ಅಂಬೇಡ್ಕರ್ ಹೆಸರನ್ನು ಕಾಂಗ್ರೆಸ್ ಚುನಾವಣಾ ಬೂಟಾಟಿಕೆಗೆ ಮಾತ್ರ ಬಳಸುತ್ತದೆ; ಆರ್. ಅಶೋಕ

ಸಿಎಂ ಸಿದ್ದರಾಮಯ್ಯ ಸರ್ಕಾರ 'ಸಿದ್ದರಾಮೋತ್ಸವ'ಕ್ಕೆ ಕೋಟಿಗಟ್ಟಲೆ ಖರ್ಚು ಮಾಡಿದೆ. ಆದರೆ, ಅಂಬೇಡ್ಕರ್ ಉತ್ಸವ ಮಾಡಿಲ್ಲ. ಚುನಾವಣೆ ಸಮಯದಲ್ಲಿ ಮಾತ್ರ ಅಂಬೇಡ್ಕರ್ ಅವರನ್ನು ನೆನಪಿಸಿಕೊಳ್ಳುತ್ತಾರೆ ಎಂದು ಆರ್. ಅಶೋಕ್ ಆರೋಪಿಸಿದ್ದಾರೆ.

Congress is using Ambedkar name only for electoral hypocrisy R Ashoka sat

ಬೆಂಗಳೂರು (ಡಿ.18): ಹತ್ತಾರು ಕೋಟಿ ಖರ್ಚು ಮಾಡಿ 'ಸಿದ್ದರಾಮೋತ್ಸವ' ಮಾಡಿಸಿಕೊಳ್ಳುವ ತಮಗೆ 'ಅಂಬೇಡ್ಕರ್ ಉತ್ಸವ' ಮಾಡಬೇಕು ಅನ್ನಿಸಲಿಲ್ಲ. ನಿಮಗೆ ಅಂಬೇಡ್ಕರ್ ನೆನಪಾಗೋದು ಚುನಾವಣೆ ವೇಳೆ ಮಾತ್ರ. ಕುರ್ಚಿಗಾಗಿ, ಅಧಿಕಾರಕ್ಕಾಗಿ ಹೈಕಮಾಂಡ್ ನಾಯಕರನ್ನು ಮೆಚ್ಚಿಸಲು ನೀವು 'ಇಂದಿರಾ ಕ್ಯಾಂಟೀನ್' ಎಂದು ಹೆಸರಿಟ್ಟಿದ್ದೀರಿ ಹೊರತು 'ಅಂಬೇಡ್ಕರ್ ಕ್ಯಾಂಟೀನ್' ಎಂದು ಹೆಸರಿಡಲಿಲ್ಲ. ನಿಮಗೆ ಅಂಬೇಡ್ಕರ್ ಅವರ ಬಗ್ಗೆ ಬದ್ಧತೆಯೇ ಇಲ್ಲ ಎಂದು ವಿಪಕ್ಷ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು ಸಿದ್ದರಾಮಯ್ಯ ಅಮಿತ್ ಶಾ ಅವರ ಬಗ್ಗೆ ಮಾಡಿದ ಟೀಕೆಗೆ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಅವರು, 'ಜಪವ ಮಾಡಿದರೇನು ತಪವ ಮಾಡಿದರೇನು ವಿಪರೀತ ಕಪಟಗುಣ ಕಲುಷವಿದ್ದವರು... ಎಂಬ ಕನಕದಾಸರ ವಾಣಿಯಂತೆ, ಬಾಯಿ ಚಪಲಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್‌ ಅವರ ಮೇಲೆ ತೋರಿಕೆಯ ಪ್ರೀತಿ, ಗೌರವ ಪ್ರದರ್ಶನ ಮಾಡುವ ನಿಮ್ಮ ಮನಸ್ಥಿತಿಯನ್ನು ಬದಿಗಿರಿಸಿ ಸಿಎಂ ಸಿದ್ದರಾಮಯ್ಯನವರೇ.. 

