Asianet Suvarna News Asianet Suvarna News

Free Hindu Temples: ಕಾಂಗ್ರೆಸ್‌ನವರು ಧಮ್‌ ಇದ್ದರೆ ಹಿಂದು ಮತಗಳು ಬೇಡವೆಂದು ಹೇಳಲಿ: ಕಟೀಲ್‌!

*ದೇವಸ್ಥಾನ ಸ್ವಾಯುತ್ತತೆ ವಿಚಾರ ಕಾಂಗ್ರೆಸ್‌ ವಿರೋಧಿಸುತ್ತಿದೆ: ನಳಿನ್‌ಕುಮಾರ್‌ ಕಟೀಲ್‌
*ಹಿಂದು ಮತಗಳು ಬೇಡವಾದರೆ, ಕಾಂಗ್ರೆಸ್‌ನವರಿಗೆ ಧಮ್‌ ಇದ್ದರೆ ಹೇಳಬೇಕು ಎಂದ ಬಿಜೆಪಿ ರಾಜ್ಯಾಧ್ಯಕ್ಷ

Congress Does Not Dare to tell that they Dont want Hindu Votes Says Nalin Kumar Kateel mnj
Author
Bengaluru, First Published Jan 6, 2022, 5:05 AM IST

ಶಿವಮೊಗ್ಗ (ಜ. 6): ದೇವಸ್ಥಾನಗಳಿಗೆ ಸ್ವಾಯತ್ತತೆ ಕೊಡಬೇಕು ಎಂಬ ಉದ್ದೇಶದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavarj Bommai) ಅವರು ಒಂದೊಳ್ಳೆಯ ನಿರ್ಧಾರ ಕೈಗೊಂಡಿದ್ದಾರೆ. ಆದರೆ ಹಿಂದು ವಿರೋಧಿ ಕಾಂಗ್ರೆಸ್‌ (Congress) ಸರ್ಕಾರದ ನಿರ್ಧಾರವನ್ನು ವಿರೋಧಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ (Nalin Kumar Kateel) ಹೇಳಿದರು.ಶಿವಮೊಗ್ಗದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಯಾವಾಗಲೂ ಹಿಂದು ವಿರೋಧಿ (Anti Hindu) ನೀತಿ ಅನುಸರಿಸುತ್ತದೆ. ಟಿಪ್ಪು ಜಯಂತಿ (Tippu Jayanti) ಆಚರಣೆ ಮಾಡುವಂತೆ ಯಾರೂ ಕೇಳಿರಲಿಲ್ಲ. ಆದರೆ, ಈ ಹಿಂದೆ ಸಿದ್ದರಾಮಯ್ಯ (Siddaramaiah) ಮುಖ್ಯಮಂತ್ರಿ ಆಗಿದ್ದಾಗ ಟಿಪ್ಪು ಜಯಂತಿ ಆಚರಣೆ ಮಾಡಿದರು. ಧರ್ಮ ಧರ್ಮ, ಜಾತಿ ಜಾತಿಗಳನ್ನು ಒಡೆಯುವ ಕೆಲಸ ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದು ಮತಗಳು ಬೇಡವಾದರೆ, ಕಾಂಗ್ರೆಸ್‌ನವರಿಗೆ ಧಮ್‌ ಇದ್ದರೆ ಹೇಳಬೇಕು. ಈ ರೀತಿ ಧರ್ಮ ಧರ್ಮ, ಜಾತಿ ಜಾತಿಗಳನ್ನು ಒಡೆಯುವ ಕೆಲಸಕ್ಕೆ ಯಾರು ಮುಂದಾಗಬಾರದು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕೆಲಸ, ಸಾಧನೆಯನ್ನು ಜನ ಒಪ್ಪಿದ್ದಾರೆ. ಇದರಿಂದಾಗಿ ಶಾಶ್ವತವಾಗಿ ವಿರೋಧ ಪಕ್ಷದಲ್ಲಿ ಇರಬೇಕು ಎಂಬ ಭಯ ಕಾಂಗ್ರೆಸ್‌ನ್ನು ಕಾಡುತ್ತಿದೆ. ಹೀಗಾಗಿ ಸರ್ಕಾರವನ್ನು ವಿನಃಕಾರಣ ಟೀಕಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್‌ನ ಅಂತಿಮ ಯಾತ್ರೆ:

ನಿಮ್ಮದೇ ಸರ್ಕಾರ ಇದ್ದಾಗ ಏಕೆ ಮೇಕೆದಾಟು ಯೋಜನೆ (Mekedatu) ಮಾಡಲಿಲ್ಲ? ಸುಳ್ಳು ಹೇಳಿ ಮೇಕೆದಾಟು ಪಾದಯಾತ್ರೆ ಇಟ್ಟುಕೊಂಡು ಹೋಗಿದ್ದಾರೆ. ಇದು ಕಾಂಗ್ರೆಸ್‌ನ ಅಂತಿಮ ಯಾತ್ರೆ ಆಗಲಿದೆ. ಸಂವಿಧಾನದ ಮೇಲೆ ಕಾಂಗ್ರೆಸ್‌ ಪಕ್ಷಕ್ಕೆ ನಂಬಿಕೆ ಇಲ್ಲ. ಸರ್ಕಾರ ಜನರ ಪ್ರಾಣ ರಕ್ಷಣೆ ಮಾಡುವ ಉದ್ದೇಶದಿಂದ ಕಫ್ರ್ಯೂ ಜಾರಿಗೊಳಿಸಿದೆ. ತಜ್ಞರ ವರದಿ ಆಧಾರದ ಮೇಲೆ ನಿಯಮ ಜಾರಿಗೊಳಿಸಿದೆ.

