ರಾಜಸ್ಥಾನದಲ್ಲಿ ಕಾಂಗ್ರೆಸ್‌ ಆಂತರಿಕ ಕಚ್ಚಾಟ ಭುಗಿಲು: ಪೈಲೆಟ್ ಗೆಹ್ಲೋಟ್ ಮಧ್ಯೆ ಫೈಟ್

ರಾಜಸ್ಥಾನ ಕಾಂಗ್ರೆಸ್‌ ನಡುವಿನ ಆಂತರಿಕ ಬಿಕ್ಕಟ್ಟು ಇನ್ನಷ್ಟು ತೀವ್ರಗೊಂಡಿದ್ದು, ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರು ಗುರುವಾರ ತಮ್ಮದೇ ಪಕ್ಷದ ಪ್ರಮುಖ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಸಚಿನ್‌ ಪೈಲಟ್‌ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದಾರೆ. ‘ಅಸಮರ್ಥ ಹಾಗೂ ದ್ರೋಹಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಸಾಧ್ಯವಿಲ್ಲ’ ಎಂದು ಪೈಲಟ್‌ ವಿರುದ್ಧ ಕಿಡಿಕಾರಿದ್ದಾರೆ.

Congress internal conflict erupts in Rajasthan: Fight between sachin Pilot and Ashok Gehlot akb

ಜೈಪುರ್‌: ರಾಜಸ್ಥಾನ ಕಾಂಗ್ರೆಸ್‌ ನಡುವಿನ ಆಂತರಿಕ ಬಿಕ್ಕಟ್ಟು ಇನ್ನಷ್ಟು ತೀವ್ರಗೊಂಡಿದ್ದು, ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರು ಗುರುವಾರ ತಮ್ಮದೇ ಪಕ್ಷದ ಪ್ರಮುಖ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಸಚಿನ್‌ ಪೈಲಟ್‌ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದಾರೆ. ‘ಅಸಮರ್ಥ ಹಾಗೂ ದ್ರೋಹಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಸಾಧ್ಯವಿಲ್ಲ’ ಎಂದು ಪೈಲಟ್‌ ವಿರುದ್ಧ ಕಿಡಿಕಾರಿದ್ದಾರೆ.

ಇದರ ಬೆನ್ನಲ್ಲೇ ಪೈಲಟ್‌ ತಿರುಗೇಟು ನೀಡಿದ್ದು, ‘ನನ್ನನ್ನು ಗೆಹ್ಲೋಟ್‌ ಅಸಮರ್ಥ ಹಾಗೂ ದ್ರೋಹಿ ಎಂದಿದ್ದಾರೆ. ಇವು ಸುಳ್ಳು ಹಾಗೂ ಅನಗತ್ಯ ಆರೋಪಗಳು. ಆರೋಪ ಮಾಡುವ ಬದಲು ಪಕ್ಷ ಬಲಪಡಿಸಬೇಕು’ ಎಂದು ಕಿಡಿಕಾರಿದ್ದಾರೆ. ಪರಿಸ್ಥಿತಿಯ ಸೂಕ್ಷ್ಮತೆ ಅರಿತು ಕಾಂಗ್ರೆಸ್‌ ಹೈಕಮಾಂಡ್‌ ಮಧ್ಯ ಪ್ರವೇಶಿಸಿದ್ದು, ‘ಗೆಹ್ಲೋಟ್‌ (Ashok Gehlot)ಹಿರಿಯ ನಾಯಕ. ಅವರು ಹಾಗೂ ಪೈಲಟ್‌ (sachin Pilot) ಮಧ್ಯದ ಭಿನ್ನಮತ ಶಮನ ಮಾಡಿ ಪಕ್ಷ ಬಲಗೊಳಿಸಲಾಗುವುದು’ ಎಂದು ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ (Jairam Ramesh) ಹೇಳಿದ್ದಾರೆ.

