ಚಿಕ್ಕಮಗಳೂರು: ಕಾಂಗ್ರೆಸ್ ಮೋಸ್ಟ್ ಕಮ್ಯುನಲ್ ಅಂಡ್ ಕ್ರಿಮಿನಲ್ ಪಾರ್ಟಿ, ಸಿ.ಟಿ.ರವಿ
ಕಾಂಗ್ರೆಸ್ಸಿಗರು ಮೊದಲು ಮಕ್ಕಳು-ಮಂತ್ರಿಗಳನ್ನ ನಿಲ್ಲಿಸೋದಕ್ಕೆ ಯೋಚನೆ ಮಾಡುತ್ತಿದ್ದರು. ಈಗ ಮಕ್ಕಳು-ಮಂತ್ರಿಗಳು ಎಲ್ಲರೂ ಹಿಂದೇಟು ಹಾಕುತ್ತಿದ್ದಾರೆ. ನಾವು ರಾಜ್ಯ ಬಿಟ್ಟು ಹೋಗಲ್ಲ ಎನ್ನುತ್ತಿದ್ದು, ಸೋಲುತ್ತಿವಿ ಅಂತ ಗೊತ್ತು. ಅದಕ್ಕೆ ಚುನಾವಣೆಗೆ ನಿಲ್ಲುತ್ತಿಲ್ಲ: ಮಾಜಿ ಸಚಿವ ಸಿ.ಟಿ.ರವಿ
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಫೆ.24): ನಮ್ಮ ಅತಿರೇಕದ ಚಟುವಟಿಕೆ ಇನ್ನೊಬ್ಬರಿಗೆ ಆಹಾರವಾಗಬಾರದು. ನಮ್ಮ ಪಕ್ಷದಲ್ಲಿ ಟಿಕೆಟ್ ಕೊಡುವ ಮಾನದಂಡ ಬೇರೆಯೇ ಇದೆ. ಈ ಕಾರಣಕ್ಕೆ ಯಾರೂ ಇಂತಹ ಕೆಲಸವನ್ನು ಮಾಡಬಾರದು ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ಶೋಭಾ ಕರಂದ್ಲಾಜೆ ಅವರ ವಿರುದ್ಧ ಕೆಲವರು ನಡೆಸಿರುವ ಚಟುವಟಿಕೆಗಳ ಬಗ್ಗೆ ಇಂದು(ಶನಿವಾರ) ನಗರದಲ್ಲಿ ಪ್ರತಿಕ್ರಿಯಿಸಿದ ಸಿ.ಟಿ.ರವಿ ಅವರು, ನಮ್ಮಲ್ಲಿ ಟಿಕೆಟ್ ಕೊಡುವ ಪದ್ಧತಿ ಹೇಗಿದೆ ಎನ್ನುವುದು ನನಗೆ ಗೊತ್ತಿದೆ. ಈ ರೀತಿಯ ಪ್ರಕ್ರಿಯೆಗಳಿಂದ ಯಾರಿಗೂ ಟಿಕೆಟ್ ಸಿಗುವುದಿಲ್ಲ. ಅದು ತಪ್ಪು ಕಲ್ಪನೆ, ನಾನಂತು ಟಿಕೆಟ್ ಕೇಳಿ ಪಡೆದುಕೊಳ್ಳುವುದಿಲ್ಲ. ಹಾಗೆ ಕೇಳುವುದು ಇಷ್ಟು ವರ್ಷ ಯಾವ ವಿಚಾರ ಕೇಳಿ ಬೆಳೆದಿದ್ದೇವೆ ಅದಕ್ಕೆ ಪೂರಕವಾಗುವುದಿಲ್ಲ ಎಂದರು.ನಮ್ಮಲ್ಲಿ ಯಾವುದೇ ಬಣಗಳಿಲ್ಲ ಬಿಜೆಪಿ ಮಾತ್ರ ಇದೆ. ಬಿಜೆಪಿಗೇ ಹಿಂದೆ ಕೆಲಸ ಮಾಡಿದ್ದೇವೆ. ಮುಂದೆಯೂ ಪಕ್ಷಕ್ಕಾಗಿ ಕೆಲಸ ಮಾಡುತ್ತೇವೆ. ನಮ್ಮ ನಿಷ್ಠೆಯನ್ನ ಯಾರಿಗೂ ಎದೆ ಬಗೆದು ತೋರಿಸಲು ಆಗುವುದಿಲ್ಲ. ಒಂದು ಚುನಾವಣೆಗೊಂದು, ಇನ್ನೊಂದು ಚುನಾವಣೆಗೊಂದು ನೀತಿಯವರು ನಾವಲ್ಲ. ಹುಟ್ಟಿದ್ದು ಬಿಜೆಪಿಯಲ್ಲೇ ಸಾಯುವುದೂ ಬಿಜೆಪಿಯಲ್ಲೇ ಎಂದರು.
ಚಿಕ್ಕಮಗಳೂರು: ಸಾಮಾಜಿಕ ಜಾಲತಾಣದಲ್ಲಿ ಗೋಬ್ಯಾಕ್ ಶೋಭಾ ಕರಂದ್ಲಾಜೆ ಅಭಿಯಾನ..!
