ನಿರ್ಭಯ ಘಟನೆ-ಮಣಿಪುರ ಹಿಂಸಾಚಾರ ಪ್ರತಿಭಟನೆ ಹೋಲಿಸಿ ಪೇಚಿಗೆ ಸಿಲುಕಿದ ಕಾಂಗ್ರೆಸ್!
ಮಣಿಪುರದ ಹಿಂಸಾಚಾರ, ಅತ್ಯಾಚಾರ, ಹತ್ಯೆಗಳು ಭೀಕರವಾಗಿದ್ದರೂ ಪ್ರಧಾನಿ ಮೋದಿ ಮೌನವಹಿಸಿದ್ದಾರೆ. ಸೂಕ್ತ ಹೇಳಿಕೆಯನ್ನೂ ನೀಡಿಲ್ಲ, ಕ್ರಮ ಕೈಗೊಂಡಿಲ್ಲ ಎಂದು ಕಾಂಗ್ರಸ್ ಹಾಗೂ ವಿಪಕ್ಷಗಳು ಸತತ ಹೋರಾಟ ನಡೆಸುತ್ತಿದೆ. ಈ ಹೋರಾಟವನ್ನು ಮತ್ತಷ್ಟು ಪರಿಣಾಮಕಾರಿಯನ್ನಾಗಿ ಮಾಡಲು ಕಾಂಗ್ರೆಸ್ ಟ್ವೀಟ್ ಮೂಲಕ ನಿರ್ಭಯ ಘಟನೆ ಬಳಿಕ ನಡೆದ ಹೋರಾಟವನ್ನು ಹೋಲಿಕೆ ಮಾಡಿದೆ. ಆದರೆ ಈ ಹೋಲಿಕೆ ಮಾಡಿ ಕಾಂಗ್ರೆಸ್ ಪೇಚಿಗೆ ಸಿಲುಕಿದೆ.
ನವದೆಹಲಿ(ಜು.25) ಹೊತ್ತಿ ಉರಿಯುತ್ತಿರುವ ಮಣಿಪುರದಲ್ಲಿ ಶಾಂತಿ ಸ್ಥಾಪನೆಗೆ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಅನ್ನೋ ಆರೋಪವನ್ನು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಮಾಡಿದೆ. ಪ್ರಧಾನಿ ಮೋದಿ ಆಡಳಿತದಲ್ಲಿ ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಸಂಸತ್ತಿನಲ್ಲಿ ಮೋದಿ ಅಧಿಕೃತ ಹೇಳಿಕೆ ನೀಡಬೇಕು ಎಂದು ವಿಪಕ್ಷಗಳು ಪಟ್ಟ ಹಿಡಿದಿದೆ. ಒಂದೆಡೆ ಕಾಂಗ್ರೆಸ್ ಸಂಸತ್ತಿನಲ್ಲಿ ಪ್ರತಿಭಟನೆ ಮಾಡುತ್ತಿದ್ದರೆ, ನಾಯಕರು ಸಂಸತ್ ಹೊರಗಡೆ ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಇದರ ನಡುವೆ ಕಾಂಗ್ರೆಸ್ ಟ್ವಿಟರ್ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲೂ ಕೇಂದ್ರ ಬಿಜೆಪಿ ವಿರುದ್ದ ಹೋರಾಟ ತೀವ್ರಗೊಳಿಸಿದೆ. ಇದರ ಭಾಗವಾಗಿ ಮಣಿಪುರ ಹಿಂಸಾಚರ ಬಳಿಕದ ಪ್ರತಿಭಟನೆ ಹಾಗೂ 2012ರಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಬಳಿಕ ನಡೆದ ಪ್ರತಿಭಟನೆಯನ್ನು ಹೋಲಿಕೆ ಮಾಡಿದೆ. ಈ ಮೂಲಕ ಬಿಜೆಪಿಯನ್ನು ಟೀಕಿಸುವ ಪ್ರಯತ್ನ ಮಾಡಿತ್ತು. ಆದರೆ ಈ ಟ್ವೀಟ್, ಕಾಂಗ್ರೆಸ್‌ನ್ನು ಪೇಚಿಗೆ ಸಿಲುಕಿಸಿದೆ. ಅಂದಿನ ಕೇಂದ್ರ ಸರ್ಕಾರದ ವಿರುದ್ಧ ಜನರಿಗೆ ನಂಬಿಕೆ ಇರಲಿಲ್ಲ. ಹೀಗಾಗಿ ಜನರು ಸೇರಿ ಪ್ರತಿಭಟಿಸಿದ್ದರು. ಇಂದು ಮೋದಿ ಸರ್ಕಾರದ ಮಣಿಪುರವನ್ನು ಸೂಕ್ತ ರೀತಿಯಲ್ಲಿ ಪರಿಹರಿಸುವ ವಿಶ್ವಾಸವಿದೆ. ಹೀಗಾಗಿ ಬೀದಿಗಿಳಿದಿಲ್ಲ ಎಂದು ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.