ಅಂಬೇಡ್ಕರ್‌ ಅವರನ್ನು ಚುನಾವಣೆಯಲ್ಲಿ ಸೋಲಿಸಿದ, ಅಂಬೇಡ್ಕರ್‌ ಅಂತ್ಯ ಸಂಸ್ಕಾರಕ್ಕೆ ಭೂಮಿ ನೀಡಲು ನಿರಾಕರಿಸಿದ, ಅಂಬೇಡ್ಕರ್‌ ಅವರನ್ನು ಬಿಟ್ಟು, ತಮಗೆ ತಾವೇ ಭಾರತ ರತ್ನ ಕೊಟ್ಟುಕೊಂಡ ನೀಚ ಮನಸ್ಥಿತಿ ನಿಮ್ಮ ಕಾಂಗ್ರೆಸ್ ಪಕ್ಷದ್ದು‌. ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭಾಷಣವನ್ನ ತಿರುಚಿ ಮತ್ತೊಮ್ಮೆ ಬಾಬಾ ಸಾಹೇಬರನ್ನು ಅವಮಾನಿಸುತ್ತಿದ್ದೀರಿ. ಕಾಂಗ್ರೆಸ್ ಅಂಬೇಡ್ಕರ್ ಅವರಿಗೆ ಮಾಡಿದ ಮಹಾ ಮೋಸವನ್ನು, ಮಹಾ ಅಪಮಾನಗಳನ್ನ ಎಳೆ ಎಳೆಯಾಗಿ ದೇಶದ ಜನತೆಯ ಮುಂದೆ ಬಿಚ್ಚಿಟ್ಟ ಅಮಿತ್ ಶಾ ಅವರ ಭಾಷಣದಿಂದ ತಮಗೆ ಮುಜುಗರ, ಹತಾಶೆ ಆಗಿರುವುದು ಆಶ್ಚರ್ಯವೇನಲ್ಲ.

ಇದನ್ನೂ ಓದಿ: ಐಎಎಸ್ Vs ಐಪಿಎಸ್: ರೋಹಿಣಿ ಸಿಂಧೂರಿ ವಿರುದ್ಧ ಮಾನನಷ್ಟ ದೂರು ದಾಖಲಿಸಿದ ಡಿ.ರೂಪಾ!

ತಮಗೆ ತಾವೇ ಭಾರತ ರತ್ನ ಪ್ರಶಸ್ತಿ ಕೊಟ್ಟುಕೊಂಡು ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲು ಹಿಂದೆ ಮುಂದೆ ನೋಡುತ್ತಿದ್ದ ಕಾಂಗ್ರೆಸ್ ಪಕ್ಷವನ್ನು ದೇಹದ ಜನ ತಿರಸ್ಕಾರ ಮಾಡದಿದ್ದರೆ ಇವತ್ತು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ ಕೂಡಾ ಭಾರತ ರತ್ನ ಸಿಗುತ್ತಿತ್ತೇನೋ ಆದರೆ ಅಂಬೇಡ್ಕರ್ ಅವರಿಗೆ ಸಿಗುತ್ತಿರಲಿಲ್ಲ. ಅಂಬೇಡ್ಕರ್‌ ಅವರಿಗೆ ಭಾರತ ರತ್ನ ಎಂಬ ಪರಮೋಚ್ಛ ಗೌರವ ಲಭಿಸಬೇಕಾದರೆ ಬಿಜೆಪಿ ಬೆಂಬಲಿತ ಸರ್ಕಾರ ಬರಬೇಕಾಯಿತು. ಬಾಬಾ ಸಾಹೇಬರ ಶವಸಂಸ್ಕಾರಕ್ಕೂ ಜಾಗ ನೀಡದ ಕಾಂಗ್ರೆಸ್ ಪಕ್ಷವನ್ನ ಜನ ತಿರಸ್ಕಾರ ಮಾಡದಿದ್ದರೆ, ಅಂಬೇಡ್ಕರ್‌ ಜನಿಸಿದ, ವಿದ್ಯಾಭ್ಯಾಸ ಮಾಡಿದ, ಗತಿಸಿದ ಸ್ಥಳ ಸೇರಿದಂತೆ ಅವರಿಗೆ ಸಂಬಂಧಪಟ್ಟ ಐದು ಪ್ರಮುಖ ಸ್ಥಳಗಳು ಇಂದು ಪಂಚತೀರ್ಥಗಳಾಗುತ್ತಿರಲಿಲ್ಲ.

