Asianet Suvarna News Asianet Suvarna News

ಕಾಂಗ್ರೆಸ್‌ಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ: ಮಾಜಿ ಸಚಿವ ಶ್ರೀರಾಮುಲು

ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐಗೆ ವಹಿಸಿ ದಾಖಲಾಗಿರುವ ಅಕ್ರಮ ಆಸ್ತಿ ಪ್ರಕರಣವನ್ನು ಕ್ಯಾಬಿನೆಟ್ ವಾಪಸ್‌ ಪಡೆದಿರುವುದು ಕಾಂಗ್ರೆಸ್‌ಗೆ ಸಂವಿಧಾನದ ಮೇಲೆ ವಿಶ್ವಾಸ ಇಲ್ಲ ಎಂಬುದು ಸಾಭೀತಾಗಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

Congress has no faith in the Constitution Says B Sriramulu gvd
Author
First Published Nov 27, 2023, 10:23 PM IST

ಕೋಲಾರ (ನ.27): ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐಗೆ ವಹಿಸಿ ದಾಖಲಾಗಿರುವ ಅಕ್ರಮ ಆಸ್ತಿ ಪ್ರಕರಣವನ್ನು ಕ್ಯಾಬಿನೆಟ್ ವಾಪಸ್‌ ಪಡೆದಿರುವುದು ಕಾಂಗ್ರೆಸ್‌ಗೆ ಸಂವಿಧಾನದ ಮೇಲೆ ವಿಶ್ವಾಸ ಇಲ್ಲ ಎಂಬುದು ಸಾಭೀತಾಗಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ತಿಳಿಸಿದರು. ಮುಳಬಾಗಿಲು ಕುರುಡುಮಲೆ ವಿನಾಯಕನ ದೇವಾಲಯದಲ್ಲಿ ತಮ್ಮ ಮಗಳ ವಿವಾಹದ ಲಗ್ನಪತ್ರಿಕೆ ಪ್ರಥಮವಾಗಿ ಗಣಪತಿಗೆ ಸಮರ್ಪಿಸಿ ವಿಶೇಷ ಪೂಜೆಸಲ್ಲಿಸಿ ಮಾರ್ಗ ಮಧ್ಯೆ ನಗರ ಹೊರವಲಯದಲ್ಲಿ ನಿರ್ಮಾಣದ ಹಂತದಲ್ಲಿರುವ ಬಿಜೆಪಿ ಕಚೇರಿಗೆ ಭೇಟಿ ಕಾರ್ಯಕರ್ತರಿಗೆ ವಿವಾಹದ ಆಮಂತ್ರಣದ ಪತ್ರಿಕೆ ವಿತರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಾಂಗ್ರೆಸ್‌ನಿಂದ ರಾಜಕೀಯ ಸಂಘರ್ಷ: ತಮ್ಮ 3೦ ವರ್ಷಗಳ ರಾಜಕೀಯ ಇತಿಹಾಸದಲ್ಲಿ ಇಂತಹ ಪ್ರಕರಣವನ್ನು ಕಂಡಿಲ್ಲ. ಇದು ರಾಜಕಾರಣದಲ್ಲಿ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಂತಾಗಿದೆ. ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಸಂವಿಧಾನವನ್ನು ಕೈಗೊಂಬೆಯಂತೆ ಆಡಿಸುವ ಪ್ರಯತ್ನಕ್ಕೆ ಮುಂದಾಗಿರುವುದು ಘೋರ ಅಪರಾಧ. ಡಿಕೆಶಿ ವಿರುದ್ದ ದಾಖಲಾಗಿರುವ ಪ್ರಕರಣವನ್ನು ವಾಪಸ್ ಪಡೆಯುವ ನಿರ್ಧಾರಕ್ಕೆ ಮುನ್ನ ಕಾನೂನು ತಜ್ಞರ ಮಾರ್ಗದರ್ಶನವನ್ನು ಪಡೆದು ನಿರ್ಧಾರ ಕೈಗೊಳ್ಳದೆ ತಪ್ಪು ಮಾಡಿದ್ದಾರೆ ಎಂದರು. ಈ ಹಿಂದಿನ ಸರ್ಕಾರದ ಆಡಳಿತದಲ್ಲಿ ಡಿ.ಕೆ.ಶಿವಕುಮಾರ್ ಮೇಲೆ ಮಾತ್ರವಲ್ಲದೆ ಆಡಳಿತ ಪಕ್ಷದವರ ವಿರುದ್ದವೂ ಕ್ರಮ ಕೈಗೊಂಡಿತ್ತು. ಡಿ.ಕೆ.ಶಿವಕುಮಾರ್ ಅವರ ಮೇಲೆ ತನಿಖೆಯ ವಿಚಾರಣೆ ನಡೆದು ಚಾರ್ಜ್‌ಶೀಟ್ ದಾಖಲಿಸುವ ಅವಧಿಯಲ್ಲಿ ಪ್ರಕರಣವನ್ನು ವಾಪಸ್ ಪಡೆದಿರುವಂತ ನಿರ್ಧಾರವು ಮೂರ್ಖತವಾಗಿದೆ, ಇದಕ್ಕೆ ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

