Asianet Suvarna News Asianet Suvarna News

ಯತೀಂದ್ರ ಸಿದ್ದರಾಮಯ್ಯ ಸೇರಿ 7 ಮಂದಿಗೆ ಕಾಂಗ್ರೆಸ್ ಪರಿಷತ್ ಟಿಕೆಟ್ ಘೋಷಣೆ, ಇಲ್ಲಿದೆ ಪಟ್ಟಿ

ವಿಧಾನಪರಿಷತ್ ಚುನಾವಣೆಗೆ ಕೆಲವೇ ದಿನಗಳಿದ್ದು, ಕಾಂಗ್ರೆಸ್ ಹೈಕಮಾಂಡ್‌ ಮೂರು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದೆ.

congress high command releases-list-of-candidates-for-karnataka-legislative-council-election-2024-gow
Author
First Published Jun 2, 2024, 4:34 PM IST | Last Updated Jun 2, 2024, 5:04 PM IST

ಬೆಂಗಳೂರು (ಜೂ.2): ವಿಧಾನಪರಿಷತ್ ಚುನಾವಣೆಗೆ ಕೆಲವೇ ದಿನಗಳಿದ್ದು, ಕಾಂಗ್ರೆಸ್ ಹೈಕಮಾಂಡ್‌ ಮೂರು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದೆ. ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಳೆಯೇ ಕೊನೆಯ ದಿನವಾಗಿದೆ. ಹೀಗಾಗಿ ಇಂದು ಕಾಂಗ್ರೆಸ್ ಹೈಕಮಾಂಡ್ ಅಂತಿಮವಾಗಿ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ. ಜಗದೀಶ್ ಶೆಟ್ಟರ್ ರಿಂದ ತೆರವಾದ ಸ್ಥಾನಕ್ಕೆ ನಡೆಯುವ ಬೈ ಎಲೆಕ್ಷನ್ ಗೆ ಬಸನಗೌಡ ಬಾದರ್ಲಿ ಆಯ್ಕೆ ಮಾಡಲಾಗಿದೆ.

ಇನ್ನು ಕೊನೆ ಕ್ಷಣದಲ್ಲಿ ಮಹಿಳೆಯೊಬ್ಬರಿಗೆ ಎಂಎಲ್ಸಿ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆದು ಶಿವಮೊಗ್ಗದ ಬಲ್ಕೀಸ್‌ ಬಾನು ಅವರಿಗೆ ಟಿಕೆಟ್‌ ಘೋಷಣೆ ಮಾಡಲಾಗಿದೆ. ಇವರು ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಮಾಜಿ ಪ್ರಧಾನ ಕಾರ್ಯದರ್ಶಿ, ಶಿವಮೊಗ್ಗ ಜಿಲ್ಲೆ ಭದ್ರಾವತಿಯವರಾದ ಇವರು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ. ಈ ಎಲ್ಲಾ ಹೆಸರಗಳನ್ನು ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಂತಿಮಗೊಳಿಸಿದ್ದಾರೆ.

ಮಂಡ್ಯ ಸಂಸದೆ ತ್ಯಾಗಕ್ಕೆ ಸಿಗ್ಲಿಲ್ಲ ಪ್ರತಿಫಲ, ಸುಮಲತಾ ಬಿಟ್ಟು 3 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್‌ ಘೋಷಣೆ!

ಎನ್ ಎಸ್ ಬೋಸರಾಜು
ವಸಂತ್ ಕುಮಾರ್ 
ಯತೀಂದ್ರ ಸಿದ್ದರಾಮಯ್ಯ
ಕೆ ಗೋವಿಂದ್ ರಾಜ್ 
ಐವನ್ ಡಿಸೋಜಾ
ಬಲ್ಕೀಸ್‌ ಬಾನು
ಜಗದೇವ್ ಗುತ್ತೇದಾರ್
ಬಸನಗೌಡ ಬಾದರ್ಲಿ (ಬೈ ಎಲೆಕ್ಷನ್)

ಬೆಂಗಳೂರು ಗ್ರಾಮಾಂತರ ಕ್ಷೇತ್ರಾದ್ಯಂತ ಭರ್ಜರಿ ಬೆಟ್ಟಿಂಗ್‌ ಭರಾಟೆ! 

ಈ ಮೂಲಕ ಹೈದ್ರಾಬಾದ್ ಕರ್ನಾಟಕಕ್ಕೆ ನಾಲ್ಕು ವಿಧಾನ ಪರಿಷತ್  ಟಿಕೆಟ್ ಘೋಷಣೆ ಮಾಡಲಾಗಿದೆ. ರಾಯಚೂರು ಜಿಲ್ಲೆಗೆ ಎರಡು ಟಿಕೆಟ್ , ಬೋಸ್ ರಾಜು ಮತ್ತು ವಸಂತ್ ಕುಮಾರ್ ಅವರಿಗೆ. ಚಿತ್ತಾಪುರ ಕ್ಷೇತ್ರಕ್ಕೆ ಮತ್ತೆ ಒಂದು ಟಿಕೆಟ್. ತಿಪ್ಪಣ್ಣಪ್ಪ ಕಮಕನೂರು, ಜಗದೇವ್ ಗುತ್ತೇದಾರ್ ಇಬ್ಬರದ್ದೂ ಚಿತ್ತಾಪುರ ಕ್ಷೇತ್ರ. ಉಳಿದಂತೆ ಪ್ರಿಯಾಂಕ್ ಖರ್ಗೆ ಚಿತ್ತಾಪುರ ಕ್ಷೇತ್ರದ ಶಾಸಕ ಹಾಗು ಸಚಿವರು. ವರ್ಷದ ಅಂತರದಲ್ಲಿ ಒಂದೇ ಕ್ಷೇತ್ರಕ್ಕೆ ಎರಡು ಟಿಕೆಟ್ ಘೋಷಣೆಯಾದಂತಾಗಿದೆ. 

congress high command releases-list-of-candidates-for-karnataka-legislative-council-election-2024-gow

Latest Videos
Follow Us:
Download App:
  • android
  • ios