Asianet Suvarna News Asianet Suvarna News

ಭಾರತದಲ್ಲೇ ಹುಟ್ಟಿ ಬೆಳೆದ ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ಎತ್ತಿಕಟ್ಟುವ ಕೆಲಸ ಮಾಡುತ್ತಿದೆ: ರಾವ್

ಕಾಂಗ್ರೆಸ್ ನವರು ಮುಸ್ಲಿಂ ಮಹಿಳೆಯರ ಕತ್ತುಹಿಸುಕುವ ಕೆಲಸ ಮಾಡುತ್ತಿದ್ದಾರೆ ಇದಕ್ಕಿಂತ ರಾಷ್ಟ್ರದ್ರೋಹ ಮತ್ತೊಂದಿಲ್ಲ ಎಂದು ಬಿಜೆಪಿ  ರಾಜ್ಯಸಭಾ ಸದಸ್ಯ, ರಾಷ್ಟ್ರೀಯ ವಕ್ತಾರರಾದ ಜಿ.ವಿ.ಎಲ್ ನರಸಿಂಹ ರಾವ್ ದೂಷಿಸಿದ್ದಾರೆ.

congress guarantees misleading people says BJP leader GVL Narasimha Rao karnataka news gow
Author
First Published Jun 28, 2023, 7:24 PM IST

ವರದಿ: ವರದರಾಜ್ , ಏಷ್ಯಾನೆಟ್ ಸುವರ್ಣನ್ಯೂಸ್

ದಾವಣಗೆರೆ (ಜೂ.28): ಕಾಂಗ್ರೆಸ್ ನವರ ಗ್ಯಾರಂಟಿ ಘೋಷಣೆಗಳು ಜನರನ್ನು ದ್ರೋಹ ಮಾಡುವುದು ಹಾಗೂ ಭ್ರಷ್ಟಾಚಾರ ಮಾಡುವುದಾಗಿದೆ ಎಂದು ಬಿಜೆಪಿ ಪಕ್ಷದ ರಾಜ್ಯಸಭಾ ಸದಸ್ಯರು ಹಾಗೂ ರಾಷ್ಟ್ರೀಯ ವಕ್ತಾರರಾದ ಜಿ.ವಿ.ಎಲ್ ನರಸಿಂಹ ರಾವ್ ದೂಷಿಸಿದರು. ನಗರದ ಕೆಬಿ ಬಡಾವಣೆಯಲ್ಲಿರುವ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ ಜನತೆ ಶೀಘ್ರದಲ್ಲೇ ಕಾಂಗ್ರೆಸ್ ನ ಮೋಸ, ದ್ರೋಹವನ್ನು ಅರಿಯಲಿದ್ದಾರೆ. ಗ್ಯಾರಂಟಿ ಹೆಸರಿನಲ್ಲಿ  ಜನತೆಯನ್ನು ವಂಚಿಸಲಾಗುತ್ತಿದೆ. ಈ ಹಿಂದೆಯೂ ಕಾಂಗ್ರೆಸ್ ನವರು ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲೂ ಉಚಿತ ಘೋಷಣೆಗಳನ್ನು ನೀಡಿ ಗೆಲುವು ಪಡೆದು ಜನತೆಯನ್ನು ವಂಚಿಸಿದ್ದಾರೆ ಅದಕ್ಕೆ ಅಲ್ಲಿಯ‌ ಜನತೆ ನಂತರದ ದಿನಗಳಲ್ಲಿ ತಕ್ಕ ಪಾಠ ಕಲಿಸಿದ್ದಾರೆ ಅದೇ ರೀತಿ ಕರ್ನಾಟಕದಲ್ಲಿಯೂ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ಕಾಂಗ್ರೆಸ್ ನ ದ್ರೋಹವನ್ನು ಬಿಜೆಪಿ ಜನರ ಮುಂದೆ ತೆರೆದಿಡಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಜನರ ತಾಳ್ಮೆ ಪರೀಕ್ಷೆ ಮಾಡಬಾರದು ಕಾಂಗ್ರೆಸ್ ನವರದು ಜನರನ್ನು ವಂಚಿಸುವುದಾಗಿದೆ. ರಾಜ್ಯದಲ್ಲಿ ಬೆಲೆಏರಿಕೆ ದಿನನಿತ್ಯ ಹೆಚ್ಚಾಗುತ್ತಿದೆ. ಈ ಬಗ್ಗೆ ಗಮನಹರಿಸದೆ ಕಾಂಗ್ರೆಸ್ ನವರು ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಭಾರತ್ ಜೋಡೋ ಯಾತ್ರೆಗೆ ಕೆಜಿಎಫ್ ಮ್ಯೂಸಿಕ್, ರಾಹುಲ್ ಗಾಂಧಿ ವಿರುದ್ಧ ತನಿಖೆಗೆ

