Asianet Suvarna News Asianet Suvarna News

ಪ್ರಧಾನಿ ಅಭ್ಯರ್ಥಿ ಹೆಸರಲ್ಲಿ ಕಾಂಗ್ರೆಸ್‌ ಮತ ಕೇಳುತ್ತಿಲ್ಲ: ಮಾಜಿ ಸಚಿವ ಸಿ.ಟಿ.ರವಿ ಹೇಳಿದ್ದೇನು?

ಈ ಭಾರಿಯ ಲೋಕಸಭೆ ಚುನಾವಣೆಯಲ್ಲಿ ಮತಗಟ್ಟೆಗೆ ಹೋಗಿ ಮತ ಚಲಾಯಿಸುವ ಮುನ್ನ ಯೋಚಿಸಿ ದೇಶದ ಭದ್ರತೆಗಾಗಿ ಇರುವ ಅಭ್ಯರ್ಥಿಗಳಿಗೆ ಮತ ಹಾಕಬೇಕು, ದೇಶ ವಿರೋಧಿ ಪಕ್ಷ ಕಾಂಗ್ರೆಸ್ ನ್ನು ತಿರಸ್ಕರಿಸಬೇಕು ಎಂದು ಮಾಜಿ ಸಚಿವ ಸಿ.ಟಿ.ರವಿ ಕರೆ ನೀಡಿದರು.

Congress is not asking for votes in the name of PM candidate Says Ex minister CT Ravi gvd
Author
First Published Apr 14, 2024, 4:11 PM IST

ಶ್ರೀನಿವಾಸಪುರ (ಏ.14): ಇತ್ತೀಚೆಗೆ ಕರ್ನಾಟಕ ರಾಜ್ಯದಲ್ಲಿ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದರಿಂದ ವಿಧಾನಸೌಧದಲ್ಲಿಯೇ ಪಾಕಿಸ್ತಾನಕ್ಕೆ ಜೈಕಾರ ಕೂಗಿದರು, ಇನ್ನು ಇಡೀ ಲೋಕಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದರೆ ನಮ್ಮ ಶತೃ ರಾಷ್ಟ್ರ ಪಾಕಿಸ್ತಾನ ಪ್ರೇಮಿಗಳ ಸಂಖ್ಯೆ ಹೆಚ್ಚಾಗಿ ನಮ್ಮ ಭಾರತ ದೇಶವನ್ನು ಯಾವ ಮಟ್ಟಕ್ಕೆ ಕೊಂಡೊಯ್ಯುತ್ತಾರೆ ಎನ್ನುವುದನ್ನು ಊಹಿಸಿ, ಈ ಭಾರಿಯ ಲೋಕಸಭೆ ಚುನಾವಣೆಯಲ್ಲಿ ಮತಗಟ್ಟೆಗೆ ಹೋಗಿ ಮತ ಚಲಾಯಿಸುವ ಮುನ್ನ ಯೋಚಿಸಿ ದೇಶದ ಭದ್ರತೆಗಾಗಿ ಇರುವ ಅಭ್ಯರ್ಥಿಗಳಿಗೆ ಮತ ಹಾಕಬೇಕು, ದೇಶ ವಿರೋಧಿ ಪಕ್ಷ ಕಾಂಗ್ರೆಸ್ ನ್ನು ತಿರಸ್ಕರಿಸಬೇಕು ಎಂದು ಮಾಜಿ ಸಚಿವ ಸಿ.ಟಿ.ರವಿ ಕರೆ ನೀಡಿದರು.

ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಯಲ್ದೂರು, ಹೋಳೂರು, ದಳಸನೂರು ಮತ್ತು ಸುಗಟೂರು ಗ್ರಾಮಗಳಲ್ಲಿ ಕೋಲಾರ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ದೇಶದ ಭದ್ರತೆಗೆ ಮತ್ತು ದೇಶದ ಅಭಿವೃದ್ಧಿಗೆ ಮೋದಿ ತುಂಬಾ ಮುಖ್ಯ, ಕುಕ್ಕರ್ ಬಾಂಬ್ ಇಟ್ಟವರನ್ನು ನನ್ನ ಬ್ರದರ್ಸ್ ಎಂದು ಸಮರ್ಥಿಸಿಕೊಳ್ಳುವ ಕಾಂಗ್ರೆಸ್ ನಾಯಕರು ದೇಶವನ್ನು ಯಾವ ರೀತಿ ಕಾಪಾಡಬಲ್ಲರು ಎಂಬುದನ್ನು ಜನರ ವಿವೇಚನೆಗೆ ಬಿಡುತ್ತೇವೆ, ಒಬ್ಬ ಶಾಸಕರ ಮನೆ ಮತ್ತು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದವರು ಅಮಾಯಕರು ಅವರನ್ನು ಬಿಡುಗಡೆ ಮಾಡಬೇಕು ಎಂದು ಕಾಂಗ್ರೆಸ್ ಶಾಸಕರು ಗೃಹ ಸಚಿವರಿಗೆ ಪತ್ರ ಕೊಡುತ್ತಾರೆ ಎಂದರೆ ಎಂತಹ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದೆ ಎಂಬುದನ್ನು ಜನತೆ ಚಿಂತಿಸಬೇಕಿದೆ ಎಂದರು.

ಬಿಜೆಪಿಗೆ ಸ್ವತಂತ್ರ ಅಸ್ತಿತ್ವ ಇಲ್ಲ, ಜೆಡಿಎಸ್‌ಗೆ ಮಾನ ಮರ್ಯಾದೆ ಇಲ್ಲ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಮೋದಿ ವಿರುದ್ಧ ಕಾಂಗ್ರೆಸ್‌ ಅಪಪ್ರಚಾರ: ಕಾಂಗ್ರೆಸ್‌ ತಮ್ಮ ಸಾಧನೆಗಳನ್ನು ಹೇಳಿಕೊಳ್ಳಲಾಗದೆ ಮೋದಿ ಸುಳ್ಳು ಹೇಳುತ್ತಿದ್ದಾರೆ ಎಂದು ಮೋದಿ ವಿರುದ್ಧ ಅಪಪ್ರಚಾರ ಮಾಡಿಕೊಂಡು ಮತ ಕೇಳುತ್ತಿದ್ದಾರೆ, ದೇಶವನ್ನು ಸುರಕ್ಷಿತವಾಗಿ ಕಾಪಾಡುತ್ತಿರುವುದು, ಕೋವಿಡ್ ಸಮಯದಲ್ಲಿ ದೇಶದ ಜನತೆಗೆ ಲಸಿಕೆ ಕೊಟ್ಟಿದ್ದು, ಉಚಿತವಾಗಿ 10 ಕೆಜಿ ಅಕ್ಕಿ ಕೊಟ್ಟಿದ್ದು, ವಂದೇ ಭಾರತ್‌ ರೈಲು ಕೊಟ್ಟಿದ್ದು, ರಾಷ್ಟ್ರೀಯ ಹೆದ್ದಾರಿಗಳು ಕೊಟ್ಟಿದ್ದು, ವಿಮಾನ ನಿಲ್ದಾಣಗಳು ಕೊಟ್ಟಿದ್ದು, ನೂರಾರು ವರ್ಷಗಳ ಹಿಂದೂಗಳ ಕನಸು ರಾಮಮಂದಿರ ಕೊಟ್ಟಿದ್ದು ಇವೆಲ್ಲಾ ಸುಳ್ಳೇ ಎಂದು ಪ್ರಶ್ನಿಸಿದರು.

