'ವಾರ ತಡ್ಕೊಳ್ಳಿ.. ಕಾವೇರಿಯ ಸ್ಫೋಟಕ ದೃಶ್ಯ ನನ್ನ ಬಳಿ ಇದೆ'
*ನಾನು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುವ ರಾಜಕಾರಣಿ ಅಲ್ಲ
* ಹುಬ್ಬಳ್ಳಿಯಲ್ಲಿ ಗುಡುಗಿದೆ ಯತ್ನಾಳ್
* ನಾನು ಮಾತನಾಡಿದ್ದಕ್ಕೆ ಸಿಎಂ ಸ್ಥಾನ ಬದಲಾಯಿತು
* ಬೊಮ್ಮಾಯಿ ಬಿಎಸ್ ವೈ ರಬ್ಬರ್ ಸ್ಟಾಂಪ್ ಅಲ್ಲ
ಹುಬ್ಬಳ್ಳಿ(ಆ. 12) ಸಚಿವ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಎದ್ದಿದ್ದ ಕ್ಯಾತೆ ಒಂದು ಹಂತಕ್ಕೆ ತಣ್ಣಗಾಗಿದೆ. ಆದರೆ ಈ ನಡುವೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ನಾನು ಕಾಡಿ ಬೇಡಿ ಮಂತ್ರಿ ಆಗುವುದಿಲ್ಲ. ವಿಜಯಪುರದಲ್ಲಿ ಟೈರ್ ಸುಟ್ಟು ಮಂತ್ರಿ ಆಗುವ ಅವಶ್ಯಕತೆ ನನಗಿಲ್ಲ. ಅಷ್ಟು ಕೆಳ ಮಟ್ಟದ ರಾಜಕಾರಣ ನಾನು ಮಾಡುವುದಿಲ್ಲ. ನಾನು ಮಂತ್ರಿ ಏಕೆ ಆಗಲಿಲ್ಲ ಎಂಬುದು ಇಡೀ ಜಗತ್ತಿಗೆ ಗೋತ್ತಿದೆ ಎಂದಿದ್ದಾರೆ.
ನಮ್ಮ ಬೇಡಿಕೆ ಇದ್ದಿದ್ದಿ ಸಿಎಂ ಬದಲಾವಣೆ ಆಗಬೇಕೆಂದು. ಹೈಕಮಾಂಡ್ ಈಗಾಗಲೇ ಬದಲಾವಣೆ ಮಾಡಿದೆ. ಬೊಮ್ಮಯಿಯವರಿಗೆ ಮೂರ್ನಾಲ್ಕು ತಿಂಗಳು ಸಮಯ ಕೋಡೋಬೇಕು. ಅವರು ಯಡಿಯೂರಪ್ಪನವರ ನೆರಳಿನಿಂದ ಹೊರಗಡೆ ಬರ್ತಾರೆ. ಮುಖ್ಯಮಂತ್ರಿಗಳು ಬಹಳ ಜಾಣರಿದ್ದಾರೆ, ಯಡಿಯೂರಪ್ಪನವರ ರಬ್ಬರ್ ಸ್ಟಾಂಪ್ ಆಗುವುದಿಲ್ಲ ಎಂದರು.
ಮುಖ್ಯಮಂತ್ರಿಗಳು ಹಿಂದೂ ವಿರೋಧಿಗಳಾದ್ರೆ, ನಾನು ಸುಮ್ಮನೆ ಕುಳಿತು ಕೊಳ್ಳುವುದಿಲ್ಲ. ಮುಂದಿನ ಚುನಾವಣೆ ಯಾರ ನೇತೃತ್ವದಲ್ಲಿ ಹೋಗಬೇಕು ಎಂಬುದು ಕಾಲ ನಿರ್ಣಯ ಮಾಡುತ್ತದೆ. ಪಕ್ಷದ ಹೈಕಮಾಂಡ ಯಾರ ನೇತೃತ್ವ ಕೊಡುತ್ತೆ. ಅವರ ಸಮ್ಮುಖದಲ್ಲಿ ನಾವು ಚುನಾವಣೆಗೆ ಹೋಗಲಾಗುವುದು ಎಂದರು.
