ಐದು ಗ್ಯಾರಂಟಿಗಳು ಜನರಿಗೆ ನೀಡಲು ಕಾಂಗ್ರೆಸ್‌ಗೆ ಮನಸ್ಸಿಲ್ಲ. ಹೀಗಾಗಿ ಒಂದಿಲ್ಲ ಒಂದು ಷರತ್ತು ವಿಧಿ​ಸಿ ಕಾರಣ ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ನುಡಿದರು.

ಬಸವಕಲ್ಯಾಣ (ಜೂ.23) :  ಐದು ಗ್ಯಾರಂಟಿಗಳು ಜನರಿಗೆ ನೀಡಲು ಕಾಂಗ್ರೆಸ್‌ಗೆ ಮನಸ್ಸಿಲ್ಲ. ಹೀಗಾಗಿ ಒಂದಿಲ್ಲ ಒಂದು ಷರತ್ತು ವಿಧಿ​ಸಿ ಕಾರಣ ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ನುಡಿದರು.

ಅವರು ನಗರದ ವರ್ಷಾ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಂಡ ಬಿಜೆಪಿ ನಗರ ಮಂಡಲ ಮತ್ತು ಗ್ರಾಮೀಣ ಮಂಡಲದ ಬಿಜೆಪಿ ಕಾರ್ಯಕಾರಣಿ ಸಭೆ ಉದ್ಘಾಟಿಸಿ ಮಾತನಾಡಿ, ಸಾರ್ವತ್ರಿಕ ವಿಧಾನ ಸಭೆಯ ಚುನಾವಣೆಯ ಪೂರ್ವದಲ್ಲಿ ರಾಜ್ಯದ ಜನರಿಗೆ ಕಾಂಗ್ರೆಸ್‌ ಪಕ್ಷದವರು ಸುಳ್ಳು ಹೇಳಿ ಐದು ಗ್ಯಾರಂಟಿ ಯೋಜನೆಗಳ ಭರವಸೆ ನೀಡಿ ಅ​ಧಿಕಾರಕ್ಕೆ ಬಂದಿದ್ದಾರೆ. ಆ ಯೋಜನೆಗಳನ್ನು ರಾಜ್ಯದ ಜನರಿಗೆ ಈಡೇರಿಸಲಾಗದೇ ಇಂದು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಿರುವ ಕಾಂಗ್ರೆಸ್‌ಗೆ ನಾಚಿಕೆಯಾಗಬೇಕು ಎಂದರು.

ಸಿದ್ದರಾಮಯ್ಯ ಸಿಎಂ ಎಂದು ಗುರು​ತಿಸಿ, ‘ಮೋದಿ’ಗೆ ರಾಷ್ಟ್ರ​ಪತಿ ಎಂದ ಮಕ್ಕ​ಳು!

ಶಾಸಕ ಶರಣು ಸಲಗರ, ಪಕ್ಷದ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ, ವಿಭಾಗೀಯ ಸಂಘಟನಾ ಸಹ ಪ್ರಭಾರಿ ಈಶ್ವರ ಸಿಂಗ್‌ ಠಾಕೂರ, ವಿಭಾಗೀಯ ಸಹ ಕಾರ್ಯದರ್ಶಿ ಸೂರ್ಯಕಾಂತ ಧೋನಿ ಮಾತನಾಡಿದರು.

