ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ಅನುಕೂಲ: ಶಾಸಕ ಗೋಪಾಲಕೃಷ್ಣ ಬೇಳೂರು

ಟೀಕೆ ಟಿಪ್ಪಣಿಗಳು ಸತ್ತಹೋಗುತ್ತವೆ. ಮಾಡಿದ ಅಭಿವೃದ್ಧಿ ಕಾರ್ಯಗಳು ಮಾತನಾಡುವಂತೆ ಮಾಡುತ್ತವೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು. 

Congress guarantee schemes benefit the poor Says MLA Gopalakrishna Belur

ರಿಪ್ಪನ್‍ಪೇಟೆ (ಜ.08): ಟೀಕೆ ಟಿಪ್ಪಣಿಗಳು ಸತ್ತಹೋಗುತ್ತವೆ. ಮಾಡಿದ ಅಭಿವೃದ್ಧಿ ಕಾರ್ಯಗಳು ಮಾತನಾಡುವಂತೆ ಮಾಡುತ್ತವೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು. ಯಡೇಹಳ್ಳಿಯಿಂದ ರಿಪ್ಪನ್‍ಪೇಟೆಯ ವರಗಿನ ಸಂಪರ್ಕ ರಸ್ತೆಗೆ 20 ಕೋಟಿ ರು. ವೆಚ್ಚದ 8 ಕಿ.ಮೀ.ದೂರದ ರಾಜ್ಯಹೆದ್ದಾರಿಯ ಆಗಲೀಕರಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ, ಬಳಿಕ ರಿಪ್ಪನ್‍ಪೇಟೆಯ ವಿನಾಯಕ ವೃತ್ತದಲ್ಲಿ ಶಂಕುಸ್ಥಾಪನಾ ಸಮಾರಂಭದ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯಿಂದಾಗಿ ಸರ್ಕಾರ ದಿವಾಳಿಯಾಗಿದೆ ಎಂದು ವಿರೋಧಪಕ್ಷದವರು ಬಾಯಿ ಬಡಿದುಕೊಳ್ಳುತ್ತಿದ್ದು, ಇದರಿಂದ ನಮ್ಮ ಸರ್ಕಾರ ಇನ್ನೂಷ್ಟು ಆಭಿವೃದ್ಧಿಗೆ ಹಣ ಹರಿದು ಬರುತ್ತಿದೆ. ಗ್ಯಾರಂಟಿ ಯೋಜನೆಯಿಂದಾಗಿ ರೈತ ಮಹಿಳೆಯರು ಬಡವರು ದೀನದಲಿತರ ಉದ್ಧಾರವಾಗುವಂತಾಗಿದೆ ಎಂದರು. ಬಡವರ ಕಣ್ಣೀರು ಹಾಕಿಸುವ ಮೂಲಕ ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಲಕ್ಷಾಂತರ ಕೋಟಿ ಸಾಲ ಮಾಡಿ ಖಜಾನೆ ಖಾಲಿ ಮಾಡಿತು. ನಮ್ಮ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಾಲವನ್ನು ತೀರಿಸುವ ಮೂಲಕ ಆಭಿವೃದ್ಧಿಗೂ ಹಣದ ಹೊಳೆ ಹರಿಸುತ್ತಿದ್ದಾರೆಂದರು.

ಮೋದಿಗೆ ಸೆಡ್ಡು ಹೊಡೆಯುವ ರಾಜಕಾರಣಿ ಅಂದ್ರೆ ಸಿದ್ದರಾಮಯ್ಯ, ಅದಕ್ಕೆ ದ್ವೇಷದ ರಾಜಕಾರಣ ಮಾಡಲಾಗ್ತಿದೆ: ಬೇಳೂರು