ದೇಶದಲ್ಲಿ ಪ್ರಧಾನಿ ಮೋದಿಯವರು ಒಂಭತ್ತು ವರ್ಷಗಳ ಸುಭದ್ರ ಆಡಳಿತ ನೀಡಿದ್ದಾರೆ ಜನರನ್ನು ವಿಕಾಸದೆಡೆ ಕರೆದೊಯ್ಯುವುದು ನಮ್ಮ ಅಜೆಂಡಾ.ಆದರೆ ಕಾಂಗ್ರೆಸ್ ನವರದು ವಿಕಾಸದಿಂದ ವಂಚಿತರನ್ನಾಗಿಸುವುದಾಗಿದೆ ಹಿತೈಷಿ ಎಂದು ಹೇಳುತ್ತಲೇ ಕಾಂಗ್ರೆಸ್ ನವರು ಅಲ್ಪಸಂಖ್ಯಾತರನ್ನು ದೂರವಿಟ್ಟಿದ್ದಾರೆ.

ಒಂದು ದೇಶ ಒಂದು ಕಾನೂನು ನಮ್ಮ ನೀತಿ ಆದರೆ ತ್ರಿವಳಿ ತಲಾಖ್ ಬ್ಯಾನ್ ಮಾಡಿದಾಗ ಬೊಬ್ಬೆ ಹೊಡೆದ ಕಾಂಗ್ರೆಸ್ ನವರು ಮುಸ್ಲಿಂ ಮಹಿಳೆಯರನ್ನು ದಮನಿಸುವ ಪ್ರಕ್ರಿಯೆಗೆ ಮುಂದಾಗಿದ್ದರು. ಭಾರತದಲ್ಲೇ ಹುಟ್ಟಿ ಬೆಳೆದ ಅಲ್ಪಸಂಖ್ಯಾತರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿರುವುದು ಖಂಡನೀಯ. ಈಜಿಪ್ಟ್, ಇಂಡೋನೇಷ್ಯಾ, ಬ್ಲಾಂಗ್ಲಾ ದೇಶದಲ್ಲಿ ತ್ರಿವಳಿ ತಲಾಖ್ ಬ್ಯಾನ್ ಆಗಿದೆ. ಆದರೆ ಕಾಂಗ್ರೆಸ್ ನವರು ಮುಸ್ಲಿಂ ಮಹಿಳೆಯರ ಕತ್ತುಹಿಸುಕುವ ಕೆಲಸ ಮಾಡುತ್ತಿದ್ದಾರೆ ಇದಕ್ಕಿಂತ ರಾಷ್ಟ್ರದ್ರೋಹ ಮತ್ತೊಂದಿಲ್ಲ.

