ವಿಜಯಪುರ: ಬೋಗಸ್ ಮತದಿಂದ ಯತ್ನಾಳ್ ಗೆಲುವು, ತನಿಖೆಗೆ ಕಾಂಗ್ರೆಸ್ ಆಗ್ರಹ
ಬಿಜೆಪಿಯವರು ನಕಲಿ ಮತದಾನ ಮಾಡಿದ್ದಾಗಿ ಆರೋಪಿಸುತ್ತಿರುವ ಕಾಂಗ್ರೆಸ್ಸಿಗರೇ ನಕಲಿ ಮತದಾನ ಮಾಡಿದ ಬಗ್ಗೆ ಸಾಕ್ಷ್ಯಾಧಾರ ಸಮೇತ ಪತ್ತೆ ಹಚ್ಚಿದ್ದು, ಸ್ವತಃ ಕಾಂಗ್ರೆಸ್ ಅಭ್ಯರ್ಥಿಯ ಹೆಸರೇ ಎರಡು ಕಡೆ ಮತದಾರ ಪಟ್ಟಿಯಲ್ಲಿದೆ. ಬಹುತೇಕ ಮುಸ್ಲಿಂ ಮತದಾರರು ಡಬಲ್, ತ್ರಿಬಲ್ ಕಡೆ ಮತದಾನ ಮಾಡಿದ್ದಾರೆ ಎಂದು ತಿರುಗೇಟು ನೀಡಿದ ಯತ್ನಾಳ
ವಿಜಯಪುರ(ಮೇ.17): ವಿಜಯಪುರ ನಗರ ಮತಕ್ಷೇತ್ರದಲ್ಲಿ ಬಸನಗೌಡ ಪಾಟೀಲ ಯತ್ನಾಳ ಅವರ ಗೆಲುವು ಸಂಪೂರ್ಣ ಬೋಗಸ್ ಗೆಲುವಾಗಿದ್ದು, ಬೋಗಸ್ ಮತದಾನ ಆರೋಪವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಪಾಲಿಕೆ ಸದಸ್ಯರು ಒತ್ತಾಯಿಸಿದ್ದಾರೆ
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಅಬ್ದುಲ್‌ರಜಾಕ ಹೊರ್ತಿ, ವಿಜಯಪುರ ಮತದಾರರ ಪಟ್ಟಿಯಲ್ಲಿ ಅಸಂಬದ್ಧವಾಗಿ ಹೆಸರುಗಳನ್ನು ಸೇರ್ಪಡೆ ಮಾಡಲಾಗಿದೆ. ಈ ಬಗ್ಗೆ ದಾಖಲೆ ಸಮೇತ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ, ಸಂಬಂಧಿಸಿದ ಆರ್‌ಓಗಳಿಗೆ ಅಖಿತ ದೂರು ಸಲ್ಲಿಸಲಾಗಿದೆ. ಆದರೂ ಸಹ ಅಧಿಕಾರಿಗಳು ಬಿಜೆಪಿ ಕೈಗೊಂಬೆಯಾಗಿ ವರ್ತಿಸಿದ ಫಲವಾಗಿ ವಿಜಯಪುರ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲುವಂತಾಗಿದೆ ಎಂದು ದೂರಿದ್ದಾರೆ.
ವಿಜಯಪುರದ ಕಾಂಗ್ರೆಸ್ ತ್ರಿಮೂರ್ತಿಗಳಿಗೆ ಸಿಗುತ್ತಾ ಸಂಪುಟದಲ್ಲಿ ಸ್ಥಾನ..!
ಚಿಅಚೋಳಿ ಮೊದಲಾದ ಭಾಗದ ಮತದಾರರನ್ನು ವಿವಿಧ ತಾಂಡಾಗಳಲ್ಲಿ ಮತದಾರರ ಪಟ್ಟಿಯಲ್ಲಿ ಅಸಂಬದ್ಧವಾಗಿ ಸೇರ್ಪಡೆ ಮಾಡಲಾಗಿದೆ. ಮೇಲ್ನೋಟಕ್ಕೆ ಬೋಗಸ್ ಮತದಾರರ ಸೇಪರ್‍ಡೆಯಲ್ಲಿ ದೊಡ್ಡ ಮಟ್ಟದ ಮೋಸ ನಡೆದಿರುವುದು ಸ್ಪಷ್ಟವಾಗುತ್ತಿದೆ. ಮತದಾರರ ಪಟ್ಟಿಯಲ್ಲಿ ಸೇಪÜರ್‍ಡೆಯಾದ ಮತದಾರರು ವಿಜಯಪುರ ನಗರದ ಬಡಾವಣೆಗಳಲ್ಲಿನ ಕಾಯಂ ನಿವಾಸಿಯಾಗಿಲ್ಲ ಎಂದು ದೂರಿದರು. ವಿಜಯಪುರ ನಗರ ಶಾಸಕರು ಹಾಗೂ ಅವರ ಹಿಂಬಾಲಕರು ಐಎಲ…ಓಗಳನ್ನು ಹೆದರಿಸಿ ಮತದಾರರ ನಕಲಿ ಹೆಸರುಗಳನ್ನು ಸೇರ್ಪಡೆ ಮಾಡಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ಸಿನವರೇ ನಕಲಿ ಮತದಾನ ಮಾಡಿದ್ದು: ಯತ್ನಾಳ ತಿರುಗೇಟು
ವಿಜಯಪುರ: ಬಿಜೆಪಿಯವರು ನಕಲಿ ಮತದಾನ ಮಾಡಿದ್ದಾಗಿ ಆರೋಪಿಸುತ್ತಿರುವ ಕಾಂಗ್ರೆಸ್ಸಿಗರೇ ನÜಕಲಿ ಮತದಾನ ಮಾಡಿದ ಬಗ್ಗೆ ಸಾಕ್ಷ್ಯಾಧಾರ ಸಮೇತ ಪತ್ತೆ ಹಚ್ಚಿದ್ದು, ಸ್ವತಃ ಕಾಂಗ್ರೆಸ್ ಅಭ್ಯರ್ಥಿಯ ಹೆಸರೇ ಎರಡು ಕಡೆ ಮತದಾರ ಪಟ್ಟಿಯಲ್ಲಿದೆ. ಬಹುತೇಕ ಮುಸ್ಲಿಂ ಮತದಾರರು ಡಬಲ್, ತ್ರಿಬಲ್ ಕಡೆ ಮತದಾನ ಮಾಡಿದ್ದಾರೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ತಿರುಗೇಟು ನೀಡಿದ್ದಾರೆ.
