ಶ್ರದ್ಧಾ ಹತ್ಯೆ ಆಕಸ್ಮಿಕವಾಗಿ ನಡೆದ ಘಟನೆ, ಇದು ಸಾಮಾನ್ಯ, ಗೆಹ್ಲೋಟ್ ವಿವಾದಾತ್ಮಕ ಹೇಳಿಕೆ!
ಇದು ಸಾಮಾನ್ಯ. ಇದರಲ್ಲೇನು ವಿಶೇಷ. ಆಕಸ್ಮಿಕವಾಗಿ ಹತ್ಯೆಯಾಗಿದೆ. ಇದು ಹೊಸ ವಿಚಾರವಲ್ಲ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೀಡಿರುವ ಹೇಳಿಕೆ ಇದೀಗ ಬಾರಿ ವಿವಾದಕ್ಕೆ ಕಾರಣವಾಗಿದೆ.
ಜೈಪುರ(ನ.22): ದೆಹಲಿಯ ಶ್ರದ್ಧಾ ಹತ್ಯೆ ಪ್ರಕರಣ ಇಡೀ ದೇಶವನ್ನೇ ಆತಂಕದಲ್ಲಿ ದೂಡಿದೆ. ಪ್ರಕರಣದ ತನಿಖೆಗೆ ಒಂದೊಂದೆ ಸ್ಫೋಟಕ ವಿಚಾರಗಳು ಬಯಲಾಗುತ್ತಿದೆ. ಲಿವ್ ಇನ್ ರಿಲೇಶನ್‌ನಲ್ಲಿದ್ದ ಗೆಳತಿ ಶ್ರದ್ಧಾಳನ್ನು 36 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟ ಆರೋಪಿ ಅಫ್ತಾಬ್ ಕೃತ್ಯ ನಿಜಕ್ಕೂ ಬೆಚ್ಚಿ ಬೀಳಿಸುತ್ತಿದೆ. ಆದರೆ ಹತ್ಯೆ ಅಚಾನಕ್ಕಾಗಿ ನಡೆದ ಘಟನೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ಅಂತರ್ಜಾತಿಯಲ್ಲಿ ನಡೆಯುವ ವಿವಾಹ, ರಿಲೇಶನ್‌ಶಿಪ್ ಕುರಿತು ಸಮರ್ಥಿಸಿಕೊಳ್ಳಲು ಹೋದ ಕಾಂಗ್ರೆಸ್ ನಾಯಕ ಇದೀಗ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಶ್ರದ್ಧಾ ಹತ್ಯೆ ಅಚಾನಕ್ಕಾಗಿ ನಡೆದ ಕೊಲೆ. ಇದು ಹೊಸ ವಿಚಾರವಲ್ಲ. ಸಾಮಾನ್ಯವಾಗಿ ಹತ್ಯೆಗಳು ನಡೆಯುತ್ತಿರುತ್ತವೆ ಎಂದು ಗೆಹ್ಲೋಟ್ ಹೇಳಿದ್ದಾರೆ.
ಶತ ಶತಮಾನಗಳಿಂದ ಭಾರತದಲ್ಲಿ ಅಂತರ್ಜಾತಿ ವಿವಾಹ ನಡೆಯುತ್ತಿದೆ. ಇದು ಹೊಸ ವಿಚಾರವಲ್ಲ. ಆದರೆ ಬಿಜೆಪಿ ಒಂದು ಸಮುದಾಯವನ್ನು ಟಾರ್ಗೆಟ್ ಮಾಡುತ್ತಿದೆ. ಬಿಜೆಪಿಗೆ ಧರ್ಮ, ಜಾತಿ ಹೆಸರಿನಲ್ಲಿ ಜನರನ್ನು ಒಡೆಯುವ ಕೆಲಸ ಮಾತ್ರ ಗೊತ್ತಿದೆ. ಅಂರ್ಜಾತಿ ವಿವಾಹ, ಅಂತರ್ಜಾತಿ ರಿಲೇಶನ್‌ಶಿಪ್‌ನ್ನು ಬಿಜೆಪಿ ಸಹಿಸಿಕೊಳ್ಳಲ್ಲ. ಹೀಗಾಗಿ ಬಿಜೆಪಿ ಒಂದು ಸಮುದಾಯವನ್ನೇ ಟಾರ್ಗೆಟ್ ಮಾಡುತ್ತಿದೆ ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ಅಂತರ್ಜಾತಿ ವಿವಾಹ ಹಾಗೂ ಬಿಜಪಿ ಧರ್ಮ ಹಾಗೂ ಜಾತಿ ಒಡೆಯುವ ಆರೋಪವನ್ನು ಸಮರ್ಥಿಸಿಕೊಳ್ಳಲು ಶ್ರದ್ಧಾ ಹತ್ಯೆ ಅಚಾನಕ್ಕಾಗಿ ನಡೆದ ಘಟನೆ, ಇದರಲ್ಲೇನು ಹೊಸದಿಲ್ಲ. ಈ ರೀತಿಯ ಹತ್ಯೆಗಳು ಸಾಮಾನ್ಯ ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ಇದೀಗ ಗೆಹ್ಲೋಟ್ ಮಾತಿಗೆ ಬಿಜಿಪೆ ತಿರುಗೇಟು ನೀಡಿದೆ. ಬಿಜೆಪಿಯನ್ನು ವಿರೋಧಿಸುವುದರಲ್ಲಿ ತಪ್ಪೇನಿಲ್ಲ. ಆದರೆ ಬಿಜೆಪಿಯನ್ನು ವಿರೋಧಿಸಲು ಉದ್ದೇಶಪೂರ್ವಕವಾಗಿ, ಸಂಚು ನಡೆಸಿ ಮಾಡಿರುವ ಭೀಕರ ಹತ್ಯೆಯನ್ನು ಆಕಸ್ಮಿಕವಾಗಿ ನಡೆದ ಕೊಲೆ ಎಂದು ಬಿಂಬಿಸುವುದು ತಪ್ಪು ಎಂದಿದೆ.
