ಬೆಂಗಳೂರು, (ಜ.17): ಆಪರೇಷನ್​ ಕಮಲದ ವದಂತಿ ಬೆನ್ನಲ್ಲೇ ಕಾಂಗ್ರೆಸ್​-ಜೆಡಿಎಸ್​​ ನಾಯಕರ ಸಂಪರ್ಕಕ್ಕೆ ಸಿಗದೆ ದೂರ ಉಳಿದಿದ್ದ ಬಳ್ಳಾರಿ ಗ್ರಾಮಾಂತರ ಶಾಸಕ ಬಿ. ನಾಗೇಂದ್ರ ಕೊನೆಗೂ ಬೆಂಗಳೂರಿನಲ್ಲಿ ಪ್ರತ್ಯಕ್ಷವಾಗಿದ್ದಾರೆ. 

ಅಕ್ರಮ ಗಣಿಗಾರಿಕೆ ಕೇಸ್​ ಸಂಬಂಧ ಕೋರ್ಟ್​​ಗೆ ಹಾಜರಾಗಲು ನಾಗೇಂದ್ರ ಬೆಂಗಳೂರಿಗೆ ಆಗಮಿಸಿದ್ದಾರೆ. ರಮೇಶ್ ಜಾರಕಿಹೊಳಿ ಜೊತೆ ಮುಂಬೈನಲ್ಲಿ ಉಳಿದುಕೊಂಡಿದ್ದ ನಾಗೇಂದ್ರ ಇದೀಗ ಬೆಂಗಳೂರಿಗೆ ಬಂದಿದ್ದಾರೆ. 

ಆಪರೇಷನ್ ಕಮಲ: ಇನ್ನೂ ಏನು ಮುಗಿದಿಲ್ಲ, ಪಿಕ್ಚರ್ ಅಭೀ ಬಾಕಿ ಹೈ..!

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನನ್ನ ಖಾಸಗಿ ಕೆಲಸದ ನಿಮಿತ್ತ ಮುಂಬೈಗೆ ತೆರಳಿದ್ದೆ. ನ್ಯಾಯಾಲಯದ ವಿಚಾರಣೆ ಹಿನ್ನಲೆಯಲ್ಲಿ ಆಗಮಿಸಿದ್ದೇನೆ.

 ನಾಳೆಯೂ ವಿಚಾರಣೆಗೆ ಹಾಜರಾಗುವ ಅವಶ್ಯತೆ ಇದೆ ಎಂದು ಹೇಳುವ ಮೂಲಕ ನಾಳಿನ (ಶುಕ್ರವಾರ) ಕಾಂಗ್ರೆಸ್ ಶಾಸಕಾಂಗ ಸಭೆಗೆ ಗೈರು ಹಾಜರಾಗುವ ಕುರಿತು ಸುಳಿವು ನೀಡಿದರು.

ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಬಗ್ಗೆ ನನಗೆ ಗೊತ್ತಿಲ್ಲ ಎನ್ನುವ ಮೂಲಕ ಆಪರೇಶನ್ ಕಮಲದ ಕುರಿತು ಯಾವುದೇ ಮಾಹಿತಿ ನೀಡಲು ನಿರಾಕರಿಸಿದರು.

"