ನವದೆಹಲಿ(ನ.19)  ಕಾಂಗ್ರೆಸ್ ನಾಯಕತ್ವದ ಬಗ್ಗೆ ಪ್ರಶ್ನೆ ಎತ್ತಿದ್ದ  ಹಿರಿಯ ನಾಯಕ ಕಪಿಲ್ ಸಿಬಲ್ ಕಡೆಯಿಂದ ಮತ್ತೊಂದು ವಿಚಾರ ಸ್ಫೋಟವಾಗಿದೆ. ರಾಷ್ಟ್ರೀಯ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಮತ್ತೆ  ಬಹಿರಂಗವಾಗಿದೆ.

ಬಹಿರಂಗವಾಗಿ ಯಾವುದೇ ಹೇಳಿಕೆ ನೀಡದಿದ್ದರೂ ಕಪಿಲ್ ಸಿಬಲ್ ತಮ್ಮ ಆಪ್ತರ ಬಳಿ ಅಸಮಾಧಾನ  ಹೊರಹಾಕಿದ್ದಾರೆ ಎನ್ನಲಾಗಿದೆ.

ಕಪಿಲ್ ಸಿಬಲ್  ಬಗ್ಗೆ ಮಾತನಾಡಿರುವ ಮುಖಂಡ ಅಧೀರ್ ಚೌಧರಿ,   ಬಿಹಾರ ಮತ್ತು ಮಧ್ಯ ಪ್ರದೇಶದ ಚುನಾವಣೆ ವೇಳೆ ಪ್ರಚಾರಕ್ಕೆ ತೆರಳಿದ್ದರೆ ಕಪಿಲ್ ತಾವು ಹೇಳಿದ್ದನ್ನು ಸತ್ಯ ಎಂದು ಸಾಬೀತು ಮಾಡುವ ಅವಕಾಶ ಇತ್ತು ಎಂದಿದ್ದಾರೆ.

ನಾಯಕತ್ವ ಬದಲಾವಣೆ ಕೂಗಿನ ವೇಳೆ ಗಾಂಧಿ ಕುಟುಂಬಕ್ಕೆ ಜೈ ಎಂದ ಕರ್ನಾಟಕದ ಕೈ ನಾಯಕರು

ಆದರೆ ಕಪಿಲ್ ಗೆ ಆಪ್ತರಾಗಿರುವ ನಾಯಕರು ಇದನ್ನು ಬೇರೆಯದೇ ರೀತಿ ವಿಶ್ಲೇಷಣೆ ಮಾಡಿದ್ದಾರೆ.  ಚೌಧರಿ ಹೇಳಿಕೆ ದುರದೃಷ್ಟಕರ, ಬಹುಷಃ  ಕ್ಯಾಂಪೇನ್ ಲಿಸ್ಟ್ ನಲ್ಲಿ ಕಪಿಲ್ ಸೇರಿದಂತೆ G-23 ನಾಯಕರ ಹೆಸರು ಇಲ್ಲದಿರುವುದು ಅವರಿಗೆ ಗೊತ್ತಿಲ್ಲವೆನೋ ಎಂದಿದ್ದಾರೆ.

ಕಾಂಗ್ರೆಸ್ ನಾಯಕತ್ವದ ಬದಲಾಗಬೇಕು ಎಂದು ಕೋರಿ ಪತ್ರ ಬರೆದಿದ್ದ ನಾಯಕರ ಹೆಸರು ಪ್ರಚಾರದ ಪಟ್ಟಿಯಲ್ಲಿ ಇರಲಿಲ್ಲ.  ಕಾಂಗ್ರೆಸ್ ನಲ್ಲಿ ಹಿರಿಯ ನಾಯಕರು ಮತ್ತು ಹೊಸ ನಾಯಕರ ನಡುವೆ ಕಿತ್ತಾಟ ನಡೆಯುತ್ತಿರುವುದು ರಹಸ್ಯವಾಗಿಯೇನೂ ಉಳಿದಿಲ್ಲ.   ಬಿಹಾರ  ವಿಧಾನಸಭೆ ಚುನಾವಣೆ ಮತ್ತು ಮಧ್ಯಪ್ರದೇಶದ  ಹಲವು ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಕಂಡಿತ್ತು.