ಮೋದಿ ಮತ್ತೊಮ್ಮೆ, ಕಮಲವೇ ನಮ್ಮ ಅಭ್ಯರ್ಥಿ :
ನಮ್ಮ ಪಕ್ಷ ನಿಷ್ಠೆಯನ್ನು ಪ್ರಶ್ನೆ ಮಾಡುವ ಧೈರ್ಯ ಯಾರಿಗೂ ಇಲ್ಲ. ನಮ್ಮ ನಿಯತ್ತೇನು ಎನ್ನುವುದು ಎಲ್ಲರಿಗೂ ಗೊತ್ತಿದೆ. ಅದನ್ನು ಪ್ರಶ್ನೆ ಮಾಡಲು ಅವಕಾಶವನ್ನೇ ಕೊಟ್ಟಿಲ್ಲ. ಅಕಸ್ಮಾತ್ ಟಿಕೆಟ್ ಕೊಟ್ಟರೆ ಎನ್ನುವ ಕಲ್ಪಿತ ಉತ್ತರಕ್ಕೆಲ್ಲ ಉತ್ತರಿಸುವುದಿಲ್ಲ. ಪಕ್ಷ ಏನು ಹೇಳುತ್ತದೆ ಅದನ್ನು ಪಾಲಿಸುತ್ತೇನೆ ಎಂದರು.ಪಾರ್ಲಿಮೆಂಟರಿ ಬೋರ್ಡ್ ಮೀಟಿಂಗ್ ಆದ ಮೇಲೆ ಯಾರಿಗೆ ಟಿಕೆಟ್ ಎನ್ನುವುದನ್ನು ಯೋಚಿಸಲಾಗುತ್ತದೆ. ಈಗ ಅಂತಿಮವಾಗಿರುವುದು ಒಂದೇ ಅಂಶ ಅದು ಮೋದಿ ಮತ್ತೊಮ್ಮೆ, ಕಮಲವೇ ನಮ್ಮ ಅಭ್ಯರ್ಥಿ, ಬಿಜೆಪಿ ಗೆಲ್ಲಬೇಕು ಎನ್ನುವುದು ಮಾತ್ರ ಎಂದರು.
ಕಾಂಗ್ರೆಸ್ ಮೋಸ್ಟ್ ಕಮ್ಯುನಲ್ ಅಂಡ್ ಕ್ರಿಮಿನಲ್ ಪಾರ್ಟಿ :
ಕಾಂಗ್ರೆಸ್ ಮೋಸ್ಟ್ ಕಮ್ಯುನಲ್ ಅಂಡ್ ಕ್ರಿಮಿನಲ್ ಪಾರ್ಟಿ ,ಕಾಂಗ್ರೆಸಿಗರು ಹುಂಡಿಯ ಹಣಕ್ಕೂ ಕೈ ಹಾಕಿದ್ದಾರೆ. ಇವರು ನಿಜವಾಗಲೂ ಜಾತ್ಯಾತೀತರ ಎಂದು ಪ್ರಶ್ನಿಸಿದ್ದಾರೆ. ಇವರು ನಿಜವಾದ ಜಾತ್ಯಾತೀತರಾಗಿದರೆ ಹುಂಡಿ ಕಳ್ಳರಾಗುತ್ತಿರಲಿಲ್ಲ ಎಂದು ಲೇವಡಿ ಮಾಡಿದ್ದಾರೆ. ತಮ್ಮ ಹೆಸರಲ್ಲಿ ರಾಮ-ಕೃಷ್ಣ-ಶಿವ ಇದ್ದಾನೆ ಅನ್ನೋದು ನಿಜವಾದರೆ ಭಕ್ತರ ಹುಂಡಿಗೆ ಕೈ ಹಾಕುತ್ತಿರಲಿಲ್ಲ ಎಂದು ಲೇವಡಿ ಮಾಡಿದ್ದಾರೆ. ಜಾತ್ಯಾತೀತತೆ ಅಂದರೆ ದೇವಸ್ಥಾನದ ಹುಂಡಿಗೆ ಮಾತ್ರ ಕೈ ಹಾಕುವುದಾ. ಕಾಂಗ್ರೆಸ್ ಮೋಸ್ಟ್ ಕಮ್ಯುನಲ್ ಅಂಡ್ ಕ್ರಿಮಿನಲ್ ಪಾರ್ಟಿ ಎಂದು ವಾಗ್ದಾಳಿ ನಡೆಸಿದ್ದಾರೆ. ಇವರು ನಿಜವಾದ ಜಾತ್ಯಾತೀತರಾಗಿದ್ದರೆ ಮಸೀದಿ-ಚರ್ಚ್-ಮಂದಿರ ಎಲ್ಲದರಲ್ಲೂ 10% ಎಂದು ಹೇಳುತ್ತಿದ್ದರು. ಮಸೀದಿ-ಚರ್ಚ್ ಬಿಟ್ಟು ಕೇವಲ ಮಂದಿರದ ಹಣಕ್ಕೆ ಮಾತ್ರ ಕೈ ಹಾಕಿದ್ದಾರೆ. ಇವರು ಕಮ್ಯುನಲ್ ಅಂಡ್ ಕ್ರಿಮಿನಲ್ ಅಲ್ಲದೆ ಮತ್ತೇನು ಎಂದು ಕಿಡಿ ಕಾರಿದ್ದಾರೆ.
