ಕಾಂಗ್ರೆಸ್‌ಗೆ ಶೇ.48ರಷ್ಟು ಮತ - ಬಿಜೆಪಿಗೆ ಶೇ.41 ಜೆಡಿಎಸ್‌ಗೆ ಶೇ.12ರಷ್ಟು ಮತ   2023ರ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ  ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌ ಅಭಿಮತ

 ಮಂಡ್ಯ (ಡಿ.25): ಸ್ಥ​ಳೀಯ ಸಂಸ್ಥೆ​ಗ​ಳಿಂದ ವಿ​ಧಾನ ಪ​ರಿ​ಷ​ತ್ತಿಗೆ ನ​ಡೆದ ಚು​ನಾ​ವ​ಣೆ​ಯಲ್ಲಿ (Election) ಕಾಂಗ್ರೆಸ್‌ (Congress) ಪಕ್ಷಕ್ಕೆ ಶೇ.48ರಷ್ಟು ಮತ ಬಂದಿದ್ದು, ಇದು ಮುಂಬ​ರುವ 2023ರ ವಿ​ಧಾನಸಭಾ ಚು​ನಾವ​ಣೆಗೆ (Assembly election) ದಿ​ಕ್ಸೂ​ಚಿ​ಯಾ​ಗಿದೆ ಎಂದು ಕೆ​ಪಿ​ಸಿಸಿ ಕಾ​ರ್ಯಾ​ಧ್ಯಕ್ಷ ಸಲೀಂ ಅ​ಹ​ಮ್ಮದ್‌ ತಿ​ಳಿ​ಸಿ​ದರು. ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿ​ಜೆ​ಪಿಗೆ ಶೇ.41ರಷ್ಟುಮತ ಬಂದಿ​ದ್ದರೆ, ಜೆ​ಡಿ​ಎಸ್‌ಗೆ (JDS) ಶೇ.12ರಷ್ಟು ಮಾತ್ರ ಮತ ಬಂದಿದೆ. ಹಾ​ನ​ಗಲ್‌ ಉಪ ಚು​ನಾ​ವ​ಣೆ​ಯಲ್ಲೂ ಕಾಂಗ್ರೆಸ್‌ (Congress) ಪ​ಕ್ಷಕ್ಕೆ ಗ​ಣ​ನೀಯ ಪ್ರ​ಮಾ​ಣ​ದಲ್ಲಿ ಮತ ಗ​ಳಿ​ಸಿಕೊಂಡಿದೆ. ಇದು ಮುಂದಿನ ದಿ​ನ​ಗ​ಳಲ್ಲಿ ಜ​ನರು ಕಾಂಗ್ರೆಸ್‌ ಪ​ಕ್ಷ​ದತ್ತ ವಾ​ಲಿ​ದ್ದಾರೆ ಎಂಬುದರ ಸಂಕೇತವಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇ​ಳಿ​ದರು.

ಜ​ನ​ವಿ​ರೋಧಿ ಸರ್ಕಾರ: ಕೇಂದ್ರ ಹಾಗೂ ರಾ​ಜ್ಯ​ದಲ್ಲಿ ಆ​ಡ​ಳಿತ ನ​ಡೆ​ಸು​ತ್ತಿ​ರುವ ಬಿ​ಜೆಪಿ (BJP) ನೇ​ತೃ​ತ್ವದ ಸರ್ಕಾರ ಜ​ನ​ವಿ​ರೋ​ಧಿ​ಯಾ​ಗಿದೆ. ತೈಲೋತ್ಪನ್ನ ಬೆಲೆಗಳು ಗಗನಕ್ಕೇರಿವೆ. ಸಿಲಿಂಡರ್‌ ಬೆಲೆ 350 ರು.ನಿಂದ 1000 ರು.ವರೆಗೂ ಹೆಚ್ಚಾ​ಗಿ​ದೆ. ವರ್ಷಕ್ಕೆ 15 ಲಕ್ಷ ಉ​ದ್ಯೋಗ ಸೃ​ಷ್ಟಿ​ಸು​ವು​ದಾಗಿ ಹೇ​ಳಿದ್ದ ಕೇಂದ್ರ ಸರ್ಕಾರ ಈ​ವ​ರೆ​ವಿಗೂ ಉ​ದ್ಯೋಗ ಸೃ​ಷ್ಟಿಗೆ ಆದ್ಯ​ತೆ​ಯನ್ನೇ ನೀ​ಡಿಲ್ಲ ಎಂದು ಹ​ರಿ​ಹಾ​ಯ್ದರು.

