ಐತಿಹಾಸಿಕ ಸಿದ್ಧಾಂತ ಇರುವ ಏಕೈಕ ಪಕ್ಷ ಕಾಂಗ್ರೆಸ್: ಶಾಸಕ ಕೆ.ವೈ.ನಂಜೇಗೌಡ

ಐತಿಹಾಸಿಕ ಸಿದ್ಧಾಂತವುಳ್ಳ ಏಕೈಕ ಪಕ್ಷ ಕಾಂಗ್ರೆಸ್ ಆಗಿದ್ದು, ಈ ಪಕ್ಷದಲ್ಲಿ ಮಾತ್ರ ಸಾಮಾಜಿಕ ನ್ಯಾಯ ಪಡೆಯಲು ಸಾಧ್ಯ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು. 

Congress is the only party with historical ideology Says MLA KY Nanjegowda gvd

ಮಾಲೂರು (ಮಾ.17): ಐತಿಹಾಸಿಕ ಸಿದ್ಧಾಂತವುಳ್ಳ ಏಕೈಕ ಪಕ್ಷ ಕಾಂಗ್ರೆಸ್ ಆಗಿದ್ದು, ಈ ಪಕ್ಷದಲ್ಲಿ ಮಾತ್ರ ಸಾಮಾಜಿಕ ನ್ಯಾಯ ಪಡೆಯಲು ಸಾಧ್ಯ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು. ಅವರು ಇಲ್ಲಿನ ಮಾಲೂರು ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದ ನಯೀಮ್ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದ ಕಾಂಗ್ರೆಸ್‌ಗೆ ಮಾತ್ರ ಸ್ವಾತಂತ್ರ್ಯದ ಮಹತ್ವದ ಬಗ್ಗೆ ಅರಿವಿದ್ದು, ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟು ಮುಂದುವರೆಯುತ್ತಿದೆ ಎಂದರು.

ಪ್ರಾಧಿಕಾರಕ್ಕೆ ಮುಸ್ಲಿಂ ವ್ಯಕ್ತಿ ಅಧ್ಯಕ್ಷ: ಇಲ್ಲಿನ ಪ್ರಾಧಿಕಾರಕ್ಕೆ ಮುಸ್ಲಿಂ ಜನಾಂಗದವರನ್ನು ಅಧ್ಯಕ್ಷರಾಗಿ ಮಾಡಲಾಗಿದೆ. ಸದಸ್ಯರನ್ನು ಸಹ ಸಾಮಾಜಿಕ ನ್ಯಾಯದಡಿ ನೇಮಕ ಮಾಡಲಾಗಿದೆ. .ಪಕ್ಷ ನಿಷ್ಠೆ ಹಾಗೂ ಕಷ್ಟಕಾಲದಲ್ಲಿ ನನ್ನ ಜತೆ ನಿಂತಿದ್ದ ಕಾರ್ಯಕರ್ತರನ್ನು ಗುರ್ತಿಸಿ ಅಧಿಕಾರ ನೀಡಲಾಗುತ್ತಿದೆ. ಕಾರ್ಯಕರ್ತರು ನಿಷ್ಠೆ, ತಾಳ್ಮೆ ವಹಿಸಿದರೆ ಅಧಿಕಾರ ನಿಮ್ಮನ್ನು ಹುಡುಕಿಕೊಂಡು ಬರಲಿದೆ ಎಂದರು. ಪ್ರಾಧಿಕಾರದ ಈ ಹಿಂದಿನ ಆಡಳಿತವು ಪಟ್ಟಣದ ಅಭಿವೃದ್ಧಿಯಲ್ಲಿ ಕೈ ಜೋಡಿಸಲು ವಿಫಲವಾಗಿದ್ದು, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಸಹ ರಾಜಕೀಯ ಮಾಡಿದರು ಎಂದು ಅಪಾದಿಸಿದ ಶಾಸಕರು, ಈಗಲೂ ಪ್ರಾಧಿಕಾರದ ಮೂಲಕ ಮಾಡಲಾಗುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಈ ಬಗ್ಗೆ ಧೃತಿಗೆಡಬೇಕಾಗಿಲ್ಲ ಎಂದರು.