ಹತ್ತಾರು ಕೋಟಿ ಖರ್ಚು ಮಾಡಿ 'ಸಿದ್ದರಾಮೋತ್ಸವ' ಮಾಡಿಸಿಕೊಳ್ಳುವ ತಮಗೆ 'ಅಂಬೇಡ್ಕರ್ ಉತ್ಸವ' ಮಾಡಬೇಕು ಅನ್ನಿಸೋದೇ ಇಲ್ಲ. ಯಾಕೆಂದರೆ ತಮಗೆ ಅಂಬೇಡ್ಕರ್ ನೆನಪಾಗೋದು ಚುನಾವಣೆ ಸಂದರ್ಭದಲ್ಲಿ ಮಾತ್ರ. ಕುರ್ಚಿಗಾಗಿ, ಅಧಿಕಾರಕ್ಕಾಗಿ ಹೈಕಮಾಂಡ್ ನಾಯಕರನ್ನು ಮೆಚ್ಚಿಸಲು ದುಂಬಾಲು ಬೀಳುವ ತಮಗೆ, ಇಂದಿರಾ ಕ್ಯಾಂಟೀನ್ ಬದಲು ಅಂಬೇಡ್ಕರ್ ಕ್ಯಾಂಟೀನ್ ಎಂದು ಹೆಸರಿಡಬಹುದಾಗಿತ್ತು ಎಂದು ಅನ್ನಿಸಲೇ ಇಲ್ಲ. ಯಾಕೆಂದರೆ ತಮಗೆ ಅಂಬೇಡ್ಕರ್ ಅವರ ಬಗ್ಗೆ ಬದ್ಧತೆಯೇ ಇಲ್ಲ. ಆರೂವರೆ ವರ್ಷ ಮುಖ್ಯಮಂತ್ರಿ ಆಗಿರುವ ತಾವು ಯಾವುದಾದರೂ ಒಂದು ಯೋಜನೆಗೆ, ಒಂದು ಕಾರ್ಯಕ್ರಮಕ್ಕೆ ಅಂಬೇಡ್ಕರ್ ಅವರ ಹೆಸರಿಟ್ಟಿದ್ದೀರಾ?

'ಅಮಿತ್ ಶಾ ಅವರ ಭಾಷಣವನ್ನು ತಿರುಚಿ, ಅರ್ಧ ಸತ್ಯ ಹೇಳುವ ವಿಡಿಯೋ ಹಾಕಿ ತಾವು ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಬಹುದಷ್ಟೇ. ಆದರೆ ಅಂಬೇಡ್ಕರ್ ಅವರ ಬಗ್ಗೆ, ಅವರು ರಚಿಸಿದ ಸಂವಿಧಾನದ ಬಗ್ಗೆ ತಮ್ಮ ಹಾಗು ತಮ್ಮ ದಲಿತ ವಿರೋಧಿ ಕಾಂಗ್ರೆಸ್ ಪಕ್ಷದ ಆಷಾಢಭೂತಿತನವನ್ನ ಮರೆಮಾಚಲು ಸಾಧ್ಯವೇ ಇಲ್ಲ. ಅಂಬೇಡ್ಕರ್ ಅವರ ಬಗ್ಗೆ ತಮ್ಮದು ಅಂತರಂಗ ಶುದ್ಧಿಯೂ ಇಲ್ಲದ, ಬಹಿರಂಗ ಶುದ್ಧಿಯೂ ಇಲ್ಲದ ಚುನಾವಣಾ ಬೂಟಾಟಿಕೆ ಮಾತ್ರ ಅನ್ನೋದು ಇಡೀ ರಾಜ್ಯಕ್ಕೆ ಗೊತ್ತಿದೆ' ಎಂದು ಆರ್. ಅಶೋಕ್ ಅವರು ಬರೆದುಕೊಂಡು ಪೋಸ್ಟ್ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರಿದ ಬಾಣಂತಿಯರ ಸಾವು; ನಿನ್ನೆ ಕಲಬುರಗಿ ಭಾಗ್ಯ, ಇಂದು ಚಿಕ್ಕಮಗಳೂರು ಸವಿತಾ ಬಲಿ!

Latest Videos
Follow Us:
Download App:
  • android
  • ios