ದು​ರ​ಹಂಕಾರ ಪ್ರ​ದರ್ಶನ: ರೈ​ತರ (Farmers) ವಿ​ರೋ​ಧದ ನ​ಡು​ವೆಯೂ ಕೃಷಿ ಕಾ​ಯ್ದೆ​ಗ​ಳನ್ನು ಜಾ​ರಿ​ಗೊ​ಳಿಸಿ ಒಂದು ವರ್ಷದ ಬ​ಳಿಕ ವಾ​ಪಸ್‌ ಪ​ಡೆ​ದಿದ್ದಾರೆ. ಇ​ದ​ರಿಂದಾಗಿ 700 ಮಂದಿ ರೈ​ತರು ಹು​ತಾ​ತ್ಮ​ರಾ​ಗಿ​ದ್ದಾರೆ. ಇ​ದಕ್ಕೆ ಪ್ರ​ಧಾನಿ ನ​ರೇಂದ್ರ​ ಮೋ​ದಿ​ಯ​ವರ ದು​ರ​ಹಂಕಾ​ರದ ನ​ಡೆಯೇ ಕಾ​ರಣ ಎಂದು ಟೀ​ಕಿ​ಸಿ​ದರು.

ಕ​ಮೀ​ಷನ್‌ ಬಗ್ಗೆ ತ​ನಿಖೆ ಇಲ್ಲ: ರಾ​ಜ್ಯ​ದಲ್ಲಿ ಆ​ಡ​ಳಿ​ತಾ​ರೂಢ ಬಿ​ಜೆಪಿ (BJP) ಸ​ರ್ಕಾರ ಕ​ಮೀ​ಷನ್‌ ದಂಧೆ​ಯಲ್ಲಿ ತೊ​ಡ​ಗಿದೆ. ಶೇ.40ರಷ್ಟುಕ​ಮೀ​ಷನ್‌ ಕೊ​ಡ​ಬೇಕು ಎಂದು ಗು​ತ್ತಿ​ಗೆ​ದಾ​ರ​ರ ಸಂಘದ ಅ​ಧ್ಯ​ಕ್ಷರೇ ಪ್ರ​ಧಾನಿ ​ಮೋ​ದಿಗೆ (Prime Minister Narendra modi) ಪತ್ರ ಬ​ರೆ​ದಿ​ದ್ದಾರೆ. ಆ​ದರೂ ಈ​ವ​ರೆ​ವಿಗೂ ಯಾ​ವುದೇ ತ​ನಿಖೆ ನ​ಡೆ​ಸಿಲ್ಲ. ನಾನೂ ಭ್ರ​ಷ್ಟಾ​ಚಾರ ಮಾ​ಡಲ್ಲ, ಬೇ​ರೆ​ಯ​ವ​ರಿಗೂ ಮಾ​ಡಲು ಬಿ​ಡು​ವು​ದಿಲ್ಲ ಎಂದು ಹೇ​ಳುವ ಮೋ​ದಿ​ಯ​ವರು ಈ ವಿ​ಚಾ​ರ​ದಲ್ಲಿ ಏಕೆ ಮೌನ ವ​ಹಿ​ಸಿ​ದ್ದಾರೆ. ಸಿ​ಬಿಐ, ಇಡಿ, ಐ​ಟಿ​ಯಂತ​ಹದ ತ​ನಿಖಾ ಸಂಸ್ಥೆ​ಗ​ಳಿಂದ ತ​ನಿ​ಖೆಗೆ ಆ​ದೇಶ ಮಾ​ಡ​ಬೇ​ಕಿತ್ತು ಎಂದು ಕು​ಟು​ಕಿ​ದರು.

ಕೋ​ವಿಡ್‌ನಲ್ಲಿ ಭ್ರಷ್ಟಾ​ಚಾರ: ಕೋ​ವಿಡ್‌ನಂತಹ (Covid) ಸಾಂಕ್ರಾ​ಮಿಕ ರೋ​ಗ​ವನ್ನು ಕೇ​ವಲ 21 ದಿ​ನ​ಗಳಲ್ಲಿ ತೊ​ಲ​ಗಿ​ಸು​ವು​ದಾಗಿ ಹೇ​ಳಿ, ಚ​ಪ್ಪಾಳೆ ತಟ್ಟಿ, ದೀಪ ಹಚ್ಚಿ, ಜಾ​ಗಟೆ ಬಾ​ರಿಸಿ ಎಂದೆಲ್ಲಾ ಕರೆ ನೀ​ಡಿದ್ದ ಮೋ​ದಿ ರೋ​ಗ​ವನ್ನು ಹ​ತೋ​ಟಿಗೆ ತ​ರು​ವಲ್ಲಿ ವಿ​ಫ​ಲ​ರಾ​ದರು. ವೆಂಟಿ​ಲೇ​ಟರ್‌, ಪಿಪಿಇ ಕಿಟ್‌ ಸೇ​ರಿ​ದಂತೆ ಔ​ಷಧ ಖ​ರೀ​ದಿ​ಯಲ್ಲೂ ಭಾರೀ ಭ್ರ​ಷ್ಟಾ​ಚಾರ ನ​ಡೆ​ಸ​ಲಾ​ಗಿದೆ ಎಂದು ಆ​ರೋ​ಪಿ​ಸಿ​ದರು.

