ಕಾಂಗ್ರೆಸ್ ಸರ್ಕಾರ ಕಳ್ಳರ ಸರ್ಕಾರ: ಛಲವಾದಿ ನಾರಾಯಣಸ್ವಾಮಿ

ಕಾಂಗ್ರೆಸ್ ಸರ್ಕಾರ ಕಳ್ಳರ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೈತಿಕತೆ ಇದ್ದರೆ ನ್ಯಾಯಾಲಯದ ಆದೇಶ ಪಾಲಿಸುವ ಜೊತೆ ಜೊತೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದರು, ಹಾಗಾಗಿ ಅವರಿಗೆ ಸಂವಿಧಾನದ ಬಗ್ಗೆ ಗೌರವವಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು. 

Congress Government of Thieves Government Says Chalavadi Narayanaswamy gvd

ಕೊಳ್ಳೇಗಾಲ (ಅ.28): ಕಾಂಗ್ರೆಸ್ ಸರ್ಕಾರ ಕಳ್ಳರ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೈತಿಕತೆ ಇದ್ದರೆ ನ್ಯಾಯಾಲಯದ ಆದೇಶ ಪಾಲಿಸುವ ಜೊತೆ ಜೊತೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದರು, ಹಾಗಾಗಿ ಅವರಿಗೆ ಸಂವಿಧಾನದ ಬಗ್ಗೆ ಗೌರವವಿಲ್ಲ, ಅವರು ಮುಂದೆ ರಾಜೀನಾಮೆ ನೀಡುವ ಕಾಲ ಬಂದೆ ಬರುತ್ತೆ ನೋಡಿ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು. ಕೊಳ್ಳೇಗಾಲದಲ್ಲಿ ಡಾ.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸಂಪೂರ್ಣ ಕಳ್ಳರ ಸರ್ಕಾರವೇ ಆಗಿದೆ. ಇವರಿಗೆ ಸಂವಿಧಾನದ ಬಗ್ಗೆ ಗೌರವವಿಲ್ಲ, ಅಭಿವೖದ್ದಿ ಬಗ್ಗೆ ಕಾಳಜಿಯೂ ಇಲ್ಲದಾಗಿದೆ.

ಸಿಎಂ ವಿರುದ್ಧ ಎರಡು ನ್ಯಾಯಾಲಯಗಳು ತೀರ್ಪು ನೀಡಿದ್ದರೂ ಸಹಾ ಉಪಚುನಾವಣೆ ನೆಪಹೇಳಿಕೊಂಡು ಜನ ಮರೆಯಲಿ ಎಂದು ತಪ್ಪಿಸಿಕೊಂಡು ತಿರುಗುತ್ತಿದ್ದಾರೆ ಎಂದು ಟೀಕಿಸಿದರು. ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಹೆಲಿಪ್ಯಾಡ್‌ನಲ್ಲಿ ಬಂದು ಫೈಲ್ ಹೊತ್ತುಕೊಂಡು ಹೋದ ಕಳ್ಳರು, ಅವರಿಗೆ ಯಾರ ಬಗ್ಗೆಯೂ ಮಾತನಾಡುವ ನೈತಿಕತೆ ಇಲ್ಲ, ಅವರು ರಾಜಕೀಯ ಚರಿತ್ರೆ ಗೊತ್ತಿಲ್ಲದವರು ಇವರಿಗೆ ಜನರೇ ತಕ್ಕ ಉತ್ತರ ನೀಡುತ್ತಾರೆ. ಕಾಂಗ್ರೆಸ್ ಪಕ್ಷ ಮುಳುಗುವ ಹಡಗು, ನಮ್ಮ ಪಕ್ಷದವರಾರು ಹೋಗುವ ಪ್ರಶ್ನೆಯೆ ಇಲ್ಲ, ವಿಜಯೇಂದ್ರ ಅವರ ನೇತೃತ್ವದಲ್ಲಿ 150ಕ್ಕೂ ಹೆಚ್ಚು ಸ್ಥಾನ ಗೆದ್ದು ನಾವು ಮುಂದೆ ಸರ್ಕಾರ ನಡೆಸುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ದೇವಸ್ಥಾನಕ್ಕೂ ವಕ್ಫ್‌ ಮಂಡಳಿ ನೋಟಿಸ್‌ ನೀಡ್ತಾರೆ: ಶಾಸಕ ಬಸನಗೌಡ ಯತ್ನಾಳ