ಸಿದ್ದರಾಮಯ್ಯ ಜನತಾದರ್ಶನ ಜಾಹೀರಾತಿಗೆ ಸೀಮಿತ: ಎಚ್‌.ಡಿ.ಕುಮಾರಸ್ವಾಮಿ

ಗ್ಯಾರಂಟಿ ಶೇ.25ರಷ್ಟೂ ತಲುಪಿಲ್ಲ: ಕಳೆದ ಚುನಾವಣೆಯಲ್ಲಿ ೧೩೫ ಸ್ಥಾನಗಳನ್ನು ನೀಡುವ ಮೂಲಕ ಕಾಂಗ್ರೆಸ್‌ಗೆ ಜನಾದೇಶ ನೀಡಿದೆ. ಆದರೆ ಮತದಾರರಿಗೆ ಈ ಸರ್ಕಾರದ ಬಂಡವಾಳವು ಕೇವಲ ೬ ತಿಂಗಳ ಅವಧಿಯಲ್ಲಿ ಆಡಳಿತದಿಂದ ಬಯಲಾಗಿದೆ. ಚುನಾವಣೆಗೆ ಮುನ್ನ ಮತದಾರರಿಗೆ ನೀಡಿದ್ದ ೫ ಗ್ಯಾರಂಟಿಗಳ ಭರವಸೆಗಳನ್ನು ೬ ತಿಂಗಳಾಗಿದ್ದರೂ ಶೇ.೨೫ ರಷ್ಟು ತಲುಪಿಲ್ಲ. ಮತ್ತೊಂದು ಕಡೆ ಅಭಿವೃದ್ದಿ ಮಾಡದೆ ಹೊರ ರಾಜ್ಯಗಳ ಚುನಾವಣೆಗಳ ಪ್ರಚಾರದಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನರ ಮುಂದೆ ಹೋದಾಗ ಕಲ್ಲೇಟು ಬೀಳುವುದು ಖಚಿತ ಎಂದು ಎಚ್ಚರಿಕೆ ನೀಡಿದರು. ಸೋಮಣ್ಣ ಮತ್ತು ಬಸವರಾಜ ಯತ್ನಾಳ್ ಇಬ್ಬರು ಸಹ ಹಿರಿಯ ಮುಖಂಡರು ಅವರೆಂದೂ ಬಿಜೆಪಿ ತೊರೆಯುವುದಿಲ್ಲ ಎಂಬ ವಿಶ್ವಾಸವಿದೆ. ಬಿಜೆಪಿ ಪಕ್ಷದ ಅಧ್ಯಕ್ಷ ಬಿ.ವೈ.ವಿಜೇಂದ್ರರವರು ಸೋಮಣ್ಣ, ಯಾತ್ನಾಳ್ ಹಾಗೂ ಯಡಿಯೂರಪ್ಪರೊಂದಿಗೆ ಪಕ್ಷವನ್ನು ಸಂಘಟಿಸಲಿದ್ದಾರೆ ಎಂದರು.

4 ವರ್ಷಗಳಾದರೂ ಸಿದ್ದಗಂಗಾ ಶ್ರೀಗಳ ಪುತ್ಥಳಿ ನಿರ್ಮಾಣ ಕಾರ್ಯ ಶೇ.10ರಷ್ಟು ಕಾಮಗಾರಿ ಮುಗಿದಿಲ್ಲ!

ರೆಡ್ಡಿ ಬಿಜೆಪಿಗೆ ಬಂದರೆ ಸ್ವಾಗತ: ಕಾಂಗ್ರೆಸ್ ಪಕ್ಷದವರು ಚುನಾವಣೆ ಮುನ್ನಾ ನೀಡಿದ್ದ ಭರವಸೆಗಳನ್ನು ಈಡೇರಿಸದಿದ್ದಲ್ಲಿ ಮುಂದಿನ ದಿನದಲ್ಲಿ ಜನರ ತಿರಸ್ಕಾರಕ್ಕೆ ಒಳಗಾಗುವುದು ಖಚಿತ.ಜರ್ನರ್ದನ್ ರೆಡ್ಡಿ ಬಿಜೆಪಿಗೆ ಬಂದರೆ ಮನಪೂರ್ವಕವಾಗಿ ಸ್ವಾಗತಿಸುತ್ತೇನೆ. ರಾಜ್ಯ ಸರ್ಕಾರ ಅಭಿವೃದ್ದಿ ಕೆಲಸಗಳತ್ತ ಗಮನ ಹರಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿದೆ ಎಂದರು. ಇದೇ ಸಂದರ್ಭದಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲುರನ್ನು ಬಿಜೆಪಿ ಪಕ್ಷದ ಮುಖಂಡರು ಸ್ವಾಗತಿಸಿ ಸನ್ಮಾನಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್, ಮುಖಂಡರಾದ ನರಸಿಂಹರಾಜು, ವಿಜಯ ಕುಮಾರ್, ಕೆಂಬೋಡಿ ನಾರಾಯಣಸ್ವಾಮಿ, ತಿಮ್ಮರಾಯಪ್ಪ, ರಾಜೇಶ್ ಸಿಂಗ್, ಮಮತಮ್ಮ, ರತ್ನಮ್ಮ, ಪೆಟ್ರೋಲ್ ಬಂಕ್ ಮಂಜು, ಚಲಪತಿ, ರೋಣೂರು ಚಂದ್ರಶೇಖರ್ ಇದ್ದರು.

Follow Us:
Download App:
  • android
  • ios