ಚಿಕ್ಕಮಗಳೂರು: ಸಾಮಾಜಿಕ ಜಾಲತಾಣದಲ್ಲಿ ಗೋಬ್ಯಾಕ್ ಶೋಭಾ ಕರಂದ್ಲಾಜೆ ಅಭಿಯಾನ..!

2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಶೋಭಾ ಕರಂದ್ಲಾಜೆ ಅವರಿಗೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ನೀಡಬಾರದು. ಹೊಸಬರಿಗೆ ಟಿಕೆಟ್ ನೀಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ, ಕೇಂದ್ರ ಗೃಹ ಸಚಿವ ಅಮಿಷ್ ಷಾ ಅವರಿಗೆ ನಗರದ ಕೇಂದ್ರ ಅಂಚೆ ಕಚೇರಿಯಿಂದ ಪತ್ರವನ್ನು ರವಾನಿಸಿದ್ದರು.ಇದರ ಬೆನ್ನಲೆ ಗೋಬ್ಯಾಕ್ ಶೋಭಾ ಅಭಿಯಾನ ತೀವ್ರತೆ ಪಡೆದುಕೊಳ್ಳುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಶೋಭಾ ಕರಂದ್ಲಾಜೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. 

Goback Shobha Karandlaje campaign on social media in Chikkamagaluru grg

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಫೆ.22):  ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಲೋಕಸಭೆ ಟಿಕೆಟ್ ನೀಡಬಾರದೆಂಬ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಬಿಜೆಪಿ ಹೈಕಮಾಂಡ್ಗೆ ಪತ್ರ ರವಾನಿಸಿದ ಕೆಲವರು ಈಗ ಸಾಮಾನಿಕ ಜಾಲತಾಣದಲ್ಲಿ ಗೋಬ್ಯಾಕ್ ಶೋಭಾ ಕರಂದ್ಲಾಜೆ ಅಭಿಯಾವನ್ನು ಮುನ್ನೆಲೆಗೆ ತಂದಿದ್ದಾರೆ.

ಶೋಭಾ ಹಠಾವೋ ಬಿಜೆಪಿ ಬಚಾವೋ ಅಭಿಯಾನ : 

2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಶೋಭಾ ಕರಂದ್ಲಾಜೆ ಅವರಿಗೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ನೀಡಬಾರದು. ಹೊಸಬರಿಗೆ ಟಿಕೆಟ್ ನೀಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ, ಕೇಂದ್ರ ಗೃಹ ಸಚಿವ ಅಮಿಷ್ ಷಾ ಅವರಿಗೆ ನಗರದ ಕೇಂದ್ರ ಅಂಚೆ ಕಚೇರಿಯಿಂದ ಪತ್ರವನ್ನು ರವಾನಿಸಿದ್ದರು.ಇದರ ಬೆನ್ನಲೆ ಗೋಬ್ಯಾಕ್ ಶೋಭಾ ಅಭಿಯಾನ ತೀವ್ರತೆ ಪಡೆದುಕೊಳ್ಳುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಶೋಭಾ ಕರಂದ್ಲಾಜೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಶೋಭಾ ಹಠಾವೋ ಬಿಜೆಪಿ ಬಚಾವೋ ಅಭಿಯಾನ ನಡೆಸುತ್ತಿದ್ದಾರೆ. 3583 ದಿನಗಳಲ್ಲಿ 100 ದಿನವೂ ಕ್ಷೇತ್ರಕ್ಕೆ ಬಾರದ ಸಂಸದೆ ಬೇಕೆ? ಕ್ಷೇತ್ರಕ್ಕೆ ಬಾರದ ಎಂ.ಪಿ. ನಮ್ಮಗೆ ಬೇಡವೇ ಬೇಡ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ.ಮೋದಿ ಗೆಲ್ತಾರೆ, ಬಿಜೆಪಿ ಗೆಲ್ಬೇಕು ಅಂದ್ರ ಶೋಭಾ ಕರಂದ್ಲಾಜೆ ಹಠಾವೋ ಉಡುಪಿ-ಚಿಕ್ಕಮಗಳೂರು ಬಚಾವೋ, 3583 ದಿನಗಳಲ್ಲಿ 100 ದಿನವು ಕ್ಷೇತ್ರಕ್ಕೆ ಬಾರದ ಎಂ.ಪಿ. ನಮ್ಮಗೆ ಬೇಕೆ? ದಿನಕ್ಕೆ 18ಗಂಟೆ ಕೆಲಸ ಮಾಡುವ ಮೋದಿ ಎಲ್ಲಿ? ಕ್ಷೇತ್ರಕ್ಕೆ ಬಾರದ ಶೋಭಾ ಕರಂದ್ಲಾಜೆ ಎಲ್ಲಿ? ಕ್ಷೇತ್ರಕ್ಕೆ ಬಾರದ ಎಂ.ಪಿ. ಬೇಡವೇ ಬೇಡ, 2024ರ ಮೋದಿ ಗೆಲುವಿಗಾಗಿ ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಬದಲಾಗಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ.

ಚಿಕ್ಕಮಗಳೂರು: ಸಚಿವೆ ಕರಂದ್ಲಾಜೆಗೆ ಸ್ವಕ್ಷೇತ್ರದಲ್ಲೇ ವಿರೋಧ, ಬಿಜೆಪಿ ಕಾರ್ಯಕರ್ತರಿಂದ ಶೋಭಾ ವಿರುದ್ಧ ಪತ್ರ ಅಭಿಯಾನ

ನೂತನ ಅಭ್ಯರ್ಥಿಗೆ ಅವಕಾಶ ನೀಡುವಂತೆ ಒತ್ತಾಯ : 

ಕ್ಷೇತ್ರಕ್ಕೆ ಬಾರದ ಶೋಭಾ ಕರಂದ್ಲಾಜೆ ಈ ಬಾರೀ ಕ್ಷೇತ್ರ ಬದಲಿಸಿ ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರಕ್ಕೆ ನೂತನ ಅಭ್ಯರ್ಥಿಗೆ ಅವಕಾಶ ಮಾಡಿಕೊಡಿ ಗೋಬ್ಯಾಕ್ ಶೋಭಾ ಎಂದು ಪೋಸ್ಟ್ ಮಾಡಲಾಗಿದ್ದು, ದಿನದಿಂದ ದಿನಕ್ಕೆ ಗೋಬ್ಯಾಕ್ ಶೋಭಾ ಅಭಿಯಾನ ತೀವ್ರತೆ ಪಡೆದುಕೊಳ್ಳುತ್ತಿದೆ. ಒಟ್ಟಾರೆ ಸ್ವಪಕ್ಷದವರಿಂದ ಗೋಬ್ಯಾಕ್ ಶೋಭಾ ಅಭಿಯಾನದಿಂದ ಕೇಂದ್ರ ಸಚಿವರು ತೀವ್ರ ಮುಜುಗರಕ್ಕೆ ಒಳಗಾಗುವಂತಾಗಿದೆ.

Latest Videos
Follow Us:
Download App:
  • android
  • ios