ಮಹೇಶ್ವರ ಸ್ವಾಮಿ, ದೀಪಕ ಗಾಯಕವಾಡ, ರಾಜಕುಮಾರ ಸಿರಗಾಪೂರ, ಮೇಘರಾಜ ನಾಗರಾಳೆ, ಶಂಕರ ನಾಗದೆ, ಜಗನ್ನಾಥ ಚಿಲ್ಲಾಬಟ್ಟೆ, ಸಂಜು ಸುಗರೆ, ಸೂರ್ಯಕಾಂತ ಚಿಲ್ಲಾಬಟ್ಟೆ, ಲುಂಬಿನಿ ಗೌತಮ, ಶೋಭಾ ತೆಲಂಗ, ಉಲ್ಕಾವತಿ ಬಿರಾದಾರ, ಜ್ಞಾನೇಶ್ವರ ಪಾಟೀಲ, ಕಮಲಾಕರ ಪಾಟೀಲ್‌, ಪಕ್ಷದ ತಾಲೂಕು ಅಧ್ಯಕ್ಷ ಅಶೋಕ ವಕಾರೆ, ನಗರ ಅಧ್ಯಕ್ಷ ಅರವಿಂದ ಮುತ್ತೆ, ಪ್ರಧಾನ ಕಾರ್ಯದರ್ಶಿ ಸಿದ್ದು ಬಿರಾದಾರ, ಬಸವರಾಜ ಸ್ವಾಮಿ ಬಟಗೇರಾ ಉಪಸ್ಥಿತರಿದ್ದರು.

ಪಿಎಂ ಫಸಲ್‌ ಭಿಮಾ ಪರಿ​ಹಾರ ತನಿ​ಖೆ​ಗೊ​ಳ​ಪ​ಡಿ​ಸಿ: ಖೂಬಾ ಸವಾಲು

ಪ್ರಧಾ​ನ​ಮಂತ್ರಿ ಫಸಲ್‌ ಭಿಮಾ ಯೋಜ​ನೆ​(Prime Minister Fasal Bhima Yojana)ಯಡಿ ರೈತ​ರಿಗೆ ಪರಿಹಾರ ದೊರ​ಕು​ತ್ತಿ​ರು​ವುದನ್ನು ಸಹಿ​ಸ​ಲಾ​ಗದೇ ರೈತ​ರಿ​ಗಿಂತ ಕಂಪ​ನಿ​ಗಳೇ ಹೆಚ್ಚು ಲಾಭ ಪಡೆ​ದಿವೆ ಎಂದು ಆರೋ​ಪಿ​ಸು​ತ್ತಿರು​ವ ಕಾಂಗ್ರೆಸ್‌ನವರು ತಮ್ಮದೇ ಸರ್ಕಾ​ರದ ಈ ಅವ​ಧಿ​ಯಲ್ಲಿ ತನಿಖೆ ಮಾಡಿ​ಸಲಿ, ನನ್ನದೂ ಬೆಂಬ​ಲ​ವಿದೆ ಎಂದು ಕೇಂದ್ರ ಸಚಿವ ಭಗ​ವಂತ ಖೂಬಾ ಸವಾ​ಲೆ​ಸೆ​ದರು.

ಅವರು ಗುರುವಾರ ನಗರದ ಬೆಲ್ದಾಳೆ ಫಂಕ್ಷನ್‌ ಹಾಲ್‌ನಲ್ಲಿ ಜಿಲ್ಲಾ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ರೈತರಿಗೆ ಸಿಗುವ ಫಸಲ್‌ ಭಿಮಾ ಯೋಜನೆಯ ಸೌಲ​ಭ್ಯದಲ್ಲಿ ಕುಂಠಿತ ಆಗಬಾರದು, ಒಂದು ವೇಳೆ ಕುಂಠಿ​ತ​ವಾ​ದಲ್ಲಿ ನಾವು ಸುಮ್ಮ​ನಿ​ರಲ್ಲ ಎಂದರು.

ಪ್ರಧಾನಮಂತ್ರಿ ಫಸಲ್‌ ಭಿಮಾ ಯೋಜನೆಯಲ್ಲಿ ಕಳೆದ 8 ವರ್ಷ​ಗ​ಳಿಂದ ಇಡೀ ದೇಶ​ದ​ಲ್ಲಿ ನೋಂದಣಿ ಹಾಗೂ ಪರಿ​ಹಾರ ಒದಗಿ​ಸು​ವ​ಲ್ಲಿ​ಯೂ ಬೀದರ್‌ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಸುಮಾರು 500 ಕೋಟಿ ರು. ಗಳ ವಿಮಾ ಪರಿ​ಹಾರ ನೇರ​ವಾಗಿ ರೈತರ ಖಾತೆಗೆ ಜಮೆ ಆಗಿ​ದೆ ಎಂದ​ರು.

