ದೆಹಲಿಯಲ್ಲಿ ಸ್ಪರ್ಧಿಸುವ ವಿಚಾರ: ಕಾಂಗ್ರೆಸ್, ಆಪ್ ಮಧ್ಯೆ ಒಡಕು: ಇಂಡಿಯಾ ಮೈತ್ರಿಯಲ್ಲಿ ಬಿರುಕು
ಮಹತ್ವದ ವಿದ್ಯಮಾನವೊಂದರಲ್ಲಿ ಇತ್ತೀಚೆಗೆ ರಚಿತವಾಗಿರುವ ‘ಇಂಡಿಯಾ’ ವಿಪಕ್ಷ ಕೂಟದಲ್ಲಿ ಒಡಕು ಕಾಣಿಸಿಕೊಂಡಿದ್ದು, ದಿಲ್ಲಿಯ ಎಲ್ಲ 7 ಲೋಕಸಭೆ ಕ್ಷೇತ್ರಗಳಲ್ಲಿ ಸ್ವತಂತ್ರ ಸ್ಪರ್ಧೆಗೆ ಕಾಂಗ್ರೆಸ್ ತೀರ್ಮಾನಿಸಿದೆ.

ನವದೆಹಲಿ: ಮಹತ್ವದ ವಿದ್ಯಮಾನವೊಂದರಲ್ಲಿ ಇತ್ತೀಚೆಗೆ ರಚಿತವಾಗಿರುವ ‘ಇಂಡಿಯಾ’ ವಿಪಕ್ಷ ಕೂಟದಲ್ಲಿ ಒಡಕು ಕಾಣಿಸಿಕೊಂಡಿದ್ದು, ದಿಲ್ಲಿಯ ಎಲ್ಲ 7 ಲೋಕಸಭೆ ಕ್ಷೇತ್ರಗಳಲ್ಲಿ ಸ್ವತಂತ್ರ ಸ್ಪರ್ಧೆಗೆ ಕಾಂಗ್ರೆಸ್ ತೀರ್ಮಾನಿಸಿದೆ. ಇದು ‘ಇಂಡಿಯಾ’ ಕೂಟದ ಸದಸ್ಯ ಪಕ್ಷವಾಗಿರುವ ದಿಲ್ಲಿಯ ಆಮ್ ಆದ್ಮಿ ಪಕ್ಷವನ್ನು ಕೆರಳಿಸಿದ್ದು, ಮುಂಬೈನಲ್ಲಿ ಮಾಸಾಂತ್ಯಕ್ಕೆ ನಡೆಯುವ ಇಂಡಿಯಾ ಕೂಟದ ಸಭೆಗೆ ಬಹಿಷ್ಕಾರ ಹಾಕುವ ಎಚ್ಚರಿಕೆ ನೀಡಿದೆ.
ಬುಧವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ನೇತೃತ್ವದಲ್ಲಿ ಪಕ್ಷದ ದೆಹಲಿ ಪ್ರದೇಶದ ನಾಯಕರ ಜೊತೆ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಬರುವ ಲೋಕಸಭೆ ಚುನಾವಣೆಯಲ್ಲಿ (Lokasabha election) ಆಮ್ ಆದ್ಮಿ ಪಕ್ಷದೊಂದಿಗೆ ಮೈತ್ರಿಯ ಸಾಧ್ಯತೆಗಳ ಕುರಿತು ಚರ್ಚೆ ನಡೆಸಲಾಯಿತು. ಸಂಸದ ರಾಹುಲ್ ಗಾಂಧಿ, ದಿಲ್ಲಿ ಕಾಂಗ್ರೆಸ್ ಮುಖಂಡ ಅಜಯ್ ಮಾಕನ್, ದೆಹಲಿ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಚೌಧರಿ ಸೇರಿ ಅನೇಕ ನಾಯಕರು ಉಪಸ್ಥಿತರಿದ್ದರು.
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕಾಂಗ್ರೆಸ್ ನಾಯಕಿ ಅಲಕಾ ಲಂಬಾ, ದಿಲ್ಲಿಯ ಎಲ್ಲ 7 ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದೇವೆ. ಚುನಾವಣೆಗೆ ಇನ್ನು 7 ತಿಂಗಳು ಮಾತ್ರ ಬಾಕಿ ಇದ್ದು ಎಲ್ಲ ಕ್ಷೇತ್ರದಲ್ಲಿ ಸಿದ್ಧರಾಗಲು ಸೂಚನೆ ನೀಡಲಾಗಿದೆ’ ಎಂದರು.