ಇದನ್ನೂ ಓದಿ: MLC Election: ಕಟೀಲ್‌ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಸಲೀಂ ಅಹ್ಮದ್‌

ತಜ್ಞರ ವರದಿ ಆಧಾರದ ಮೇಲೆ ಸರ್ಕಾರ ಕಠಿಣ ನಿಲುವು ತೆಗೆದುಕೊಂಡಿದೆ. ಯಾರಿಗೂ ತೊಂದರೆ ಇಲ್ಲದಂತೆ ನಿಯಮ ಜಾರಿಗೊಳಿಸಲಾಗುತ್ತದೆ ಎಂದರು. ಸಚಿವ ಸಂಪುಟ ಪುನರಚನೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ಬಗ್ಗೆ ಮುಖ್ಯಮಂತ್ರಿ ಅವರು ನಿರ್ಧಾರ ಕೈಗೊಳ್ಳುತ್ತಾರೆ. ಇದು ಮುಖ್ಯಮಂತ್ರಿ ಅವರ ವಿವೇಚನೆಗೆ ಬಿಟ್ಟವಿಚಾರ ಎಂದು ಹೇಳಿದರು.

ಗುಂಡಿನಿಂದ ಬಾಂಬ್‌ಗೆ ಬಡ್ತಿ ಕಾಂಗ್ರೆಸ್‌ ಸಾಧನೆ: ಕಟೀಲ್‌

ದೇಶವನ್ನು 60 ವರ್ಷ ಆಳಿದ ಕಾಂಗ್ರೆಸ್‌(Congress) ಪಕ್ಷದ ನಾಲ್ಕು ಕೊಡುಗೆಗಳು ಎಂದರೆ ಭ್ರಷ್ಟಾಚಾರ, ಬಡತನ, ಭಯೋತ್ಪಾದನೆ, ನಿರುದ್ಯೋಗ ಸಮಸ್ಯೆಗಳು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್‌(Nalin Kumar Kateel)ಆರೋಪಿಸಿದ್ದಾರೆ. ಬಾಗಲಕೋಟೆಯ(Bagalkot) ವಿದ್ಯಾಗಿರಿಯಲ್ಲಿರುವ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ರಾಜ್ಯ ಬಿಜೆಪಿ(BJP) ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, 60 ವರ್ಷಗಳ ಸುದೀರ್ಘ ಆಡಳಿತದ ಅವ​ಧಿಯಲ್ಲಿ ಕಾಂಗ್ರೆಸ್‌ ಪಕ್ಷದ ಕೊಡುಗೆ ಎಂದರೆ ಇಂತಹ ನಾಲ್ಕು ಕೊಡುಗೆಗಳಾಗಿವೆ ಎಂದರು.

ಇದನ್ನೂ ಓದಿFree Hindu Temple: ಮುಸ್ಲಿಂ ಅಥವಾ ಕ್ರಿಶ್ಚಿಯನ್ ಧರ್ಮಕ್ಕೆ ಡಿಕೆಶಿ ಮತಾಂತರ ಆಗ್ಲಿ!

ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಹೆಚ್ಚು ಅ​ಧಿಕಾರ ನಡೆಸಿರುವ ಕಾಂಗ್ರೆಸ್‌ ಅ​ಧಿಕಾರದಲ್ಲಿದ್ದಾಗ ಭ್ರಷ್ಟಾಚಾರ(Corruption) ಹಾಗೂ ಭಯೋತ್ಪಾದನೆಯನ್ನು(Terrorism) ದೇಶದಲ್ಲಿ(India) ತಂದಿತು. ಜೊತೆಗೆ ಬಡತನ(Poverty) ಹಾಗೂ ನಿರುದ್ಯೋಗ ಸೇರಿಕೊಂಡಿತು. ಇಂತಹ ಕೊಡುಗೆ ನೀಡಿದ ಕಾಂಗ್ರೆಸ್‌ ಪಕ್ಷವನ್ನು ಜನತೆ ಹೇಗೆ ಒಪ್ಪಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದರು.ನೆಹರೂ ಕಾಲದಲ್ಲಿ ಒಂದು ಗುಂಡಿನಿಂದ ಗೋಡ್ಸೆಯನ್ನು ಕೊಲ್ಲಲಾಯಿತು. 17 ಗುಂಡಿನಿಂದ ಇಂದಿರಾ ಗಾಂಧಿ(Indira Gandhi)​ಯವರನ್ನೇ ಕೊಂದರು, ರಾಜೀವ್‌ ಗಾಂಧಿ(Rajiv Gandhi) ​ಕಾಲದಲ್ಲಿ ಬಾಂಬ್‌ ಸ್ಫೋಟ ಆಯಿತು. ಹೀಗಾಗಿ ಒಂದು ಗುಂಡಿನಿಂದ 17 ಗುಂಡಿಗೆ ಪ್ರಮೋಷನ್‌ ಆಗಿ 17 ಗುಂಡಿನಿಂದ ಬಾಂಬ್‌ಗೆ ಪ್ರಮೋಷನ್‌ ಆಗಿದೆ. ಇದು ಈ ಹಿಂದಿನ ಕಾಂಗ್ರೆಸ್‌ ಪಕ್ಷದ ಆಡಳಿತವಾಗಿತ್ತು ಎಂದು ಲೇವಡಿ ಮಾಡಿದರು.

Follow Us:
Download App:
  • android
  • ios