ಬೆಂಗಳೂರು, [ಫೆ.28]: ಮಾ.4ರಂದು ಸಮನ್ವಯ ಸಮಿತಿ ಸಭೆ ನಡೆಯಲಿದೆ. ಅಂದಿನ ಸಭೆಯಲ್ಲಿ ಸೀಟು ಹಂಚಿಕೆ ಬಗ್ಗೆ ಚರ್ಚೆಯಾಗಲಿದ್ದು, ಪೂರ್ಣ ಪ್ರಮಾಣದ ತೀರ್ಮಾನವೂ ಆಗಲಿದೆ' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್​​ ಖಂಡ್ರೆ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಇಂದು [ಗುರುವಾರ] ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ' ಮಾರ್ಚ್ ಮೊದಲ ವಾರದಲ್ಲೇ ಅಭ್ಯರ್ಥಿ ಪಟ್ಟಿ ರೆಡಿಯಾಗುತ್ತದೆ. ಆಗಲೇ ಅಭ್ಯರ್ಥಿಗಳ ಪಟ್ಟಿಯೂ ನಿರ್ಧಾರವಾಗುತ್ತದೆ ಎಂದು ಹೇಳಿದರು.

ಲೋಕಸಭಾ ಚುನಾವಣೆ : 8 ಸೀಟು ಕೊಟ್ಟರೂ ಜೆಡಿಎಸ್‌ ಒಪ್ಪಿಗೆ ಪ್ಲಾನ್‌?

ಜೆಡಿಎಸ್​​ನವರೂ ಕೆಲವೊಂದು ಕ್ಷೇತ್ರ ಕೇಳುತ್ತಿದ್ದಾರೆ. ಅದರ ಬಗ್ಗೆ ಎಲ್ಲವೂ ಮುಕ್ತವಾಗಿ ಸಮಿತಿ ಸಭೆಯಲ್ಲಿ ಚರ್ಚೆ ಆಗಲಿದ್ದು, ಸೀಟು ಹಂಚಿಕೆ ಬಗ್ಗೆ ಯಾವುದೇ ಅನುಮಾನ ಬೇಡ. ಎಲ್ಲವೂ ಸುಲಭವಾಗಿ ಇತ್ಯರ್ಥ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಹಾಲಿ ಕಾಂಗ್ರೆಸ್ ಸಂಸದರು ಇರುವ ಕ್ಷೆತ್ರಗಳ ಮೇಲೆ ಜೆಡಿಎಸ್ ಕಣ್ಣಿಟ್ಟಿದ್ದು, ಕೆಲ ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಕನಿಷ್ಠ ಏನಿಲ್ಲ ಅಂದ್ರೂ 10 ಕ್ಷೇತ್ರಗಳಿಗೆ ಜೆಡಿಎಸ್ ಬೇಡಿಕೆ ಇಟ್ಟಿದೆ. ಇದ್ರಿಂದ ಸಮನ್ವಯ ಸಮಿತಿಯಲ್ಲಿ ಏನೆಲ್ಲ ಚರ್ಚೆಗಳು ನಡೆಯುತ್ತವೆ ಎನ್ನುವುದು ಭಾರೀ ಕುತೂಹಲ ಮೂಡಿಸಿದೆ.

ರಾಜ್ಯ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ಅಂತ್ಯ, ಹಾಲಿ 10 ಸಂಸದರಿಗೆ ಟಿಕೆಟ್ ಪಕ್ಕಾ..!

ಒಟ್ಟಿನಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಹಾಗೂ ಜೆಡಿಎಸ್ ಪಣತೊಟ್ಟಿದ್ದು, ಹೊಂದಾಣಿಕೆಯೊಂದಿಗೆ ಚುನಾವಣೆ ಎದುರಿಸಲು ಮೈತ್ರಿ ಪಕ್ಷಗಳು ನಿರ್ಧರಿಸಿವೆ.

ಏಪ್ರಿಲ್ ಕೊನೆ ವಾರ ಅಥವಾ ಮೇ ಮೊದಲ ವಾರ ಲೋಕಸಭಾ ಚುನಾವಣೆ ನಡೆಯುವ ಸಾಧ್ಯತೆಗಳಿದ್ದು, ಈಗಾಗಲೇ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ನಾನಾ ತಂತ್ರಗಳನ್ನು ರೂಪಿಸಿವೆ.