ಬೆಂಗಳೂರು (ಮಾ.22): ರಾಜ್ಯದಲ್ಲಿ ಚುನಾವಣಾ ಅಧಿಸೂಚನೆ ಪ್ರಕಟವಾಗಿರುವ ಮಸ್ಕಿ ಹಾಗೂ ಬಸವ ಕಲ್ಯಾಣ ಕ್ಷೇತ್ರಗಳ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಭಾನುವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಬಿ-ಫಾರಂ ವಿತರಿಸಿದರು.

 ಏ.17ರಂದು ಚುನಾವಣಾ ದಿನಾಂಕ ನಿಗದಿಯಾಗಿರುವ ಬಸವ ಕಲ್ಯಾಣ ಕ್ಷೇತ್ರಕ್ಕೆ ನಿರೀಕ್ಷೆಯಂತೆಯೇ ಮಾಲಾ ನಾರಾಯಣರಾವ್‌ (ಮಲ್ಲಮ್ಮ) ಹಾಗೂ ಮಸ್ಕಿ ಕ್ಷೇತ್ರಕ್ಕೆ ಬಸನಗೌಡ ತುರವಿಹಾಳ್‌ ಅವರಿಗೆ ಪಕ್ಷ ಮಾ.18ರಂದು ಟಿಕೆಟ್‌ ಘೋಷಿಸಿತ್ತು.

ಕೃಷ್ಣ ಬೈರೇಗೌಡ, ಉಗ್ರಪ್ಪ, ಬ್ರಿಜೇಶ್ ಕಾಳಪ್ಪ ಜಂಟಿ ಸುದ್ದಿಗೋಷ್ಠಿ: ಏನು ವಿಶೇಷ? ..

 ಭಾನುವಾರ ಬೆಳಗ್ಗೆ ಡಿ.ಕೆ. ಶಿವಕುಮಾರ್‌ ಸದಾಶಿವನಗರ ನಿವಾಸದಲ್ಲಿ ಮಾಲಾ ಅವರ ಪುತ್ರ ಗೌತಮ್‌ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಉಪ ಚುನಾವಣೆ ಸಿದ್ಧತೆಗಳ ಬಗ್ಗೆ ಚರ್ಚಿಸಿದರು. ಇದೇ ವೇಳೆ ಮಾಲಾ ಅವರಿಗೆ ಶಿವಕುಮಾರ್‌ ಅವರು ಬಿ-ಫಾರಂ ಹಸ್ತಾಂತರಿಸಿದರು. 

ಇನ್ನು ಮಸ್ಕಿ ಕ್ಷೇತ್ರದಿಂದ ಕೈ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಬಸನಗೌಡ ತುರವಿಹಾಳ್‌ ಅವರ ಪರವಾಗಿ ರಾಯಚೂರು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹಾಗೂ ಮಾಜಿ ಸಂಸದ ಬಿ.ವಿ. ನಾಯಕ್‌ ಅವರಿಗೆ ಬಿ ಫಾರಂ ನೀಡಲಾಯಿತು.