ಮಂಗಳವಾರ ಈ ಸಂಬಂಧ ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್ ಅಭ್ಯರ್ಥಿ ಭಾಗ ಸಂಖ್ಯೆ 172 ಮತ್ತು 173 ರಲ್ಲಿ ಮತದಾರರಾಗಿದ್ದಾರೆ. ಮುಸ್ಲಿಂ ಮತದಾರರು ಪ್ರತಿ ಚುನಾವಣೆಯಲ್ಲಿ ಎರಡು ಮೂರು ಕಡೆ ಮತ ಚಲಾಯಿಸುವುದು ಸಾಮಾನ್ಯ. ಆದರೆ ಈ ಬಾರಿಯ ಚುನಾವಣೆಯಲ್ಲೂ ಅಲ್ಪಸಂಖ್ಯಾತರು ಡಬಲ…, ತ್ರಿಬಲ್ ಮತದಾನ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಯತ್ನಾಳರನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕರನ್ನಾಗಿಸಿ: ಸತೀಶ್ ಚಂದ್ರ ಕುಲಕರ್ಣಿ ಆಗ್ರಹ
ಜುಮ್ಮಾ ಮಸೀದಿ ಹಿಂದಿನ ಇಂದಿರಾ ನಗರದ ಸರ್ಕಾರಿ ಉರ್ದು ಶಾಲೆ, ಸಕಾಫ್ ರೋಜಾದ ಸರ್ಕಾರಿ ಶಾಲೆ ಹಾಗೂ ಗಾಂಧಿ ವೃತ್ತ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಅಕ್ರಮವಾಗಿ ಡಬಲ್ ತ್ರಿಬಲ್ ಮತ ಚಲಾಯಿಸಿದ್ದಾರೆ. ಒಮ್ಮೆ ಮತ ಚಲಾಯಿಸಿದ್ದಕ್ಕೆ ಬೆರಳಿಗೆ ಹಚ್ಚಿದ್ದ ಅಳಿಸಲಾಗದ ಶಾಹಿಯನ್ನು ಲಿಕ್ವಿಡ್‌ನಿಂದ ತೊಳೆದು ಮತ ಚಲಾಯಿಸಲು ಪ್ರಯತ್ನಿಸಿದ್ದನ್ನು ವಿಡಿಯೊ ಮೂಲಕ ಸೆರೆಹಿಡಿದು, ಪೊಲೀಸರಿಗೆ ಒಪ್ಪಿಸಿದ್ದಾಗಿ ತಿಳಿಸಿದ್ದಾರೆ.
ಸತ್ತವರನ್ನು ಮತದಾರರ ಪಟ್ಟಿಯಲ್ಲಿ ಉಳಿಸಿಕೊಂಡು, ಅವರ ಹೆಸರಿನಲ್ಲಿಯೂ ಮತ ಚಲಾಯಿಸಿದ್ದಾರೆ. ಅಂತಿಮ ಮತದಾರರ ಪಟ್ಟಿಯಲ್ಲಿ ಬಹುತೇಕ ಬೂತ್‌ಗಳಲ್ಲಿ ನಾಲ್ಕು ಕಡೆ ಹೆಸರುಗಳನ್ನು ಉಳಿಸಿಕೊಂಡಿದ್ದನ್ನು ಪತ್ತೆ ಮಾಡಿದ ನಮ್ಮ ಬೆಂಬಲಿಗರು, ನನ್ನ ಗಮನಕ್ಕೆ ತಂದಾಗ, ಏ.17ರಂದು ರಾಜ್ಯ ಚುನಾವಣಾ ಆಯುಕ್ತರು, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿರುವುದಾಗಿ ಯತ್ನಾಳ ತಿಳಿಸಿದ್ದಾರೆ.