ಗಾಲಿಕುರ್ಚಿಯಲ್ಲಿ ರಾಜ್ಯಸಭೆಗೆ ಬಂದ 90ರ ಹರೆಯದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್
ಆದರೆ ಇದಕ್ಕೆ ಆಕ್ಷೇಪಿಸಿದ ಆಪ್ ವಕ್ತಾರೆ ಪ್ರಿಯಾಂಕಾ ಕಕ್ಕರ್, ‘ದಿಲ್ಲಿಯಲ್ಲಿ ಕಾಂಗ್ರೆಸ್ (congress) ಪ್ರತ್ಯೇಕ ಸ್ಪರ್ಧೆ ಮಾಡುತ್ತೆ ಎಂದರೆ ಇಂಡಿಯಾ ಕೂಟ ರಚನೆ ಅರ್ಥಹೀನ. ಮಂಬೈನಲ್ಲಿ ಆ.31ರಂದು ನಡೆಯಲಿರುವ ಇಂಡಿಯಾ ಕೂಟದ ಸಭೆ ಹೋಗಬೇಕೋ ಬೇಡವೋ ಎಂಬುದನ್ನು ಆಪ್ ನಾಯಕತ್ವ ನಿರ್ಧರಸಲಿದೆ’ ಎಂದರು. ಆಪ್ ಸಚಿವ ಸೌರಭ್ ಭಾರದ್ವಾಜ್ ಮಾತನಾಡಿ, ‘ಮೈತ್ರಿ ಬಗ್ಗೆ ಇಂಡಿಯಾ ಕೂಟದ ಪಕ್ಷಗಳು ಹಾಗೂ ಪಕ್ಷದ ನಾಯಕತ್ವ ನಿರ್ಧರಿಸಲಿದೆ ಎಂದು ಹೇಳಿದರು.
ಮೋದಿ ತವರಿನಲ್ಲಿ ಬಿಜೆಪಿ ಸೋಲಿಸಲು ಒಗ್ಗಟ್ಟಾದ ಕಾಂಗ್ರೆಸ್-ಆಪ್, ಚುನಾವಣಾ ಮೈತ್ರಿ ಘೋಷಣೆ!
ಲೋಕಸಭೆ ಚುನಾವಣೆ ತಯಾರಿಗೆ ಕಾಂಗ್ರೆಸ್ ಸಭೆ
ಇನ್ನೊಂದೆಡೆ ಬಿಜೆಪಿ ಚುನಾವಣೆಗೆ ತಯಾರಿ ಬೆನ್ನಲ್ಲೇ ಕಾಂಗ್ರೆಸ್ ಕೂಡ ಲೋಕಸಭೆ ಚುನಾವಣೆಗೆ ಭರದ ಸಿದ್ಧತೆ ಆರಂಭಿಸಿದ್ದು, ಬುಧವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಪಕ್ಷದ ದೆಹಲಿ ಪ್ರದೇಶದ ನಾಯಕರ ಜೊತೆ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಬರುವ ಲೋಕಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದೊಂದಿಗೆ ಮೈತ್ರಿಯ ಸಾಧ್ಯತೆಗಳ ಕುರಿತು ಚರ್ಚೆ ನಡೆಸಲಾಯಿತು. ಸಂಸದ ರಾಹುಲ್ ಗಾಂಧಿ, ದಿಲ್ಲಿ ಕಾಂಗ್ರೆಸ್ ಮುಖಂಡ ಅಜಯ್ ಮಾಕನ್, ದೆಹಲಿ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಚೌಧರಿ ಸೇರಿ ಅನೇಕ ನಾಯಕರು ಉಪಸ್ಥಿತರಿದ್ದರು.
ಪ್ರಸ್ತುತ ದೆಹಲಿಯ ಎಲ್ಲ 7 ಲೋಕಸಭೆ ಕ್ಷೇತ್ರವು ಬಿಜೆಪಿ ಹಿಡಿತದಲ್ಲಿದೆ. ಈ ನಡುವೆ 7 ಕ್ಷೇತ್ರದಲ್ಲೂ ಸ್ಪರ್ಧೆಗೆ ಕಾಂಗ್ರೆಸ್ ಉತ್ಸುಕತೆ ತೋರಿದೆ ಎನ್ನಲಾಗಿದೆ. ಆದರೆ ಇಂಡಿಯಾ ಕೂಟದ ಹೆಸರಲ್ಲಿ ಆಪ್-ಕಾಂಗ್ರೆಸ್ ಮೈತ್ರಿ ಏರ್ಪಟ್ಟಿರುವ ಕಾರಣ ಮುಂದಿನ ದಿನಗಳಲ್ಲಿ ಸೀಟು ಹಂಚಿಕೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಆಪ್ ವಕ್ತಾರ ಸೌರಭ್ ಭಾರದ್ವಾಜ ಹೇಳಿದ್ದಾರೆ.