ಈ ಹಿಂದಿನ ಮೂರು ಉಪ ಮುಖ್ಯಮಂತ್ರಿಗಳು ಮುಂದಿನ ಚುನಾವಣೆ ನಮ್ಮ ನೇತೃತ್ವದಲ್ಲಿ ನಡೆಯುತ್ತದೆ ಎಂದು ಹೇಳಿದ್ದರು ಅವರನ್ನ ಉಪ ಮುಖ್ಯಮಂತ್ರಿ ಸ್ಥಾನದಿಂದ ಖಾಲಿ ಮಾಡಿದ್ರು ಏನ್ ಮಾಡಲಿಕ್ಕೆ ಆಗುತ್ತದೆ? ಎಂದು ಸ್ಥಾನ ಕಳೆದುಕೊಂಡವರನ್ನು ಕುಟುಕಿದರು.
ದೂರ ಬಲು ದೂರ.. ಬಂಡಾಯ ನಾಯಕರಿಗೆ ಬೊಮ್ಮಾಯಿ ಉತ್ತರ
ಯತ್ನಾಳಗೆ ಅನ್ಯಾಯ ಆದ ಬಗ್ಗೆ ಸ್ವಾಮೀಜಿ ಗಳು ಹೇಳಿಕೆ ಕೊಟ್ಟಿದ್ದಾರೆ. ನಮ್ಮ ಬೇಡಿಕೆ ಸಿಎಂ ಬದಲಾವಣೆ ಆಗಬೇಕು ಅಂತಾ ಇತ್ತು. ಈಗ ನಾಯಕತ್ವ ಬದಲಾವಣೆ ಆಗಿದೆ. ನೋಡರೀ ಒಬ್ಬ ನಾಯಕ ತನ್ನ ಚಾಪು ಇಟ್ಟುಕೊಳ್ಳಬೇಕು. ಬೊಮ್ಮಾಯಿ ಬಿಎಸ್ ವೈ ನೆರಳು ಆಗಲ್ಲ. ಅವರಿಗೆ ಸ್ವಲ್ಪ ಟೈಂ ಕೊಡಿ ಎಂದರು. ಪಕ್ಷಕ್ಕೆ ಹಾನಿ ಅಗಬಾರದು ಅಂತಾ ಹೈಕಮಾಂಡ್ ನಿರ್ಣಯ ಕೈಗೊಂಡಿದೆ ಹಿಂದೆ ಎಷ್ಟೋ ಜನ ಕಮುನಿಸ್ಟ್ ಸಿದ್ಧಾಂತ ಇದ್ದವರು ಬಿಜೆಪಿಗೆ ಬಂದಿದ್ದಾರೆ ಅವರೆಲ್ಲ ಒಂದಾಗಿದ್ದಾರೆ ಎಂದರು.
ನಾನು ಜೀರೋ ಇಂದ ಹೀರೋ ಆದವನು. ಮಧ್ಯದಲ್ಲೇ ಜೀರೋ ಆಗಿ ಈಗ ಮತ್ತೆ ಹೀರೋ ಆಗಿದ್ದೇನೆ. ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ, ಮಂತ್ರಿ ಸ್ಥಾನಕ್ಕೆ ಲಾಬಿ ನಡೆಸುವುದು ಸರಿಯಲ್ಲ. ಸೂತ್ರಧಾರರೊಬ್ಬರು ಮಗು ಚೂಟಿ, ತೊಟ್ಟಿಲು ತೂಗುತ್ತಿದ್ದಾರೆ. ನಿಮಗೆ ಗೊತ್ತಲ್ಲ. ನೀವೂ ಬರೀರಿ..ಈಗ ಸೂತ್ರಧಾರರ ಶಿಷ್ಯರೇ ಜಗಳ ತಗೆಯುತ್ತಿದ್ದಾರೆ ಎಂದರು.