ಭೂ​ ಕ​ಬ​ಳಿ​ಕೆಗೆ ಒ​ಳ​ಗಾ​ಗಿ​ರುವ ಸ​ಚಿವ ಭೈ​ರತಿ ಬ​ಸ​ವ​ರಾಜ್‌ ರಾ​ಜೀ​ನಾ​ಮೆಗೆ ಕಾಂಗ್ರೆಸ್‌ (Congress) ಒ​ತ್ತಾ​ಯಿ​ಸಿದೆ. ಆ​ದರೂ ಈ​ವ​ರೆ​ವಿಗೂ ಅ​ವ​ರನ್ನು ವಜಾ ಮಾ​ಡ​ಲಿಲ್ಲ. ಇ​ಲ್ಲವೇ ಅ​ವ​ರಿಂದ ರಾ​ಜೀ​ನಾ​ಮೆ​ಯನ್ನೂ (Resignation) ಪ​ಡೆ​ಯ​ಲಿಲ್ಲ. ಇ​ದರ ವಿ​ರುದ್ಧ ಕಾಂಗ್ರೆಸ್‌ ನಿ​ರಂತರ ಹೋ​ರಾಟ ನ​ಡೆ​ಸು​ತ್ತದೆ ಎಂದರು.

ಜಿಪಂ ಚು​ನಾ​ವಣೆ ಪಲಾ​ಯನ: ಜಿಲ್ಲಾ ಮ​ತ್ತು ತಾ​ಲೂಕು ಪಂಚಾ​ಯ್ತಿ ಚು​ನಾ​ವ​ಣೆ​ಗ​ಳನ್ನು ಮುಂದೂ​ಡುವ ಮೂ​ಲಕ ರಾ​ಜ್ಯದ ಬಿ​ಜೆಪಿ ಸರ್ಕಾರ ಪಲಾ​ಯನ ವಾದ ಅ​ನು​ಸ​ರಿ​ಸು​ತ್ತಿದೆ. ರಾ​ಜ್ಯ​ದಲ್ಲಿ ತಮ್ಮ ಪ​ಕ್ಷಕ್ಕೆ ಜ​ನಾ​ಶೀರ್ವಾದ ಇಲ್ಲ ಎಂಬ ಕಾ​ರ​ಣಕ್ಕೆ ಇಲ್ಲ ಸ​ಲ್ಲದ ನೆ​ಪ​ವೊಡ್ಡಿ ಚು​ನಾ​ವ​ಣೆ ಮುಂದೂ​ಡು​ತ್ತಿದೆ. ಬಿ​ಜೆಪಿ ಸಂಸ​ದರು, ಶಾ​ಸ​ಕರು ಜ​ನಾ​ಶೀರ್ವಾದ ಯಾ​ತ್ರೆ ಮಾ​ಡು​ತ್ತಿ​ದ್ದಾರೆ. ಆದರೆ, ಆಡಳಿತ ನಡೆಸುವವರಿಗೆ ರಾಜ್ಯದ ಜನರು ಆ​ಶೀರ್ವಾದ ಮಾಡುವ ಬ​ದಲು ಆ​ಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಜರಿದರು.

ಕೇಂದ್ರ​ದಲ್ಲಿ ಈ ಹಿಂದೆ ಡಾ.ಮನ್‌ಮೋಹನ್‌ ಸಿಂಗ್‌ ನೇ​ತೃ​ತ್ವದ ಯು​ಪಿಎ (UPA) ಸರ್ಕಾರ ಉ​ತ್ತ​ಮ​ವಾಗಿ ಆ​ಡ​ಳಿತ ನ​ಡೆ​ಸಿದೆ. ರಾ​ಜ್ಯ​ದಲ್ಲಿ 5 ವರ್ಷಗಳ ಕಾಲ ಸಿ​ದ್ದ​ರಾ​ಮಯ್ಯ ಸರ್ಕಾರ ಉ​ತ್ತಮ ಯೋ​ಜ​ನೆ​ ನೀ​ಡಿದೆ. ರಾ​ಷ್ಟ್ರದ ಜ​ನತೆ ಎ​ಲ್ಲ​ವನ್ನೂ ತು​ಲನೆ ಮಾ​ಡು​ತ್ತಿ​ದ್ದಾರೆ. ಮುಂದಿನ ದಿ​ನ​ಗ​ಳಲ್ಲಿ ಕಾಂಗ್ರೆಸ್‌ ಆ​ಡ​ಳಿತ ನಿ​ಶ್ಚಿತ ಎಂದು ವಿ​ಶ್ವಾಸ ವ್ಯ​ಕ್ತ​ಪ​ಡಿ​ಸಿ​ದರು.

ಮಾಜಿ ಸಚಿವರಾದ ಎನ್‌.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ಎಂ.ಎಸ್‌. ಆತ್ಮಾನಂದ, ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್‌, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್‌, ಮಲ್ಲಾಜಮ್ಮ, ಮುಖಂಡರಾದ ಸುರೇಶ್‌ಕಂಠಿ ಹಾಗೂ ವಿಜಯಕುಮಾರ್‌ ಉಪಸ್ಥಿತರಿದ್ದರು.