ಕಳೆದ 9 ವರ್ಷಗಳ ಅವಧಿಯಲ್ಲಿ ವಿಶ್ವದಲ್ಲಿಯೇ ಅನೇಕ ಗಟ್ಟಿನಿರ್ಧಾರಗಳನ್ನು ತೆಗೆದುಕೊಂಡಿದ್ದ ನಾಯಕ ಮೋದಿ ಅವರಾಗಿದ್ದಾರೆ. ಹೀಗಾಗಿ ನಮ್ಮ ಜಿಡಿಪಿ 7.2ರಷ್ಟುಆಗಿದೆ. ದೇಶದ ಸುಮಾರು 81 ಕೋಟಿ ಜನರಿಗೆ ಸಾಮಾಜಿಕ ಸುರಕ್ಷತೆ ಸೇರಿದಂತೆ ಅನೇಕ ಯೋಜನೆಗಳ ಲಾಭ ಆಗಿದೆ ಎಂದರು.

ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರದ 60 ವರ್ಷದಲ್ಲಿ ಆಗದ ಅಭಿವೃದ್ಧಿ ಮೋದಿ ಅವರ 9 ವರ್ಷಗಳಲ್ಲಿ ದುಪ್ಪಟ್ಟು ಆಗಿದೆ. ಉದಾಹರಣೆಗಾಗಿಯೇ ಬೀದರ್‌ ಜಿಲ್ಲೆಯಲ್ಲಿಯೇ 1 ಹೆದ್ದಾರಿ ಇತ್ತು, ಇದೀ​ಗ 12 ಆಗಿವೆ. ಕೆಲವೇ ರೈಲುಗಳಿದ್ದವು, ಈಗ 13 ರೈಲುಗಳಾಗಿವೆ ಎಂದು ತಿಳಿ​ಸಿ​ದ​ರು.

ಗ್ಯಾರಂಟಿ ಕುರಿತು ಜನರು ಕಾಂಗ್ರೆಸ್‌ನಿಂದ ಸಂಪೂರ್ಣ ವಿಶ್ವಾಸ ಕಳೆದುಕೊಂಡಿದ್ದಾರೆ. ಕಾಂಗ್ರೆಸ್‌ ಪಕ್ಷ ಚುನಾವಣೆಯಲ್ಲಿ ಹೇಳಿದ್ದೆ ಒಂದು ಈಗ ಮಾಡುತ್ತಿರುವುದೇ ಮತ್ತೊಂದಾಗಿದೆ. ಮುಂಬರುವ ಜು. 7ರಂದು ಮುಖ್ಯಮಂತ್ರಿಗಳು ಬಜೆಟ್‌ ಮಂಡನೆ ಮಾಡಲಿದ್ದಾರೆ. ನಂತರ ರಾಜ್ಯದ ಜನರಿಗೆ ಯಾವ ಯಾವ ವಸ್ತುಗಳು ದುಬಾ​ರಿ ಆಗಲಿವೆ ಎಂಬುವುದು ತಿಳಿಯುತ್ತದೆ ಎಂದರು.

