ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ರಾಜ್ಯ ಕಾಂಗ್ರೆಸ್ ಭಾರಿ ರಣತಂತ್ರ ರೂಪಿಸುತ್ತಿದೆ. ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ನಾಯಕರ ಜೊತೆ ದೆಹಲಿಯಲ್ಲಿ ಮಹತ್ವ ಸಭೆ ನಡೆಸಿದ್ದಾರೆ. ಇದೀಗ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ 36 ಮಂದಿಯನ್ನೊಳಗೊಂಡ ಹೊಸ ಸಮಿತಿ ರಚಿಸಿ ಆದೇಶ ನೀಡಿದ್ದಾರೆ.
ಬೆಂಗಳೂರು(ಡಿ.14) : ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ರಾಜ್ಯ ಕಾಂಗ್ರೆಸ್ ಭಾರಿ ರಣತಂತ್ರ ರೂಪಿಸುತ್ತಿದೆ. ಸ್ಪಷ್ಟ ಬಹುಮತದ ಮೂಲಕ ಸರ್ಕಾರ ರಚಿಸಲು ಎಲ್ಲಾ ಪ್ರಯತ್ನ ಮಾಡುತ್ತಿದೆ. ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ನಾಯಕರ ಜೊತೆ ದೆಹಲಿಯಲ್ಲಿ ಮಹತ್ವ ಸಭೆ ನಡೆಸಿದ್ದಾರೆ. ಇದೀಗ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ 36 ಮಂದಿಯನ್ನೊಳಗೊಂಡ ಹೊಸ ಸಮಿತಿ ರಚಿಸಿ ಆದೇಶ ನೀಡಿದ್ದಾರೆ. ರಾಜ್ಯ ಚುನಾವಣೆ ಕುರಿತು ಮಹತ್ವದ ನಿರ್ಧಾರಗಳನ್ನು ಹೊಸ ಪ್ರದೇಶ ಚುನಾವಣಾ ಸಮಿತಿ ನೋಡಿಕೊಳ್ಳಲಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಬಿಕೆ ಹರಿಪ್ರಸಾದ್ ಎಂಬಿ ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರೂ ಸೇರಿದಂತೆ ಹಲವು ಮುಖಂಡರು ಈ ಸಮಿತಿಯಲ್ಲಿದ್ದಾರೆ. ವಿನಯ್ ಕುಲಕರ್ಣಿ, ಮಾಜಿ ಮೇಯರ್ ಜಿ ಪದ್ಮಾವತಿ ಶರಣಪ್ಪ ಸುನಗಾರ್, ಶಿವರಾಜ ತಂಗಡಗಿ ಸೇರಿದಂತೆ ಕಾಂಗ್ರೆಸ್ ನಲ್ಲಿ ಮುನಿಸಿಕೊಂಡಿದ್ದ ಎಂ ಆರ್ ಸೀತಾರಾಂ ಸ್ಥಾನ ಪಡೆದಿರುವುದು ಅಚ್ಚರಿ ಮೂಡಿಸಿದೆ.
ಕಾಂಗ್ರೆಸ್ ನ ಪ್ರದೇಶ ಎಲೆಕ್ಷನ್ ಕಮಿಟಿ ಸದಸ್ಯರು
- ಡಿ ಕೆ ಶಿವಕುಮಾರ್
- ಸಿದ್ದರಾಮಯ್ಯ
- ಬಿ ಕೆ ಹರಿಪ್ರಸಾದ್
- ಎಂ ಬಿ ಪಾಟೀಲ್
- ದಿನೇಶ್ ಗುಂಡೂರಾವ್
- ಹೆಚ್ ಕೆ ಪಾಟೀಲ್
- ಕೆ ಹೆಚ್ ಮುನಿಯಪ್ಪ
- ವೀರಪ್ಪ ಮೊಯ್ಲಿ
- ಡಾ.ಜಿ ಪರಮೇಶ್ವರ್
- ಆರ್ ವಿ ದೇಶ್ಪಾಂಡೆ
- ಅಲ್ಲಮ್ ವೀರಬದ್ರಪ್ಪ
- ರಾಮಲಿಂಗರೆಡ್ಡಿ
- ಈಶ್ವರ್ ಖಂಡ್ರೆ
- ಸತೀಶ್ ಜಾರಕಿಹೊಳಿ
- ದೃವ ನಾರಾಯಣ್
- ಸಲೀಂ ಅಹ್ಮದ್
- ರೆಹಮಾನ್ ಖಾನ್
- ಮಾರ್ಗ್ರೆಟ್ ಆಳ್ವಾ
- ಕೆ ಜೆ ಜಾರ್ಜ್
- ಯು ಟಿ ಖಾದರ್
- ಕೆ ಗೋವಿಂದರಾಜ್
- ಹೆಚ್ ಸಿ ಮಹದೇವಪ್ಪ
- ಚೆಲುವ ರಾಯ ಸ್ವಾಮಿ
- ಬಸವರಾಜ್ ರಾಯರೆಡ್ಡಿ
- ಬಿ ಕೆ ಸುರೇಶ್
- ಎಲ್ ಹನುಮಂತಯ್ಯ
- ನಾಸಿರ್ ಹುಸೇನ್
- ಎಂ ಆರ್ ಸೀತರಾಮ್
- ಶಿವರಾಜ್ ತಂಗಡಗಿ
- ವಿನಯ್ ಕುಲಕರ್ಣಿ
- ವಿ ಎಸ್ ಉಗ್ರಪ್ಪ
- ಬೋಸ್ ರಾಜ್
- ವಿನಯ್ ಕುಮಾರ್
- ಶರಣಪ್ಪ
- ಜಿ ಪದ್ಮಾವತಿ
- ಶಾಮನೂರ್ ಶಿವಶಂಕ್ರಪ್ಪ