ಯೋಗೇಶ್ವರ್‌ಗೆ ಆಮಿಷವೊಡ್ಡಿ ಅಪಹರಿಸಿದ್ದಾರೆ: ಮಾಜಿ ಸಚಿವ ಯೋಗೇಶ್ವರ್ ಅವರಿಗೆ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿ ಹಾಕಲು ತಾಕತ್ತಿಲ್ಲದೆ ನಮ್ಮ ಅಭ್ಯರ್ಥಿಯನ್ನು ಅಪಹರಿಸಿದ್ದಾರೆ, ಮೊದಲು ಉಪಮುಖ್ಯಮಂತ್ರಿಗಳು ನಾನೇ ನಿಲ್ಲುವೆ ಅಂದ್ರು, ನಂತರ ನನಗಿಂತ ಗಟ್ಟಿ ವ್ಯಕ್ತಿಬೇಕು ಎಂದು ಡಿ.ಕೆ.ಸುರೇಶ್ ನಿಲ್ಲುವೆ ಅಂದ್ರು, ಆಮೇಲೆ ನಾವಿಬ್ಬರು ಗಟ್ಟಿತನವಿಲ್ಲದವರು ಎಂದು ಯೋಗೇಶ್ವರ್ ಅವರಿಗೆ ಆಸೆ, ಅಮಿಷವೊಡ್ಡಿ ಕರೆದುಕೊಂಡು ಹೋಗಿದ್ದಾರೆ, ಕಾಂಗ್ರೆಸ್‌ನಲ್ಲಿ ಕ್ಯಾಂಡಿಡೇಟ್ ಕೊರತೆ ಇದೆ, ಹಗಲು ಕಂಡ ಬಾವಿಯಲ್ಲಿ ನಮ್ಮ ಶಾಸಕರಾರು ರಾತ್ರಿ ಬೀಳಲ್ಲ ಎಂದರು.

ಸಿಎಂ ರಾಜೀನಾಮೆ ನೀಡುವ ದಿನ ಬಂದೇ ಬರುತ್ತೆ: ಸಿಎಂ ಖಂಡಿತ ರಾಜೀನಾಮೆ ನೀಡಬೇಕು, ನೀಡುವ ದಿನ ಬಂದೇ ಬರುತ್ತೆ, ಜನತೆ ಕಾದು ನೋಡಬೇಕು, ದಲಿತರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ 98 ಮಂದಿಗೆ ಶಿಕ್ಷೆ ನೀಡಿರುವ ನ್ಯಾಯಾಲಯದ ತೀರ್ಪನ್ನು ನಾವು ಸ್ವಾಗತಿಬೇಕು. ಇದು ವಿಜೃಂಭಿಸುವುದು ಅಲ್ಲ, ಸುಮ್ಮನಿರುವುದು ಅಲ್ಲ, ಇದೊಂದು ಪ್ರಕ್ರಿಯೆ ಮತ್ತು ಸಂವಿಧಾನದ ಗಟ್ಟಿತನ, ನ್ಯಾಯಾಲಯದ ತೀರ್ಪಿನಲ್ಲಿ ಕಾನೂನು ಉತ್ತಮ ರೀತಿ ಕೆಲಸ ಮಾಡಿದೆ, ಇದರಿಂದ ನಾವೆಲ್ಲರೂ ಸಮಾನರಂತೆ ಸಹೋದರರಂತೆ ಬಾಳಬೇಕೆಂಬ ಸಂದೇಶವಿದೆ ಎಂದರು.

ವಕ್ಫ್‌ ಆಸ್ತಿ: ರೈತರು ಆತಂಕ ಪಡುವ ಅಗತ್ಯವಿಲ್ಲ: ಸಚಿವ ಎಂ.ಬಿ.ಪಾಟೀಲ್

ಎಂಪಿಯವರು ಮಲಗೋದು ಲೇಟು: ಸಂಸದ ಸುನೀಲ್ ಬೋಸ್ ಮಲಗೋದು ಲೇಟು, ಏಳೋದು ಲೇಟು ಹಾಗಾಗಿ ಇಲ್ಲಿನ ಕೆಲಸ ಕಾರ್ಯಗಳು ಲೇಟು ಎಂಬುದನ್ನು ಆಳುವ ಸರ್ಕಾರ ಗಮನಿಸಬೇಕು, ಜಿಲ್ಲೆಯ ಜನತೆ ಅರಿಯಬೇಕು, ಗೆದ್ದು ಸರ್ಕಾರ ಆಳುವ ಜನರಿಗೆ ಇಲ್ಲಿನ ರಸ್ತೆಯ ಗುಂಡಿಗಳ ಸಮಸ್ಯೆ ಕಾಣಬೇಕು, ಎಂಪಿಗೆ ಕಾಣಲಿಲ್ಲ ಎಂದರೆ ಸರ್ಕಾರ ಮನಗಾಣಬೇಕಿದೆ. ಇನ್ನಾದರೂ ಜನರ ಕೆಲಸ ಮಾಡಬೇಕು ಎಂಬ ಮನಸ್ಸು ಎಂಪಿ ಮಾಡಬೇಕಿದೆ ಎಂದರು. ಈ ಸಂದಭ೯ದಲ್ಲಿ ಮಾಜಿ ಸಚಿವ ಎನ್ ಮಹೇಶ್, ಮಾಜಿ ಶಾಸಕ ಎಸ್ ಬಾಲರಾಜು ಇನ್ನಿತರರಿದ್ದರು.

Latest Videos
Follow Us:
Download App:
  • android
  • ios