ಕಾಂಗ್ರೆಸ್‌ ಸರ್ಕಾರ ಒಂದು ಕೈಯಿಂದ ನೀಡಿ ಎರಡು ಕೈಯಿಂದ ಕಿತ್ತುಕೊಳ್ಳುತ್ತಿದೆ:

ಕಾಂಗ್ರೆಸ್‌ ಸರ್ಕಾರ ಒಂದು ಕೈಯಿಂದ ನೀಡಿ ಎರಡು ಕೈಯಿಂದ ಕಿತ್ತುಕೊಳ್ಳುತ್ತಿದೆ. ವಿದ್ಯುತ್‌ ಬಿಲ್‌ ಹೆಚ್ಚಿ​ಸಿದೆ, ಪುರು​ಷ​ರಿಗೆ ಬಸ್‌ ದರ ಹೆಚ್ಚಿ​ಸು​ತ್ತಾರೆ, ಆಸ್ತಿ ನೋಂದಣಿ ಶುಲ್ಕ​ವ​ನ್ನು ನಾಲ್ಕು ಪಟ್ಟು ಹೆಚ್ಚಿ​ಸು​ತ್ತಿದ್ದಾರೆ, ​ಮಣ್ಣು ಕಲ್ಲು, ಮರ​ಳಿನ ದರವೂ ಹೆಚ್ಚಾ​ಗುವ ಸಾಧ್ಯ​ತೆ​ಗಳು ದಟ್ಟ​ವಾ​ಗಿ​ವೆ. ಇದು ಬಲ​ಗೈ​ಯಿಂದ ಕೊಟ್ಟು, ಎಡ​ಗೈ​ಯಿಂದ ಕಸಿ​ದು​ಕೊ​ಳ್ಳುವ ನಾಚಿ​ಕೆ​ಗೇ​ಡಿನ ಸರ್ಕಾರವಾ​ಗಿದೆ. ಅದಾಗ್ಯೂ ಕಾಂಗ್ರೆಸ್‌ ನೀಡಿದ್ದ ಗ್ಯಾರಂಟಿ ತಲುಪಿಸು​ವಂತೆ ಮಾಡು​ವಲ್ಲಿ ನಾವು ಜನರ ಜೊತೆ ನಿಲ್ಲೋಣ ಎಂದು ಕರೆ ನೀಡಿ​ದ​ರು.

ಇಂತಹ ಸಂದರ್ಭದಲ್ಲಿ ಕಾಂಗ್ರೆಸ್‌ ಚುನಾವಣೆ ಎದುರಿಸಿದರೆ ಕೇವಲ 70 ಸೀಟುಗಳು ಕೂಡ ಬರೊಲ್ಲ. ರಾಜ್ಯದಲ್ಲಿ ಭಯ ಹಾಗೂ ದ್ವೇಷದ ವಾತಾವರಣ ಹುಟ್ಟಿಸಿ ಕಾಂಗ್ರೆಸ್ಸಿಗರು ರಾಜಕೀಯ ಮಾಡುತ್ತಿದ್ದಾರೆ ಎಂದು ಭಗ​ವಂತ ಖೂಬಾ ಆರೋ​ಪಿ​ಸಿ​ದ​ರು.

ಡವರಿಗೆ ಸಿದ್ದರಾಮಯ್ಯ 15 ಕೆಜಿ ಅಕ್ಕಿ ವಿತರಿಸಲಿ: ಕೇಂದ್ರ ಸಚಿವ ಭಗವಂತ ಖೂಬಾ

ಇದೇ ಸಂದರ್ಭದಲ್ಲಿ ಸಂಸದ ಭಗವಂತ ಖೂಬಾ ಅವರ 9 ವರ್ಷದ ಸಾಧನೆಯ ಪುಸ್ತಕವನ್ನು ಬಿಜೆಪಿ ರಾಜ್ಯಾ​ಧ್ಯ​ಕ್ಷ ನಳೀನಕುಮಾರ ಕಟೀಲ್‌ ಬಿಡುಗಡೆ ಮಾಡಿದರು. ಕೊಪ್ಪಳ ಸಂಸದ ಸಂಗಣ್ಣ ಕರಡ್ಡಿ, ಎಂಎಲ್‌ಸಿ ರಘುನಾಥರಾವ್‌ ಮಲ್ಕಾಪೂರೆ ಮಾತನಾಡಿದರು.