ಈ ಹಿಂದಿನ ಸರ್ಕಾರ ಕೊರೂನಾ ಕಾರಣ ಹೇಳಿಕೊಂಡು ಹಳೆಯ ಸರ್ಕಾರಿ ಬಸ್‍ಗಳನ್ನು ಓಡಿಸುತ್ತಿತ್ತು. ಮೂರುಪಟ್ಟು ಬೆಲೆ ಏರಿಸಿ ಬಡವವರಿಗೆ ಬರೆ ಎಳೆದಿತ್ತು. ಆದರೆ ಈಗಿನ ಸರ್ಕಾರ 3 ಸಾವಿರಕ್ಕೂ ಆಧಿಕ ಸರ್ಕಾರಿ ಬಸ್‍ಗಳನ್ನು ಖರೀದಿಸಿ ಹಂತಹಂತವಾಗಿ ಓಡಾಡಲು ರಾಜ್ಯದ ಎಲ್ಲಾ ಡಿಪೋಗಳಿಗೆ ಕಳುಹಿಸುತ್ತಿದ್ದಾರೆ ಎಂದು ತಿಳಿಸಿದರು. ಸಾಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಈಗಾಗಲೇ 9 ಹೊಸಬಸ್‍ಗಳು ಬಂದಿದ್ದು, ಸಾಗರದಿಂದ ಮಣಿಪಾಲ ಮಂಗಳೂರಿಗೆ ಹಾಗೂ ಸಾಗರದಿಂದ ನೇರ ತಿರುಪತಿಗೆ ಬಸ್‍ಗಳನ್ನು ಬಿಡಲಾಗಿದೆ. ಇನ್ನೂ ಸಾಗರ ಅನಂದಪುರ ರಿಪ್ಪನ್‍ಪೇಟೆ ಮಾರ್ಗ ಧರ್ಮಸ್ಥಳ ಸುಬ್ರಹ್ಮಣ್ಯಕ್ಕೆ ನೇರ ಬಸ್ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದರು.

ಈಗಾಗಲೇ ಶರಾವತಿ ಮುಳಗಡೆ ಸಂತ್ರಸ್ತರ ಸಮಸ್ಯೆಗೆ ಸರ್ಕಾರ ಸ್ಪಂದಿಸಿದ್ದು ಸುಪ್ರೀಂ ಕೋರ್ಟ್‍ನಲ್ಲಿ ರೈತರ ಪರವಾಗಿ ಪೂರಕ ದಾಖಲೆಗಳನ್ನು ಸಲ್ಲಿಸುವ ಮೂಲಕ ಶೀಘ್ರದಲ್ಲಿ ರೈತರ ಪರ ತೀರ್ಪು ಬರುವ ಎಲ್ಲಾ ಲಕ್ಷಣಗಳು ಇದೆ ಎಂದು ವಿವರಿಸಿದ ಅವರು, ಯಾವುದೇ ಕಾರಣಕ್ಕೂ ಸಂತ್ರಸ್ತ ರೈತರನ್ನು ಒಕ್ಕಲೇಬಿಸಲು ಬಿಡುವುದಿಲ್ಲ ಎಂದು ಧೈರ್ಯ ತುಂಬಿದರು.ಎಂ.ಎಲ್.ಸಿ.ಬಲ್ಕಿಸ್‍ಬಾನು ಮಾತನಾಡಿ, ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ನ ಬೇಳೂರು ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ ಸಂಪುಟದಲ್ಲಿ ಸಚಿವರಾಗವ ಕಾಲ ದೂರವಿಲ್ಲ. 

ಈಶ್ವರಪ್ಪರನ್ನು ಪಕ್ಷದಿಂದ ಉಚ್ಚಾಟಿಸಿದ್ದು ವಿಜಯೇಂದ್ರಗೆ ನುಂಗಲಾರದ ತುತ್ತು: ಶಾಸಕ ಗೋಪಾಲಕೃಷ್ಣ ಬೇಳೂರು

ಸಿದ್ದರಾಮಯ್ಯ ಶಿವಕುಮಾರ ನೇತೃತ್ವದ ಸರ್ಕಾರ ಚುನಾವಣೆ ಪ್ರಣಾಳಿಕೆಯಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಸರ್ಕಾರದ ಖಜಾನೆಯನ್ನು ತುಂಬಿಸಿಕೊಳ್ಳುವುದರೊಂದಿಗೆ ಬಲಿಷ್ಠ ಸರ್ಕಾರವಾಗಿ ಜನಮನಗೆದ್ದಿದೆ ಎಂದರು. ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಮಂಜುನಾಥಗೌಡ, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ, ಮಾಜಿ ಸದಸ್ಯ ರಾಮಚಂದ್ರ, ಶಿಮುಲ್ ಆಧ್ಯಕ್ಷ ವಿದ್ಯಾಧರ, ಗ್ರಾಪಂ ಆಧ್ಯಕ್ಷೆ ಧನಲಕ್ಷ್ಮಿ, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಹೊಸನಗರ ತಾಲ್ಲೂಕ್ ಬ್ಲಾಕ್ ಕಾಂಗ್ರೇಸ್ ಆಧ್ಯಕ್ಷ ಬಿ.ಜೆ.ಚಂದ್ರಮೌಳಿ ಮತ್ತಿತರರಿದ್ದರು.

Latest Videos
Follow Us:
Download App:
  • android
  • ios