ಇದೇ ವೇಳೆ ಲೋಕಸಭೆ ಚುನಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ಸಿಗರಿಗೆ ಸೋಲು ಕಟ್ಟಿಟ್ಟ ಬುತ್ತಿ ಅಂತ ಚೆನ್ನಾಗಿ ಗೊತ್ತಿದೆ. ಸೋಲೋದಕ್ಕೆ ಯಾರು- ಏಕೆ ಚುನಾವಣೆಗೆ ನಿಲ್ಲುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ಸಿಗರು ಮೊದಲು ಮಕ್ಕಳು-ಮಂತ್ರಿಗಳನ್ನ ನಿಲ್ಲಿಸೋದಕ್ಕೆ ಯೋಚನೆ ಮಾಡುತ್ತಿದ್ದರು. ಈಗ ಮಕ್ಕಳು-ಮಂತ್ರಿಗಳು ಎಲ್ಲರೂ ಹಿಂದೇಟು ಹಾಕುತ್ತಿದ್ದಾರೆ. ನಾವು ರಾಜ್ಯ ಬಿಟ್ಟು ಹೋಗಲ್ಲ ಎನ್ನುತ್ತಿದ್ದು, ಸೋಲುತ್ತಿವಿ ಅಂತ ಗೊತ್ತು. ಅದಕ್ಕೆ ಚುನಾವಣೆಗೆ ನಿಲ್ಲುತ್ತಿಲ್ಲ ಎಂದರು.
ಮುನಿಯಪ್ಪನವರೇ ನಿಮ್ಮ ಅಕ್ಕಿ ಎಲ್ಲಿ?, ಅನ್ನಭಾಗ್ಯದ ರೈಸ್ ಎಲ್ಲಿ ಕೊಟ್ಟಿದ್ದೀರಿ: ಸಿ.ಟಿ.ರವಿ ಪ್ರಶ್ನೆ
ಈಗ ಸಿದ್ದರಾಮಯ್ಯನವರು ಸಿಎಂ ಆಗಿದ್ದಾರೆ. ಮೆಜಾರಿಟಿ ಅವರ ಪಕ್ಷಕ್ಕೆ ಇದೆ. ಯಾರನ್ನಾಬೇಕಾದರೂ ಮುಖ್ಯಮಂತ್ರಿ ಮಾಡಿಕೊಳ್ಳಲಿ. ಮುಖ್ಯಮಂತ್ರಿಯ ಕಾಲು ಎಳೆಯುತ್ತಿರೋದು ಯಾರು, ನಾವಾ ಎಂದು ಪ್ರಶ್ನಿಸಿದ್ದಾರೆ. ದಲಿತ ಸಿಎಂ ಹುಟ್ಟುಹಾಕಿದ್ದು ಯಾರು. ಮುಂದಿನ ಮುಖ್ಯಮಂತ್ರಿ ಡಿಕೆಶಿ ಅಂದವರು ಯಾರು ಎಂದು ಪ್ರಶ್ನಿಸಿದ್ದಾರೆ.
ಜನರಿಗೆ ಕುಡಿಯೋಕೆ ನೀರು ಕೊಡಿ :
ರಾಜ್ಯದಲ್ಲಿ ಬರ ಇದೆ, ಬರದಿಂದ ಜನ ಕಂಗಾಲಾಗಿದ್ದಾರೆ, ಕುಡಿಯೋಕೆ ನೀರಿಲ್ಲ. ಅವನು ಸಿಎಂ, ಇವನು ಸಿಎಂ ಅನ್ನೋದ ಬಿಟ್ಟು ಜನರಿಗೆ ಕುಡಿಯೋಕೆ ನೀರು ಕೊಡಿ. ಉತ್ತರ ಕರ್ನಾಟಕದಲ್ಲಿ ಜನ ಗುಳೇ ಹೋಗುತ್ತಿದ್ದಾರೆ. ಮೊದಲು ಅದನ್ನ ತಡೆಯಿರಿ. ದನಕರುಗಳಿಗೆ ಕುಡಿಯೋಕೆ ನೀರಿಲ್ಲ, ಮೇವಿಲ್ಲ ಮೊದಲು ಅದನ್ನ ನಿರ್ವಹಿಸುವ ಕೆಲಸ ಮಾಡಿ. ರಾಜ್ಯದ ಜನ ಕಷ್ಟದಲ್ಲಿರುವಾಗ ನಾನ್ ಸಿಎಂ, ನಾನ್ ಸಿಎಂ ಅಂತ ಕಿತ್ತಾಡೋಕೆ ಆಗುತ್ತಾ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.