ಈ ರೀತಿಯ ಹತ್ಯೆ ಸಾಮಾನ್ಯ, ಇದರಲ್ಲೇನು ಹೊಸವಿಚಾರವಿಲ್ಲ ಎಂದಿರುವ ಗೆಹ್ಲೋಟ್‌ಗೆ ಹತ್ಯೆಯ ಗಂಭೀರತೆ ಅರಿವಾಗಿಲ್ಲ. ಗೆಹ್ಲೋಟ್‌ಗೆ ಕೇವಲ ಆರೋಪಿಯ ಧರ್ಮ ಮಾತ್ರ ಕಾಣುತ್ತಿದೆ ಎಂದಿದೆ. ಈ ಭೀಕರ ಹತ್ಯೆಯನ್ನು ಸಾಮಾನ್ಯ ಹೇಳುವ ಗೆಹ್ಲೋಟ್ ಹಾಗೂ ಕಾಂಗ್ರೆಸ್ ಮನಸ್ಥಿತಿ ಹೇಗಿದೆ ಅನ್ನೋದು ಬಹಿರಂಗವಾಗಿದೆ ಎಂದು ರಾಜಸ್ಥಾನ ರಾಜ್ಯ ಬಿಜಪಿ ಅಧ್ಯಕ್ಷ ಸತೀಶ್ ಪೂನಿಯಾ ಹೇಳಿದ್ದಾರೆ.
ಶ್ರದ್ಧಾಳ ಮದುವೆಗೂ ಒಪ್ಪಿದ್ದ ಪಾಲಕರು: ಆದರೆ ಅಫ್ತಾಬ್ ಮನೆಯವರಿಂದಲೇ ಅಸಮ್ಮತಿ
ಶ್ರದ್ಧಾ ಹತ್ಯೆ: ಮತ್ತಷ್ಟುಮೂಳೆಗಳು ವಶಕ್ಕೆ
ಶ್ರದ್ಧಾ ವಾಕರ್ ದಾರುಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಸುತ್ತ ಶೋಧ ಕಾರ್ಯ ಮುಂದುವರೆಸಿರುವ ಪೊಲೀಸರು ಮೆಹ್ರೌಲಿ ಅರಣ್ಯದಲ್ಲಿ ಸೋಮವಾರ ಮತ್ತಷ್ಟುಮೂಳೆಗಳನ್ನು ವಶಪಡಿಸಿಕೊಂಡಿದ್ದಾರೆ.
ಶೋಧದ ವೇಳೆ ದವಡೆ ಹಾಗೂ ತಲೆಬುರುಡೆಯ ಕೆಳಭಾಗದ ಮೂಳೆಗಳು ಪತ್ತೆಯಾಗಿವೆ. ಈ ಮೊದಲು ಮೂಳೆಗಳು ಪತ್ತೆಯಾದ ಜಾಗದ ಬಳಿಯೇ ಈ ಮೂಳೆ ಸಹ ಪತ್ತೆಯಾಗಿದೆ. ಆದರೆ ಇವು ಶ್ರದ್ಧಾರದ್ದೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಇದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇಂದು ಮಂಪರು ಪರೀಕ್ಷೆ ಸಾಧ್ಯತೆ:
ಕೆಲವು ಅನುಮತಿ ಸಿಗದ ಕಾರಣ ಶ್ರದ್ಧಾ ಕೊಲೆ ಪ್ರಕರಣದ ಆರೋಪಿಯಾಗಿರುವ ಅಫ್ತಾಬ್ ಪೂನಾವಾಲನಿಗೆ ಸೋಮವಾರ ಮಂಪರು ಪರೀಕ್ಷೆ ನಡೆಸಲಾಗಿಲ್ಲ ಎಂದು ವಿಧಿವಿಜ್ಞಾನ ಪ್ರಯೋಗಾಲಯ ಹೇಳಿದೆ. ಈ ನಡುವೆ, ‘ಅಫ್ತಾಬ್ ಹೇಳಿಕೆಗಳ ಮೇಲೆ ನಂಬಿಕೆ ಇಲ್ಲ. ಹಾಗಾಗಿ ಸುಳ್ಳುಪತ್ತೆ ಪರೀಕ್ಷೆ (ಪಾಲಿಗ್ರಾಫಿಕ್) ನಡೆಸಲು ಅನುಮತಿ ನೀಡಿ’ ಎಂದು ದಿಲ್ಲಿ ಪೊಲೀಸರು ಕೋರ್ಚ್ ಮೊರೆ ಹೋಗಿದ್ದಾರೆ. ಇದರ ವಿಚಾರಣೆ ಮಂಗಳವಾರ ನಡೆಯಲಿದೆ. ಪೊಲೀಸರಿಗೆ ಅಫ್ತಾಬ್ ನೀಡಿದ ಹೇಳಿಕೆ ನಿಜವೇ ಎಂಬ ಪರೀಕ್ಷೆ ಈ ವೇಳೆ ನಡೆಯಲಿದೆ.