2 ಕಿಮೀ ಜಾಮ್ ಆಗೋದಾದ್ರೆ ನಾವ್ಯಾಕೆ ನೈಸ್ ರೋಡ್ ಟೋಲ್ ಶುಲ್ಕ ಕಟ್ಟಬೇಕು, ಸವಾರರ ಪ್ರಶ್ನೆ

ಆರ್ಟಿಕಲ್ 370 ಜಾರಿ ಮಾಡಿದಾಗಲೂ ಇದನ್ನು ತಡೆಯಲು ಕಾಂಗ್ರೆಸ್ ನವರು ಮುಂದಾಗಿದ್ದರು ಇಂದು ಜಮ್ಮು ಕಾಶ್ಮೀರದಲ್ಲಿ ವಿಶ್ವದಾದ್ಯಂತ ಜನರು ಭಯವಿಲ್ಲದೇ  ಭೇಟಿ ನೀಡುತ್ತಿದ್ದಾರೆ. ಅಂದಿನಿಂದ ಇಲ್ಲಿಯವರೆಗೂ ಕಾಶ್ಮೀರದಲ್ಲಿ ಯಾವುದೇ ಗಲಭೆಗಳು ನಡೆದಿಲ್ಲ. ಮೋದಿ ವಿಶ್ವದಲ್ಲೇ ಸಮರ್ಥ ನಾಯಕರಾಗಿದ್ದಾರೆ. ಕಾಂಗ್ರೆಸ್ ನವರು ಆರ್ಟಿಕಲ್ 370 ತೆಗೆದು ಹಾಕುವುದಾಗಿ ಘೋಷಣೆ ಮಾಡಿ ಲೋಕಸಭಾ ಚುನಾವಣಾ ಎದುರಿಸಲಿ ಎಂದು ಸವಾಲು ಹಾಕಿದರು. 

ದೇಶದ ಸಮಸ್ಯೆಗಳ ಬಗ್ಗೆ ಅರಿವು ಹೊಂದಬೇಕು ಅದನ್ನು ಬಿಟ್ಟು ಮೋದಿ ಮಣಿಸುವ ಸಲುವಾಗಿ ಕಾಂಗ್ರೆಸ್ ನವರು ಇತ್ತೀಚಿಗೆ ಪಾಟ್ನಾದಲ್ಲಿ 16  ಪಕ್ಷಗಳೊಂದಿಗೆ ಸಭೆ ನಡೆಸಿದ್ದಾರೆ. ಮೋದಿ ಮಣಿಸಲು ತಂತ್ರ ರೂಪಿಸಿದ್ದಾರೆ ಇದು ಕಾಂಗ್ರೆಸ್ ನವರ ಹತಾಶೆಯ ನಡೆಯಾಗಿದೆ ಎಂದರು. ಈ ಬಗ್ಗೆ ಪ್ರಧಾನಿ ಮೋದಿಯವರು ಸಿಟ್ಟಾಗಬಾರದು ದಯೆತೋರಬೇಕು ಎಂದಿದ್ದಾರೆ ಇದು ಅವರ ನಡೆ. ಅವರೆಲ್ಲಾ ಒಂದೆಡೆ ಬರಲು ಕಾರಣ ಭ್ರಷ್ಟಾಚಾರ ಎಂದರು.

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ 9 ವರ್ಷ ಪೂರ್ಣಗೊಳಿಸಿದೆ ಕಳೆದ ಮೇ 30 ರಿಂದ ಜೂನ್ 30 ರವರೆಗೆ ದೇಶದ ಜನತೆಗೆ ಕೇಂದ್ರದ ಸಾಧನೆಗಳ ಅನಾವರಣಗೊಳಿಸಲಾಗಿದೆ. 9 ವರ್ಷದ ರಿಪೋರ್ಟ್ ಕಾರ್ಡ್ ಜನತೆಯ ಮುಂದಿಟ್ಟಿದ್ದೇವೆ. ನಿನ್ನೆಯಷ್ಟೇ ದೇಶದ 10 ಲಕ್ಷ ಬೂತ್ ಗಳಲ್ಲಿ ಸಂವಾದ ನಡೆಸಿದ್ದಾರೆ. ಕಾಂಗ್ರೆಸ್ ಶೇ 100 ರಷ್ಟು ಭ್ರಷ್ಟ ಸರ್ಕಾರವಾಗಿದೆ. ಕರ್ನಾಟಕದ ಚುನಾವಣೆ ಮುಂಬರುವ ಲೋಕಸಭಾ ಚುನಾವಣೆಗೆ ಉದಾಹರಣೆಯಾಗಿದೆ ಎಂದು  ಜಿ.ವಿ.ಎಲ್ ನರಸಿಂಹರಾವ್ ರಾಷ್ಟ್ರೀಯ ವಕ್ತಾರರು ಅಭಿಪ್ರಾಯಿಸಿದರು.

Follow Us:
Download App:
  • android
  • ios