ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ಹಣಕಾಸಿನ ಸ್ಥಿತಿ ಅಧೋಗತಿಗೆ ಹೋಗಿದೆ. ಕಾಂಗ್ರೆಸ್‌ ಸರ್ಕಾರ ಬಹಳ ದಿನ ಉಳಿಯೋಲ್ಲ ಅನ್ನೋದು ಗ್ಯಾರಂಟಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಭವಿಷ್ಯ ನುಡಿದರು. 

ಬೀದರ್‌ (ಮೇ.06): ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ಹಣಕಾಸಿನ ಸ್ಥಿತಿ ಅಧೋಗತಿಗೆ ಹೋಗಿದೆ. ಕಾಂಗ್ರೆಸ್‌ ಸರ್ಕಾರ ಬಹಳ ದಿನ ಉಳಿಯೋಲ್ಲ ಅನ್ನೋದು ಗ್ಯಾರಂಟಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಭವಿಷ್ಯ ನುಡಿದರು. ಅವರು ನಗರದಲ್ಲಿ ಬಿಜೆಪಿ ಮುಖಂಡ ವಸಂತ ವಕೀಲ್‌ ಬಿರಾದರ ಅವರ ಪುತ್ರ ಅಖಿಲೇಶ ಅವರ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಂದರ್ಭ ಭೇಟಿಯಾದ ಸುದ್ದಿಗಾರರಿಗೆ ಮಾತನಾಡಿ, ನೀರಾವರಿ ಯೋಜನೆಗಳಾಗಲಿ, ರಾಜ್ಯದ ಯಾವುದೇ ಭಾಗದಲ್ಲಿಯೂ 2 ಕಿಮೀ ರಸ್ತೆ ಅಗೆಯದಿರುವಂಥ ವಿಚಿತ್ರ ಸನ್ನಿವೇಶ ಇದೆ.

ಕಾಂಗ್ರೆಸ್‌ ಸರ್ಕಾರ ನೀಡುತ್ತಿರುವ ಭರವಸೆಗಳಿಗೂ ವಾಸ್ತವ ಸ್ಥಿತಿಗೂ ಬಾರಿ ವ್ಯತ್ಯಾಸ ಇದೆ ಎಂದು ರಾಜ್ಯದ ಜನತೆಗೆ ಗೊತ್ತಿದೆ. ಇದೆಲ್ಲದರ ಪರಿಣಾಮ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬಂದು ಒಂದು ಒಳ್ಳೆಯ ಆಡಳಿತ ಕೊಡಲಿದ್ದೇವೆ ಅಲ್ಲಿಯವರೆಗೆ ನಾವು ಕಾಯಬೇಕಾಗುತ್ತದೆ ಎಂದರು. ಈಗಾಗಲೇ ರಾಜ್ಯದಾದ್ಯಂತ ನಿರಂತರವಾಗಿ ವಿಜಯೇಂದ್ರ, ನಾನು ನನ್ನ ಪಕ್ಷದವರು ಪ್ರವಾಸ ಮಾಡುತ್ತಿದ್ದೇವೆ ಅದ್ಧೂರಿ ಸ್ವಾಗತ ಸಿಗುತ್ತಿದೆ ಇದೆಲ್ಲದರ ಪರಿಣಾಮ ಈ ಕಾಂಗ್ರೆಸ್‌ ಸರ್ಕಾರ ಬಹಳ ದಿನ ಉಳಿಯೋಲ್ಲ ಎನ್ನುವಂಥದ್ದು ಗ್ಯಾರಂಟಿಯಾಗಿದೆ ಎಂದು ತಿಳಿಸಿದರು.

ಕೊಲೆ ಸುಲಿಗೆ ನಿರಂತರವಾಗುತ್ತಿದೆ. ಕಾನೂನು ಸುವ್ಯವಸ್ಥೆ ಎಲ್ಲಿದೆ ಎಂಬ ಪ್ರಶ್ನೆ ಭುಗಿಲೇಳುವ ಸ್ಥಿತಿ ಇಲ್ಲಿದೆ. ಈ ಕುರಿತು ಪ್ರಶ್ನೆ ಕೇಳುವಂತ ಶಕ್ತಿ ಈ ರಾಜ್ಯದ ಮುಖ್ಯಮಂತ್ರಿಗಳಿಗಾಗಲಿ, ಗೃಹ ಸಚಿವರಿಗಾಗಲಿ ಇಲ್ಲ. ಪ್ರಚಾರಕ್ಕಾಗಿ ನನಗೂ ಜೀವ ಬೆದರಿಕೆ ಕರೆಗಳು ಬರ್ತವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳ್ತಾರೆ ಎಂದು ಪ್ರಶ್ನೆಯೊಂದಕ್ಕೆ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಸ್ಪಷ್ಟಪಡಿಸಿದರು.

ಪಶ್ಚಿಮ ಘಟ್ಟ ಜಗತ್ತಿನಲ್ಲೇ ಶ್ರೀಮಂತ ತಾಣ: ಉಪ ರಾಷ್ಟ್ರಪತಿ ಜಗದೀಪ್ ಧನಕರ್

ಪೆಹಲ್ಗಾಂ ದಾಳಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯಾವ ಸಮಯದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುವದು ಗೊತ್ತಿದೆ ಅವರು ನಿರ್ಧಾರ ಕೈಗೊಳ್ಳುತ್ತಾರೆ ಹಾಗೆಯೇ ಜಾತಿ ಗಣಿತಯ ಬಗ್ಗೆ ಬಹಳ ದಿನಗಳಿಂದ ಜನರ ಬೇಡಿಕೆಯಾಗಿತ್ತು ಅದನ್ನು ಕೇಂದ್ರ ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಬಿಎಸ್‌ ಯಡಿಯೂರಪ್ಪ ತಿಳಿಸಿದರು. ಈ ಸಂದರ್ಭದಲ್ಲಿ ಶಾಸಕ ಪ್ರಭು ಚವ್ಹಾಣ್‌, ಡಾ.ಸಿದ್ದಲಿಂಗ ಪಾಟೀಲ್‌, ಮಾಜಿ ಸಚಿವ ರೇಣುಕಾಚಾರ್ಯ, ಬಸವರಾಜ ಆರ್ಯ, ವಸಂತ ವಕೀಲ್‌, ಹಿಂದೂ ಸಮಾಜ ಮುಖಂಡ ವೀರಶೆಟ್ಟಿ ಖ್ಯಾಮಾ, ಸೇರಿದಂತೆ ಮತ್ತಿತರರು ಇದ್ದರು.