ಐದು ದಶಕಗಳ ಚುನಾವಣಾ ರಾಜಕಾರಣಕ್ಕೆ ವಿ.ಶ್ರೀನಿವಾಸ ಪ್ರಸಾದ್ ಇಂದು ವಿದಾಯ

₹30 ಕೋಟಿ ವೆಚ್ಚದ ಯೋಜನೆ: ಪ್ರಾಧಿಕಾರದಲ್ಲೇ ೩೦ ಕೋಟಿ ರು.ಗಳನ್ನು ಪಟ್ಟಣದ ಅಭಿವೃದ್ಧಿಗಾಗಿ ವಿನಿಯೋಗಿಸಲಾಗುತ್ತಿದೆ. ೧೦ ಕೋಟಿ ರು.ಗಳನ್ನು ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೆ ವಿನಿಯೋಗಿಸಲಾಗುತ್ತಿದ್ದು, ೨೦ ಕೋಟಿ ರುಗಳನ್ನು ಮಾಲೂರಿನ ದೊಡ್ಡ ಕೆರೆಯನ್ನು ಅಭಿವೃದ್ಧಿ ಪಡಿಸಲು ಮೀಸಲಿಡಲಾಗಿದೆ. ವಾಕಿಂಗ್ ಪಾತ್ , ಕಾಂಪೌಂಡ್ ಸೇರಿದಂತೆ ಹಂತ ಹಂತವಾಗಿ ಎಲ್ಲ ರೀತಿಯ ಸೌಕರ್ಯಗಳನ್ನು ಎರಡು ವರ್ಷದಲ್ಲಿ ಪೂರ್ಣಗೊಳಿಸಲಾಗುವುದು ಎಂದರು.

ಮಾದರಿ ತಾಲೂಕನ್ನಾಗಿಸುವೆ: ನೂತನ ಅಧ್ಯಕ್ಷ ನಯೀಮ್ ಮಾತನಾಡಿ, ನನ್ನ ಮೇಲೆ ನಂಬಿಕೆ ಇಟ್ಟು ಜವಾಬ್ದಾರಿ ನೀಡಿರುವ ರಾಜ್ಯ ಸರ್ಕಾರ, ಉಸ್ತುವಾರಿ ಸಚಿವ ಭೈರತಿ ಸುರೇಶ್ ಹಾಗೂ ಶಾಸಕ ಕೆ.ವೈ.ನಂಜೇಗೌಡ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಶಾಸಕರ ಮಾರ್ಗದರ್ಶದಲ್ಲಿ ಸಹ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಲೂರು ತಾಲೂಕನ್ನು ಮಾದರಿಯಾಗಿ ಮಾಡುವುದಾಗಿ ತಿಳಿಸಿದರು.

ಚುನಾವಣಾ ಬಾಂಡ್‌ ಮೂಲಕ ಬಿಜೆಪಿ ಭ್ರಷ್ಟಾಚಾರ: ತನಿಖೆಗೆ ಮಾಜಿ ಸಚಿವ ರಮಾನಾಥ ರೈ ಆಗ್ರಹ

ಜಿಪಂ ಮಾಜಿ ಅಧ್ಯಕ್ಷೆ ರತ್ನಮ್ಮ ನಂಜೇಗೌಡ, ಪ್ರಾಧಿಕಾರದ ಕಾರ್ಯದರ್ಶಿ ಕೃಷ್ಣಪ್ಪ, ನೂತನ ಸದಸ್ಯರಾದ ನಾಗರಾಜ್. ಮಂಜುನಾಥ್ ರೆಡ್ಡಿ, ಚಿರಂಜೀವಿ , ಜನಪದ ಅಕಾಡಮೆ ಮಾಜಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್, ಅಂಜನಿ ಸೋಮಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯನಾರಸಿಂಹ, ಆಂಜಿನಪ್ಪ, ಪುರಸಭೆ ಸದಸ್ಯರಾದ ಇಂತಿಯಾಜ್, ಮುರಳಿಧರ್, ಬುಲೆಟ್ ವೆಂಕಟೇಶ್, ಜಾಕೀರ್ ಖಾನ್ ,ಆಶ್ವಥ ರೆಡ್ಡಿ,ಹನುಮಂತರೆಡ್ಡಿ,ಶಬ್ಬಿರ‍್ವುಲ್ಲಾ,ತನ್ವೀರ್,ನವೀನ್ ಕುಮಾರ್,ಮಾಸ್ತಿ ಪ್ರವೀಣ್, ಹೇಮಾಮಾಲಿನಿ, ರಹಮತ್ ವುಲ್ಲಾ, ಚಂದ್ರಿಕಾ ಜಗದೀಶ್, ಮಹಾಲಕ್ಷ್ಮಿ, ಹರೀಶ್, ತಬ್ರೇಜ್, ರಾಮಣ್ಣ ಇನ್ನಿತರರು ಇದ್ದರು.

Latest Videos
Follow Us:
Download App:
  • android
  • ios