ಮಣಿಪುರ ಮಹಿಳೆಯ ಬೆತ್ತಲೆ ಪರೇಡ್‌: ಪರೇಡ್‌ಗೆ ಆರ್‌ಎಸ್ಎಸ್ ನಂಟು ಎಂದವರ ವಿರುದ್ಧ ಕೇಸ್

ಮಣಿಪುರದಲ್ಲಿ ನಡೆದಿದ್ದ ಮಹಿಳೆಯರ ನಗ್ನ ಮೆರವಣಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ 14 ಮಂದಿಯ ಚಹರೆಯನ್ನು ಪೊಲೀಸರು ವಿಡಿಯೋದಲ್ಲಿ ಪತ್ತೆ ಹಚ್ಚಿದ್ದಾರೆ. ಶೀಘ್ರದಲ್ಲೇ ಇವರ ಬಂಧನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

Manipur violence womans naked parade 14 culprits faces recognised Case against those who said RSS was involved in the nude parade akb

ಇಂಫಾಲ್‌: ಮಣಿಪುರದಲ್ಲಿ ನಡೆದಿದ್ದ ಮಹಿಳೆಯರ ನಗ್ನ ಮೆರವಣಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ 14 ಮಂದಿಯ ಚಹರೆಯನ್ನು ಪೊಲೀಸರು ವಿಡಿಯೋದಲ್ಲಿ ಪತ್ತೆ ಹಚ್ಚಿದ್ದಾರೆ. ಶೀಘ್ರದಲ್ಲೇ ಇವರ ಬಂಧನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಪ್ರಕರಣ ಸಂಬಂಧ ಈವರೆಗೆ 6 ಮಂದಿಯನ್ನು ಬಂಧಿಸಲಾಗಿದೆ.  ಈ ನಡುವೆ ಕಳೆದ 2 ತಿಂಗಳಿನಿಂದ ನಡೆಯುತ್ತಿರುವ ಹಿಂಸಾಚಾರದ ಹಿನ್ನೆಲೆಯಲ್ಲಿ ಈವರೆಗೆ 13000ಕ್ಕೂ ಹೆಚ್ಚು ಜನರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆಯಲಾಗಿದೆ. ಮೈತೇಯಿ ಮತ್ತು ಕುಕಿ ಸಮುದಾಯದ ಜನರು ನಿರ್ಮಿಸಿದ್ದ 290 ಬಂಕರ್‌ಗಳನ್ನು ನಾಶಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪರೇಡ್‌ಗೆ ಆರ್‌ಎಸ್ಎಸ್ ನಂಟು ಎಂದವರ ವಿರುದ್ಧ ಕೇಸ್
ಮಣಿಪುರದಲ್ಲಿ ನಡೆದ ನಗ್ನ ಮೆರವಣಿಗೆಯಲ್ಲಿ ಆರ್‌ಎಸ್‌ಎಸ್‌ ನಾಯಕ (RSS Leader) ಮತ್ತು ಆತನ ಪುತ್ರ ನೇರವಾಗಿ ಭಾಗಿಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದ ವ್ಯಕ್ತಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಟ್ವೀಟರ್‌, ಫೇಸ್‌ಬುಕ್‌ ಸೇರಿದಂತೆ ಹಲವು ಜಾಲತಾಣಗಳಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದ ಹಲವರು ಇದರಲ್ಲಿ ಆರ್‌ಎಸ್‌ಎಸ್‌ ನಾಯಕರ ಕೈವಾಡವಿದೆ ಎಂದು ಆರೋಪಿಸಿದ್ದರು. ಇವರ ವಿರುದ್ಧ ಸುಳ್ಳುಸುದ್ದಿ ಹರಡುತ್ತಿದ್ದಾರೆ ಎಂಬ ಕಾರಣಕ್ಕೆ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಣಿಪುರ ಹಿಂಸೆಗೆ ಮತ್ತೆ ಕಲಾಪ ಭಂಗ: ಚರ್ಚೆಗೆ ಸಿದ್ಧ ಎಂಬ ಶಾ ಮನವಿಗೂ ಓಗೊಡದ ವಿಪಕ್ಷ

ಕೇಂದ್ರ ಸಚಿವರ ಮನೆ ಮೇಲೆ ಮತ್ತೆ ದಾಳಿ
ಮಣಿಪುರದಲ್ಲಿ ನಡೆದ ನಗ್ನ ಪ್ರತಿಭಟನೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರು ವಿದೇಶಾಂಗ ಖಾತೆ ರಾಜ್ಯ ಸಚಿವ ಆರ್‌.ಕೆ.ರಂಜನ್‌ (R.K. Ranjan) ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಹಿಂಸಾಚಾರ ಆರಂಭವಾದಾಗಿನಿಂದ 2ನೇ ಬಾರಿ ಸಚಿವರ ಮನೆ ಮೇಲೆ ದಾಳಿಯಾಗಿದೆ. ಮಣಿಪುರದಲ್ಲಿ ಉಂಟಾಗಿರುವ ಸಮುದಾಯಗಳ ನಡುವಿನ ಗಲಭೆ ಕುರಿತಾಗಿ ಸಂಸತ್ತಿನಲ್ಲಿ ಮಾತನಾಡಬೇಕು ಎಂದು ಆಗ್ರಹಿಸಿ ಸಚಿವರ ಮನೆ ಮೇಲೆ ಪ್ರತಿಭಟನಾನಿರತ ಮಹಿಳೆಯರು ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೇ ಇಂಟರ್ನೆಟ್‌ ಸಂಪರ್ಕ ಮತ್ತೆ ಬೇಕು ಎಂದು ಆಗ್ರಹಿಸಿ ಪೋಸ್ಟರ್‌ಗಳನ್ನು ಪ್ರದರ್ಶಿಸಿದ್ದಾರೆ. ಈ ದಾಳಿ ನಡೆದ ಸಮಯದಲ್ಲಿ ಮನೆಯಲ್ಲಿ ಯಾರು ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ನಗ್ನ ಮೆರವಣಿಗೆಯನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನಾ ರಾರ‍ಯಲಿ ನಡೆಸಿದ್ದಾರೆ. ಇದಕ್ಕೂ ಮೊದಲು ಜೂ.15ರಂದು ಉದ್ರಿಕ್ತರು ಸಚಿವರ ಮನೆ ಮೇಲೆ ದಾಳಿ ನಡೆಸಿದ್ದು, ಬೆಂಕಿ ಹಚ್ಚಲು ಪ್ರಯತ್ನಿಸಿದ್ದರು.

Manipur: ಒಂದಲ್ಲ.. ಎರಡಲ್ಲ.. 7 ಅತ್ಯಾಚಾರ ನಡೆದಿದೆ: ಬಗೆದಷ್ಟೂ ಬಯಲಿಗೆ ಬರ್ತಿದೆ ರೇಪ್‌ ಕೇಸ್‌!

Latest Videos
Follow Us:
Download App:
  • android
  • ios