2012ರ ನಿರ್ಭಯಾ ಪ್ರಕರಣ ಬಳಿಕ ದೆಹಲಿ ಬೀದಿ ಬೀದಿಯಲ್ಲಿನ ಚಿತ್ರ ಎಂದು ಪ್ರತಿಭಟನೆಯ ಚಿತ್ರವನ್ನು ಕಾಂಗ್ರೆಸ್ ಪೋಸ್ಟ್ ಮಾಡಿದೆ. ದೆಹಲಿ ಸಂಸತ್ತು, ಕರ್ತವ್ಯಪಥ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ತೀವ್ರಗೊಂಡಿತ್ತು. ಈ ಪ್ರತಿಭಟನೆಯ ಒಂದು ಫೋಟೋವನ್ನು ಕಾಂಗ್ರೆಸ್ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ಇನ್ನು ಇದೇ ಪೋಸ್ಟ್‌ನಲ್ಲಿ ಮಣಿಪುರ ಹಿಂಸಾಚಾರ, ಅತ್ಯಾಚಾರ ಪ್ರಕರಣದ ಬಳಿಕ ದೆಹಲಿಯ ಬೀದಿಗಳಲ್ಲಿ ಯಾವುದೇ ಪ್ರತಿಭಟನೆ ಇಲ್ಲದಿರುವ ಫೋಟವನ್ನು ಹಂಚಿಕೊಂಡಿದೆ.
ಮಣಿಪುರ ಹಿಂಸೆಗೆ ಮತ್ತೆ ಕಲಾಪ ಭಂಗ: ಚರ್ಚೆಗೆ ಸಿದ್ಧ ಎಂಬ ಶಾ ಮನವಿಗೂ ಓಗೊಡದ ವಿಪಕ್ಷ
ಈ ಟ್ವೀಟ್ ಮಾಡಿದ ಬೆನ್ನಲ್ಲೇ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷವೇ ಮೋದಿ ಸರ್ಕಾರದ ಮೇಲೆ ವಿಶ್ವಾಸವಿಟ್ಟಿದೆ. ಈ ಫೋಟೋ ಹಂಚಿಕೊಳ್ಳುವ ಮೂಲಕ ಕಾಂಗ್ರೆಸ್ ಸ್ವಯಂ ಮೋದಿ ಸರ್ಕಾರದ ಕಾರ್ಯವೈಖರಿಯನ್ನು ಮೆಚ್ಚಿಕೊಂಡಿದೆ. ಜನರು ಮೋದಿ ಸರ್ಕಾರದ ಮೇಲೆ ವಿಶ್ವಾಸವಿಟ್ಟಿರುವುದನ್ನು ಕಾಂಗ್ರೆಸ್ ಖಚಿತಪಡಿಸಿದೆ ಎಂದು ಟ್ವೀಟ್ ಮಾಡಿದ್ದಾರೆ. ಬಿಜೆಪಿ ಟೀಕಿಸಲು ಹೋಗಿ ಕಾಂಗ್ರೆಸ್ ಸೆಲ್ಫ್ ಗೋಲ್ ಹೊಡೆದಿದೆ ಎಂದು ಮತ್ತೆ ಕೆಲವರು ಟ್ವೀಟ್ ಮಾಡಿದ್ದಾರೆ.
ಕೇಂದ್ರ ಸರ್ಕಾರ ಮಣಿಪುರ ವಿಷಯವನ್ನು ಅತ್ಯಂತ ಸೂಕ್ಷ್ಮವಾಗಿ ನಿರ್ವಹಣೆ ಮಾಡುತ್ತಿದೆ. ರಾಜಕೀಯ ಬೆರೆಸೆದ ಪರಿಸ್ಥಿತಿ ನಿಭಾಯಿಸುತ್ತಿದೆ. ಹೀಗಾಗಿ ಹೊರಗಡೆ ಯಾವುದೇ ಪ್ರತಿಭಟನೆ ಇಲ್ಲ ಎಂದು ಆರ್‌ಕೆ ಟ್ವೀಟ್ ಮಾಡಿದ್ದಾರೆ. ಇನ್ನು ಬ್ರಹ್ಮಾಚಾರಿ ಅನ್ನೋ ಟ್ವಿಟರ್ ಖಾತೆಯಲ್ಲಿ, 2012ರಲ್ಲಿ ಸೈಲೆಂಟ್ ಹಾಗೂ ಕೈಗೊಂಬೆ ಪ್ರಧಾನ ಮಂತ್ರಿ ಮೇಲೆ ಜನರಿಗೆ ಭರವಸೆ ಇರಲಿಲ್ಲ. ಆದರೆ ಇದೀಗ ಪ್ರಧಾನಿ ಮೋದಿ ಮೇಲೆ ಜನರಿಗೆ ನಂಬಿಕೆ ಇದೆ. ಸೂಕ್ತ ರೀತಿಯಲ್ಲಿ ಮಣಿಪುರ ಗಲಭೆಯನ್ನು ಪರಿಹರಿಸುವ ಕಾರಣಕ್ಕೆ ಜನರು ಪ್ರತಿಭಟನೆ ಮಾಡುತ್ತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಮಣಿಪುರ ಮಹಿಳೆಯ ಬೆತ್ತಲೆ ಪರೇಡ್: ಪರೇಡ್‌ಗೆ ಆರ್‌ಎಸ್ಎಸ್ ನಂಟು ಎಂದವರ ವಿರುದ್ಧ ಕೇಸ್
ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಸುದೀರ್ಘ ಉತ್ತರ ನೀಡಬೇಕು ಎಂದು ಒತ್ತಾಯಿಸಿ ವಿಪಕ್ಷಗಳು ನಡೆಸುತ್ತಿರುವ ಹೋರಾಟ ಸೋಮವಾರವೂ ಮುಂದುವರಿದಿದೆ. ಹೀಗಾಗಿ ಇಡೀ ದಿನ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಕಲಾಪ ಸಾಧ್ಯವಾಗಲಿಲ್ಲ.