ಗೆಹ್ಲೋಟ್‌ ಕಿಡಿ:

ಎನ್‌ಡಿಟೀವಿ ಸಂದರ್ಶನದಲ್ಲಿ ಮಾತನಾಡಿದ ಗೆಹ್ಲೋಟ್‌ ಅವರು, ‘ಕಾಂಗ್ರೆಸ್‌ ಹೈಕಮಾಂಡ್‌ ('Congress high command) ಸಚಿನ್‌ ಪೈಲಟ್‌ರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಲು ಸಾಧ್ಯವಿಲ್ಲ. 10 ಶಾಸಕರ ಬೆಂಬಲವೂ ಇಲ್ಲದ ಅವರು ಪಕ್ಷದ ವಿರುದ್ಧವೇ ದಂಗೆ ಎದ್ದಿದ್ದರು. ಈ ಮೂಲಕ ಅವರು ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ. ಅವರೊಬ್ಬ ದ್ರೋಹಿ. ಅಸಮರ್ಥ’ ಎಂದರು.

ಗೆಹ್ಲೋಟ್ ಆಪ್ತ ಸಚಿವರ ವಜಾಗೆ ಪೈಲೆಟ್ ಬಣ ಆಗ್ರಹ, ಅಲುಗಾಡುತ್ತಿದೆ ರಾಜಸ್ಥಾನ ಕಾಂಗ್ರೆಸ್ ಸರ್ಕಾರ!

ಇತ್ತೀಚೆಗೆ ಕಾಂಗ್ರೆಸ್‌ ಅಧ್ಯಕ್ಷನ ಚುನಾವಣೆಯಲ್ಲಿ ಅಶೋಕ್‌ ಗೆಹ್ಲೋಟ್‌ ಹೆಸರು ಮುಂಚೂಣಿಯಲ್ಲಿದ್ದಾಗ ರಾಜಸ್ಥಾನದಲ್ಲಿ ಸಚಿನ್‌ ಪೈಲಟ್‌ರನ್ನೇ ಮುಖ್ಯಮಂತ್ರಿಯಾಗಲು ಹೈಕಮಾಂಡ್‌ ಮನಸ್ಸು ಮಾಡಿತ್ತು. ಇದನ್ನು ವಿರೋಧಿಸಿ ಗೆಹ್ಲೋಟ್‌ ಬಣದ 90 ಶಾಸಕರು ತಮ್ಮ ರಾಜೀನಾಮೆ ನೀಡಲು ಮುಂದಾಗಿದ್ದರು. ಆದರೆ ಕೊನೆಗೆ ಗೆಹ್ಲೋಟ್‌ ಅವರನ್ನೇ ಹೈಕಮಾಂಡ್‌ ಸಿಎಂ ಆಗಿ ಮುಂದುವರಿಸಿತ್ತು. ಆಗ ಶಾಸಕರ ದಂಗೆಗೆ ಶಾಸಕರ ಗೆಹ್ಲೋಟ್‌ ಕ್ಷಮೆ ಕೇಳಿದ್ದರು. ಈ ನಡುವೆ, 2 ದಿನದ ಹಿಂದೆ ಮತ್ತೆ ಪೈಲಟ್‌ಗೆ ಸಿಎಂ ಪಟ್ಟಕಟ್ಟುವ ಕೂಗು ಅವರ ಬೆಂಬಲಿಗರು ಹಾಗೂ ಪೈಲಟ್‌ರ ಗುರ್ಜರ್‌ ಸಮುದಾಯದಿಂದ ಎದ್ದಿತ್ತು.

ಶ್ರದ್ಧಾ ಹತ್ಯೆ ಆಕಸ್ಮಿಕವಾಗಿ ನಡೆದ ಘಟನೆ, ಇದು ಸಾಮಾನ್ಯ, ಗೆಹ್ಲೋಟ್ ವಿವಾದಾತ್ಮಕ ಹೇಳಿಕೆ!

Latest Videos
Follow Us:
Download App:
  • android
  • ios