ಸಿದ್ಧಗಂಗಾ ಮಠಕ್ಕೆ ಬಿಡುಗಡೆಯಾಗಿದ್ದ ಅನುದಾನವನ್ನು ಪುನಃ ಬಿಡುಗಡೆ ಮಾಡದಿದ್ದರೆ ಬೀದಿಗಿಳಿದು ಹೋರಾಟ ಮಾಡುವ ಎಚ್ಚರಿಕೆಯನ್ನು ಗ್ರಾಮಾಂತರ ಶಾಸಕ ಬಿ. ಸುರೇಶಗೌಡ ನೀಡಿದ್ದಾರೆ.

ತುಮಕೂರು (ಮೇ.29): ಸಿದ್ಧಗಂಗಾ ಮಠಕ್ಕೆ ಬಿಡುಗಡೆಯಾಗಿದ್ದ ಅನುದಾನವನ್ನು ಪುನಃ ಬಿಡುಗಡೆ ಮಾಡದಿದ್ದರೆ ಬೀದಿಗಿಳಿದು ಹೋರಾಟ ಮಾಡುವ ಎಚ್ಚರಿಕೆಯನ್ನು ಗ್ರಾಮಾಂತರ ಶಾಸಕ ಬಿ. ಸುರೇಶಗೌಡ ನೀಡಿದ್ದಾರೆ.

ಅವರು ತಮ್ಮ ನೂತನ ಕಚೇರಿ ಉದ್ಘಾಟನಾ ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಸಿದ್ಧಗಂಗಾ ಮಠ(Siddagangamutt)ದ 10 ಕೋಟಿ ರು. ಅನುದಾನ ಸೇರಿ ಗ್ರಾಮಾಂತರ ಕ್ಷೇತ್ರಕ್ಕೆ ಬಿಡುಗಡೆಯಾಗಿದ್ದ 20 ಕೋಟಿ ರು. ಹಣವನ್ನು ಕಾಂಗ್ರೆಸ್‌ ಸರ್ಕಾರ ತಡೆ ಹಿಡಿದಿದೆ ಎಂದಿದ್ದಾರೆ. ಸಿದ್ಧಗಂಗಾ ಮಠದ ಅನುದಾನವನ್ನು ಶಾಶ್ವತವಾಗಿ ತಡೆ ಹಿಡಿಯುವ ಧಮ್ಮು ಸರ್ಕಾರಕ್ಕೆ ಇಲ್ಲ. ಅನುದಾನ ಬಿಡುಗಡೆ ಮಾಡದೇ ಇದ್ದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ. ಭ್ರಷ್ಟಾಚಾರ ಆಗಿದ್ದರೆ ತಡೆಹಿಡಿಯಲಿ. ಅದನ್ನು ಬಿಟ್ಟು ಅನಾವಶ್ಯಕವಾಗಿ ತಡೆಹಿಡಿಯಬಾರದು. ಆದರೂ ಮಠದ ಅನುದಾನ ತಡೆ ತೆರವು ಮಾಡುತ್ತಾರೆ ಎಂಬ ವಿಶ್ವಾಸ ಇದೆ ಎಂದರು.

Tumakuru Politics: ಹಾಲಿ, ಮಾಜಿ ಶಾಸಕರ ಮುಗಿಯದ ಕದನ ವಿರಾಮ

ಕಾಂಗ್ರೆಸ್‌(Congress) ಸುಳ್ಳು ಭರವಸೆ ಕೊಟ್ಟು ಹಿಂದಿನ ಬಾಗಿಲಿನಿಂದ ಚುನಾವಣೆ ಗೆದ್ದಿದ್ದಾರೆ. ಕಾಂಗ್ರೆಸ್‌ನವರು ಹೇಳಿದಂತೆ ನಾನೂ ಕೂಡ 200 ಯೂನಿಟ್‌ವರೆಗೆ ಬಿಲ… ಕಟ್ಟಲ್ಲ. ನಮ್ಮ ಯಾವ ಕಾರ್ಯಕರ್ತರು ಕರೆಂಚ್‌ ಬಿಲ… ಕಟ್ಟಲ್ಲ. ಡಿಕೆಶಿ ಅವರು ಮನೆ ಯಜಮಾನಿಗೆ 2 ಸಾವಿರ ಹಣ ಕೊಡ್ತಿನಿ ಅಂದರು. ಈಗ ಅವರಿಗೆ ಸೊಸೆಗೆ ಹಣ ಹಾಕಬೇಕೋ ಅತ್ತೆಗೆ ಹಣ ಹಾಕಬೇಕೋ ಅನ್ನುವ ಗೊಂದಲ ಶುರುವಾಗಿದೆ ಎಂದ ಅವರು ಲೋಕಸಭಾ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು.