗೆ ಏರಿಸಿದ್ದಾರೆ. ಇದಕ್ಕೆ ತಿದ್ದುಪಡಿ ತಂದು ಮೊದಲಿನತರ ಎಂಟು ಗಂಟೆಗೆ ವಾಪಾಸ್‌ ತರಬೇಕು. ಬಿಜೆಪಿ ಸರ್ಕಾರ ಕಾರ್ಮಿಕ ವಿರೋಧಿ ಸರ್ಕಾರ ಎಂದು ಸಾಬೀತಾಗಿದೆ. ಈ ಹಿನ್ನೆಲೆ ಕೆಲ ವಿಷಯ ಇಟ್ಟುಕೊಂಡು ಸಚಿವರೊಂದಿಗೆ ಚರ್ಚೆ ಮಾಡಿದ್ದೇನೆ. ಶುಕ್ರವಾರ ಸಿಎಂ ಸಿದ್ದರಾಮಯ್ಯರಿಂದ ಉತ್ತಮ ಬಜೆಟ್ ಬರುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಬಿಜೆಪಿ ಪಕ್ಷ ನನ್ನ ಮನೆ ಇದ್ದಂತೆ, ಹಾಗಾಗಿ ಕಾಂಗ್ರೆಸ್‌ನಿಂದ ವಾಪಸ್ಸು ಬಂದೆ: ಜಗದೀಶ್ ಶೆಟ್ಟರ್

ಅನುದಾನಿತ ಶಾಲೆಗಳಿಗೆ ಅನುದಾನದ ಕೊರತೆ ಇದೆ. ಅವುಗಳ ಬಗ್ಗೆಯೂ ಬಜೆಟ್‌ನಲ್ಲಿ ಸಿದ್ದರಾಮಯ್ಯ ಘೋಷಿಸುವ ನಿರೀಕ್ಷೆ ಇದೆ. ನೌಕರರ ಎಲ್ಲಾ ಸಮಸ್ಯೆ ಸರಿದೂಗಿಸುವ ವಿಶ್ವಾಸ ಇದೆ. ರಾಜ್ಯದಲ್ಲಿ ಬರಗಾಲ, ಆರ್ಥಿಕ ಸಂಕಷ್ಟದ ಸ್ಥಿತಿಯಲ್ಲೂ ಕೇಂದ್ರ ಸರ್ಕಾರದಿಂದ ಯಾವುದೇ ಅನುದಾನ ಬಿಡುಗಡೆಯಾಗಲಿಲ್ಲ. ರಾಜ್ಯದ ಯಾವ ಸಂಸದರು ಈ ಬಗ್ಗೆ ಚಕಾರ ಎತ್ತಲಿಲ್ಲ ಎಂದು ಆರೋಪಿಸಿದರು.

ಸಂಸದ ಬಿ.ವೈ.ರಾಘವೇಂದ್ರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಯಾರಿಗೋ ಬೌಲಿಂಗ್ ಮಾಡಿದ್ರೆ ಯಾರೋ ಬ್ಯಾಟಿಂಗ್ ಮಾಡಲು ಬಂದಿದ್ದಾರೆ. ಪೆಸಿಟ್ ಕಾಲೇಜಿನ ಬಳಿಯ ಫ್ಲೈ ಓವರ್ ಕೆಳಗೆ ನನ್ನ ಆಸ್ತಿ ಇದೆ ಎಂದು ಆರೋಪಿಸಿದ್ದಾರೆ. ಅವರು ಹೇಳಿದ ಬಳಿಕ ನನ್ನ ಆಸ್ತಿಯನ್ನ ಹುಡುಕಿಕೊಂಡು ಬರಬೇಕಿದೆ ಎಂದು ವ್ಯಂಗ್ಯವಾಡಿದರು.

ಗ್ಯಾರಂಟಿ ಯೋಜನೆಗೆ ಮತ್ತಷ್ಟು ಒತ್ತು, ವಿಪಕ್ಷ ಟೀಕೆಗೆ ಉತ್ತರಿಸಲ್ಲ: ಸಚಿವ ಮಧು ಬಂಗಾರಪ್ಪ

ನಾನು ಸಂಸದರು ಅಭಿವೃದ್ಧಿ ಮಾಡಿಲ್ಲ ಎಂದು ಹೇಳಿಲ್ಲ. ಸಂಸದ ಡಿ.ಕೆ.ಸುರೇಶ್ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಹೇಗೆ ಆರೋಪಿಸಿದ್ದಾರೋ ಹಾಗೇ ಜಿಲ್ಲೆಗೆ ಅನ್ಯಾಯವಾಗಿದೆ ಎಂದಿರುವೆ. ಸವಳಂಗ ರಸ್ತೆಯಲ್ಲಿ ನಮ್ಮಪ್ಪಂದು ಯಾವ ಆಸ್ತಿ ಇಲ್ಲ ಎಂದಿದ್ದಾರೆ. ಅಂದರೆ, ಆ‌ ಮಾರ್ಗದಲ್ಲಿ ಬಿಟ್ಟು‌ ಅಷ್ಟದಿಕ್ಕುಗಳಲ್ಲಿ ಆಸ್ತಿ ಇದೆ ಎನ್ನುವ ಅರ್ಥದಲ್ಲಿ ಅವರು ಮಾತನಾಡಿದ್ದಾರೆ ಎಂದು ವ್ಯಂಗ್ಯವಾಡಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಧೀರರಾಜ್‌ ಹೊನ್ನವಿಲೆ, ಶಿ.ಜು.ಪಾಶ, ಪದ್ಮನಾಬ್‌ ಇದ್ದರು.

Follow Us:
Download App:
  • android
  • ios