ಪ್ರಧಾನಿ ಅಭ್ಯರ್ಥಿ ಹೆಸರಲ್ಲಿ ಕಾಂಗ್ರೆಸ್‌ ಮತ ಕೇಳುತ್ತಿಲ್ಲ: ಬಿಜೆಪಿಯವರು 10 ವರ್ಷಗಳ ಆಡಳಿತದ ಅಭಿವೃದ್ಧಿ ಕೆಲಸಗಳು, ಭ್ರಷ್ಟಾಚಾರ ರಹಿತ ಆಡಳಿತದ ವಿಷಯಗಳ ಆಧಾರದ ಮೇಲೆ ಮೋದಿರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿ ಮಾಡಬೇಕೆಂದು ಮತಯಾಚನೆ ಮಾಡುತ್ತಿದ್ದೇವೆ ಆದರೆ ಕಾಂಗ್ರೆಸ್‌ನ ಅಧಿಕಾರ ಅವಧಿಯಲ್ಲಿ ಮಾಡಿದ ಸಾಧನೆಗಳ ಬಗ್ಗೆ ಜನರ ಮುಂದಿಟ್ಟು ಮತ ಕೇಳುತ್ತಿಲ್ಲ, ಕಾಂಗ್ರೆಸ್ ಪಕ್ಷದ ಮುಂದಿನ ಪ್ರಧಾನಿ ಅಭ್ಯರ್ಥಿ ಹೆಸರು ಹೇಳಿ ಮತ ಕೇಳುತ್ತಿಲ್ಲ ಕೇವಲ ಜಾತಿ, ಧರ್ಮಗಳ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಮಲ್ಲೇಶ್‌ ಬಾಬುಗೂ ಅವಕಾಶ ಕೊಡಿ: ಕೋಲಾರ ಲೋಕಸಬಾ ಕ್ಷೇತ್ರದ ಅಭ್ಯರ್ಥಿ ಮಲ್ಲೇಶ್ ಬಾಬು ಕುಟುಂಬದಲ್ಲಿ ಅವರ ತಂದೆ ಜಿಲ್ಲಾಧಿಕಾರಿಯಾಗಿ ಜಿಲ್ಲೆಗೆ ಸೇವೆ ಮಾಡಿದ್ದರೆ ಅವರ ತಾಯಿ ಕೂಡ ಜಿಪಂ ಅಧ್ಯಕ್ಷರಾಗಿ ಸೇವೆ ಮಾಡಿದ್ದಾರೆ, ಇದೀಗ ಅವರ ಮಗ ಮಲ್ಲೇಶ್ ಬಾಬು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಇವರೂ ಕೋಲಾರ ಜಿಲ್ಲೆಯ ಜನರ ಸೇವೆಗೆ ಕಾಳಜಿ ವಹಿಸಿದ್ದಾರೆ ಅದಕ್ಕಾಗಿ ಲೋಕಸಭಾ ಕ್ಷೇತ್ರದ ಜನ ಮಲ್ಲೇಶ್ ಬಾಬುಗೂ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕಾಗಿದೆ. ಕೋಲಾರ ಲೋಕಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬುರನ್ನು ಗೆಲ್ಲಿಸಿಕೊಡುವ ಮೂಲಕ ರಾಜ್ಯದಲ್ಲಿನ ಬಿಜೆಪಿ ಜೆಡಿಎಸ್ ಮೈತ್ರಿಗೆ ಇನ್ನಷ್ಟು ಬಲ ತುಂಬುವಂತಾಗಲಿ ಎಂದು ಮನವಿ ಮಾಡಿದರು.

ಈ ಚುನಾವಣೆ ಧರ್ಮಯುದ್ಧ ಅಲ್ಲ: ಸರ್ವಜ್ಞನ ವಚನದ ಮೂಲಕ ಬಿಜೆಪಿಗೆ ಟಾಂಗ್ ಕೊಟ್ಟ ಡಿ.ಕೆ.ಶಿವಕುಮಾರ್

ವಿಪ ಸ್ಸದಯ ವೈ.ಎ.ನಾರಾಯಣಸ್ವಾಮಿ, ಇಂಚರ ಗೋವಿಂದರಾಜು, ಜಿಪಂ ಮಾಜಿ ಅದ್ಯಕ್ಷ ತೂಪಲ್ಲಿ ಆರ್ ನಾರಾಯಣಸ್ವಾಮಿ, ಮಾಜಿ ಸದಸ್ಯ ಎಂ.ಶ್ರೀನಿವಾಸ್, ರಾಜಶೇಖರರೆಡ್ಡಿ, ರಾಜಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ವೇಣುಗೋಪಾಲ್, ತಾಲೂಕು ಅಧ್ಯಕ್ಷ ರೊಣೂರು ಚಂದ್ರ ಶೇಖರ್, ಟಿಎಪಿಎಂಸಿ ಅಧ್ಯಕ್ಷ ವಡಗೂರು ರಾಮು, ಮುಖಂಡರಾದ ಲಾಯರ್ ಶಿವಾರೆಡ್ಡಿ, ಗಾಯತ್ರಿ ಮುತ್ತಪ್ಪ, ಎಸ್‌ಎಲ್‌ಎನ್ ಮಂಜುನಾಥ್ ಇದ್ದರು.

Follow Us:
Download App:
  • android
  • ios