ಸುಮ್ಮನೆ ಜಾರಕಿಹೊಳಿಯವರನ್ನ ಸಿಕ್ಕಿಸಿ ಮುಗಿಸಿ ಬಿಟ್ಟರು. ಶೆಟ್ಟರ್ ಬಗ್ಗೆ ನನಗೆ ಅಪಾರ ಗೌರವ ಇದೆ,ಅವರ ತ್ಯಾಗಕ್ಕೆ ಅಭಿನಂದನೆ ಸಲ್ಲಿಸುವೆ ಶೆಟ್ಟರ್ ತ್ಯಾಗದಿಂದ ಪ್ರತಿರೂಪವಾಗಿ ಬೊಮ್ಮಾಯಿ ಬಂದಿದ್ದಾರೆ. ನಮ್ಮನ್ನ ಮಂತ್ರಿನೂ ಮಾಡಲಿಲ್ಲ, ಮಂತ್ರಿ ಮಾಡದಿದ್ದರೂ ದುಃಖ ಇಲ್ಲ. ಬೆಲ್ಲದ ಸಿಎಂ ಆಗುವ ಕನಸು ಕಂಡರು. ಬೆಲ್ಲದ್ ಹೆಗಲ ಮೇಲೆ ಯಾರೋ ಬಂದೂಕು ಇಟ್ಟರು. ನನಗೆ ಚೂಟಿದ್ರೆ ನಾನು ಅವರ ಕಪಾಳಕ್ಕೆ ಹೊಡೆಯುತ್ತಿದ್ದೆ. ನನಗೆ ಅನ್ಯಾಯ ಆಗಿಲ್ಲ. ಬಿಎಸ್ ವೈ ವಿರುದ್ದ ನಾನು ಮಾತನಾಡಿದಕ್ಕೆ ಮಂತ್ರಿ ಸ್ಥಾನ ಸಿಗಲಿಲ್ಲ ಅನ್ನಬೇಡಿ. ನನ್ನ ವಿರೋಧ ಕಟ್ಟಿಕೊಂಡಿದ್ದಕ್ಕೆ ಬಿಎಸ್ ವೈ ಸ್ಥಾನ ಕಳೆದುಕೊಂಡರು ಎಂದು ಹರಿಹಾಯ್ದರು.
ಸೋಮಣ್ಣ ಬೇವಿನಮರದ ಬೊಮ್ಮಾಯಿ ವಿಶ್ವಾಸಘಾತಕ ಅಂತಾ ಹೇಳಿರುವುದು ಅವರ ವೈಯಯಕ್ತಿಕ ವಿಚಾರ. ಬೊಮ್ಮಾಯಿ ಅಧಿಕಾರ ಪೂರ್ಣಗೊಳಿಸಲಿ ಅಂತಾ ಚಾಮುಂಡೇಶ್ವರಿ ಬಳಿ ಬೇಡಿಕೊಳ್ಳುವೆ. ನಾನು ಕನಸು ಕಂಡಿಲ್ಲ,ಆಸೆ ನಿರಾಸೆ ರಾಜಕಾರಣದಲ್ಲಿ ಸಹ ಯತ್ನಾಳ ನಾಲಿಗೆ ಹರಿಬಿಟ್ಟದಕ್ಕೆ ಸ್ಥಾನ ತಪ್ಪಿಲ್ಲ, ನಾನು ನಾಲಿಗೆ ಹರಿಬಿಟ್ಟಿದಕ್ಕೆ ಸಿಎಂ ಬದಲಾದ್ರು ವಿಜಯೇಂದ್ರ ಇನ್ನೂ ಸ್ವಲ್ಪ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಕಾವೇರಿಯಲ್ಲಿನ ಕೆಲ ದೃಶ್ಯಗಳ ಬಗ್ಗೆ ನನಗೆ ಮಾಹಿತಿ ಇದೆ. ಇನ್ನೊಂದು ವಾರ ತಡೆದುಕೊಳ್ಳಿ ಎಲ್ಲವನ್ನೂ ಹೇಳುವೆ ಎಂದು ಸ್ವಪಕ್ಷದವರ ವಿರುದ್ಧವೇ ಬಾಂಬ್ ಸಿಡಿಸಿದರು.
ನನ್ನ ಮಂತ್ರಿ ಸ್ಥಾನ ಸಿಗದಿದ್ದಾಗ ಸ್ವಾಮೀಜಿ ಹೇಳಿಕೆ ಕೊಡುವೆ ಅಂದ್ರು, ಆದ್ರೆ ನಾನೇ ಬೇಡ ಅಂದೆ. ಬಿಎಸ್ ವೈ ಮೇಲಿನ ನ ಒತ್ತಡದಿಂದ ಬೊಮ್ಮಾಯಿ ಸಿಎಂ ಆಗಿದ್ದಾರೆ. ಬೊಮ್ಮಾಯಿ ಬಿಎಸ್ ವೈ ನೆರಳು ಆಗಲ್ಲ, ಯಾಕಂದ್ರೆ ಆ ಕುರ್ಚಿಯ ಮಹಿಮೆ ಹಾಗಿರುತ್ತೆ ಬೊಮ್ಮಾಯಿ, ಬಿಎಸ್ ವೈ ನೆರಳು ಆಗಿದ್ರೆ. ಬಿಎಸ್ ವೈ ನೇಮಕ ಮಾಡಿದ ಸಿಬ್ಬಂದಿಗಳೇ ಮುಂದುವರೆಯುತ್ತಿದ್ದರು ಎಂದು ಹೊಸ ಅಂಶವೊಂದನ್ನು ಹೆಕ್ಕಿ ತೆಗೆದರು .