ಕಾಂಗ್ರೆಸ್‌ ರಾಷ್ಟ್ರೀಯ ಮುಖಂಡ ರಾಹುಲ್‌ ಗಾಂಧಿ ಅವರ ವಿರುದ್ಧ ಅವಹೇಳನಾಕಾರಿ ಹೇಳಿಕೆ  ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಅವರನ್ನು ಅಷ್ಘಾನಿಸ್ತಾನಕ್ಕೆ ಗಡಿಪಾರು ಮಾಡಬೇಕೆಂದು ಆಗ್ರಹ

ಬೆಂಗಳೂರು (ಆ.25): ಕಾಂಗ್ರೆಸ್‌ ರಾಷ್ಟ್ರೀಯ ಮುಖಂಡ ರಾಹುಲ್‌ ಗಾಂಧಿ ಅವರ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಅವರನ್ನು ಅಷ್ಘಾನಿಸ್ತಾನಕ್ಕೆ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಕಾಂಗ್ರೆಸ್‌ ಕಾರ್ಯಕರ್ತರು ಮಂಗಳವಾರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ನಂತರ ಸಿಎಂ ಕಚೇರಿ ಎದುರು ಪ್ರತಿಭಟನೆಯನ್ನೂ ನಡೆಸಿದರು. 

ಸಿಎಂಗೆ ಮನವಿ ಸಲ್ಲಿಸಿದ ನಂತರ ಕಾಂಗ್ರೆಸ್‌ ಕಾರ್ಯಕರ್ತರು, ಸಿಎಂ ಕಚೇರಿ ಎದುರು ಯತ್ನಾಳ್‌ರನ್ನು ಭಯೋತ್ಪಾದಕ ಒಸಾಮಾ ಬಿನ್‌ ಲಾಡೆನ್‌ಗೆ ಹೋಲಿಸಿರುವ ಪೋಸ್ಟರ್‌ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಮತ್ತೊಂದೆಡೆ, ಶಾಸಕರ ಭವನದ 5 ನೇ ಬ್ಲ್ಯಾಕ್‌ನಲ್ಲಿರುವ ಯತ್ನಾಳ್‌ರ ಕೊಠಡಿ ಸಂಖ್ಯೆ 2001ರ ಗೋಡೆ ಮತ್ತು ಬಾಗಿಲಿಗೆ ಅವಹೇಳನಕಾರಿ ಪೋಸ್ಟರ್‌ಗಳನ್ನು ಕಿಡಿಗೇಡಿಗಳು ಅಂಟಿಸಿದ್ದಾರೆ. ಯತ್ನಾಳ್‌ರನ್ನು ಭಯೋತ್ಪಾದಕ ಒಸಾಮಾ ಬಿನ್‌ ಲಾಡೆನ್‌ನ ಪುತ್ರ ಎಂಬಂತೆ ಹೇಳಿಕೆ ಇರುವ ನಾಲ್ಕು ಪೋಸ್ಟರ್‌ ಅಂಟಿಸಲಾಗಿದೆ.

'ವಾರ ತಡ್ಕೊಳ್ಳಿ.. ಕಾವೇರಿಯ ಸ್ಫೋಟಕ ದೃಶ್ಯ ನನ್ನ ಬಳಿ ಇದೆ'

ಕೊಠಡಿಯಲ್ಲಿ ಯಾರೂ ಇಲ್ಲದ ವೇಳೆ ಬಂದ ಕಿಡಿಗೇಡಿಗಳು ಬಾಗಿಲು, ಗೋಡೆ ಮೇಲೆ ಪೋಸ್ಟರ್‌ ಅಂಟಿಸಿ ಪರಾರಿಯಾಗಿದ್ದಾರೆ. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ವಿಧಾನಸೌಧ ಠಾಣೆ ಪೊಲೀಸರು ತಿಳಿಸಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಬೆಂಗಳೂರು ನಗರ ಘಟಕದ ಕಾಂಗ್ರೆಸ್‌ ಕಾರ್ಯಕರ್ತರು, ‘ರಾಹುಲ್‌ ಗಾಂಧಿ ಅವರ ವಿರುದ್ಧ ಯತ್ನಾಳ್‌ ಅವಹೇಳನಾಕಾರಿ ಹೇಳಿಕೆ ನೀಡಿದ್ದಾರೆ. ಯತ್ನಾಳ್‌ ಒಬ್ಬ ತಾಲಿಬಾನ್‌ಗೆ ಜನಿಸಿದ ವ್ಯಕ್ತಿಯಾಗಿದ್ದು ಕೂಡಲೇ ಅವರನ್ನು ಅಷ್ಘಾನಿಸ್ತಾನಕ್ಕೆ ಗಡಿಪಾರು ಮಾಡಬೇಕು’ ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು.

ಶಾಸಕರ ಭವನದ 5 ನೇ ಬ್ಲ್ಯಾಕ್‌ನಲ್ಲಿರುವ ಯತ್ನಾಳ್‌ರ ಕೊಠಡಿ ಸಂಖ್ಯೆ 2001 ರ ಗೋಡೆ ಮತ್ತು ಬಾಗಿಲಿಗೆ ಕಿಡಿಗೇಡಿಗಳು ಅವಹೇಳನಕಾರಿ ಪೋಸ್ಟರ್‌ ಅಂಟಿಸಿರುವುದು.