ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ಜನರು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಕಿಡಿಕಾರಿದೆ.

ಬೆಂಗಳೂರು, (ಮೇ.03): ಚಾಮರಾಜನಗರದಲ್ಲಿ ತಡರಾತ್ರಿ ಆಕ್ಸಿಜನ್ ಕೊರತೆಯಾದ ಪರಿಣಾಮ 24 ರೋಗಿಗಳು ಸಾವನ್ನಪ್ಪಿದ್ದಾರೆ. ಆಕ್ಸಿಜನ್​ ಕೊರತೆಗೆ ಸರ್ಕಾರವೇ ಕಾರಣ ಎಂದು ಟೀಕಿಸಿರುವ ಕಾಂಗ್ರೆಸ್,​ ಆರೋಗ್ಯ ಇಲಾಖೆ ಸಚಿವ ಡಾ. ಕೆ. ಸುಧಾಕರ್ ವಿರುದ್ಧ ಕಿಡಿಕಾರಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಡಾ. ಸುಧಾಕರ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಸುಧಾಕರ್ ಅವರೇ, ಸಿ.ಡಿಗೆ ತಡೆಯಾಜ್ಞೆ ತರುವಲ್ಲಿ ತಾವು ತೋರಿದ ತರಾತುರಿಯನ್ನು ಆಕ್ಸಿಜನ್ ವಿಚಾರದಲ್ಲಿ ತೋರದಿದ್ದದ್ದು ಏಕೆ..? ಈ ಸಾವುಗಳ ಹೊಣೆ ನಿಮ್ಮದಲ್ಲದೆ ಇನ್ಯಾರದ್ದು ಎಂದು ಪ್ರಶ್ನಿಸಿದೆ. ಅಲ್ಲದೇ #ResignKillerSudhakar ಎಂದು ಹ್ಯಾಷ್​​ಟ್ಯಾಗ್ ಬಳಸಿ ಆಗ್ರಹಿಸಿದೆ.

'ಸಚಿವರು ಕೋರ್ಟ್ ಮೊರೆ ಹೋಗಿದ್ದಾರೆ ಅಂದ್ರೆ ಎಲ್ಲೋ ಒಂದ್ಕಡೆ ಅನುಮಾನ ಬಂದಿದೆ' 

Scroll to load tweet…

ಬಿಜೆಪಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರದ್ದು ಎನ್ನಲಾದ ಸಿ.ಡಿ ಬಿಡುಗಡೆಯಾದ ಬೆನ್ನಲ್ಲೇ ಡಾ. ಸುಧಾಕರ್ ಆದಿಯಾಗಿ ಹಲವು ಸಚಿವರು ಕೋರ್ಟ್​​ ಮೊರೆ ಹೋಗಿದ್ದರು. ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ಮಾನಹಾನಿಕರ ಸುದ್ದಿಗಳನ್ನ ಪ್ರಸಾರ ಮಾಡದಂತೆ ತಡೆಯಾಜ್ಞೆ ತಂದಿದ್ದರು.