ಕಾಂಗ್ರೆಸ್‌ ಪಕ್ಷದ ಈ ದೇಶದಲ್ಲಿ ಭಯೋತ್ಪಾದನೆ ಹುಟ್ಟು ಹಾಕಿದ ಪಕ್ಷ, ಕಾಂಗ್ರೆಸ್‌ ಪಕ್ಷ ಅಲ್ಪಸಂಖ್ಯಾತರಿಗೂ ಅನ್ಯಾಯ ಮಾಡಿದೆ. ಅಲ್ಪಸಂಖ್ಯಾತರ ಎಲ್ಲಿಗೆ ಮಾರಕವಾಗಿರುವುದೇ ಕಾಂಗ್ರೆಸ್‌ ಪಕ್ಷದ ಸಾಧನೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ‍್ಯದರ್ಶಿ ರವಿಕುಮಾರ್‌ ಹೇಳಿದರು

ಕೆಜಿಎಫ್‌ (ಡಿ.5) : ಕಾಂಗ್ರೆಸ್‌ ಪಕ್ಷದ ಈ ದೇಶದಲ್ಲಿ ಭಯೋತ್ಪಾದನೆ ಹುಟ್ಟು ಹಾಕಿದ ಪಕ್ಷ, ಕಾಂಗ್ರೆಸ್‌ ಪಕ್ಷ ಅಲ್ಪಸಂಖ್ಯಾತರಿಗೂ ಅನ್ಯಾಯ ಮಾಡಿದೆ. ಅಲ್ಪಸಂಖ್ಯಾತರ ಎಲ್ಲಿಗೆ ಮಾರಕವಾಗಿರುವುದೇ ಕಾಂಗ್ರೆಸ್‌ ಪಕ್ಷದ ಸಾಧನೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ‍್ಯದರ್ಶಿ ರವಿಕುಮಾರ್‌ ಹೇಳಿದರು. ಡಿ.16ರಂದು ಕೆಜಿಎಫ್‌ ವಿಧಾನಸಭಾ ಕ್ಷೇತ್ರದಲ್ಲಿ ಜನ-ಸಂಕಲ್ಪ ಯಾತ್ರೆ ಪೂರ್ವಭಾವಿ ಕಿಂಗ್‌ಜಾಜ್‌ ಹಾಲ್‌ನಲ್ಲಿ ಸಭೆಯಲ್ಲಿ ಮಾತನಾಡಿದರು.

ಪಕ್ಷದ ಕಾರ‍್ಯಕರ್ತರು ಮುಖಂಡರು ಪ್ರಧಾನಿ ನರೇಂದ್ರ ಮೋದಿ ಜನಪ್ರಿಯ ಕಾರ‍್ಯಕ್ರಮಗಳನ್ನು ಪ್ರತಿ ಮನೆಗೂ ತಲುಪಿಸಿ ಮುಂದಿನ ಚುನಾವಣೆಯಲ್ಲಿ ಮತಯಾಚನೆ ಮಾಡಬೇಕೆಂದು ಪಕ್ಷದ ಕಾರ‍್ಯಕರ್ತರಿಗೆ ಕರೆ ನೀಡಿದರು.

Assembly election: ದೇಶದಲ್ಲಿ ಕಾಂಗ್ರೆಸ್‌ ರೌಡಿಸಂ ಜನಕವಾಗಿದೆ ರವಿಕುಮಾರ್ ವಾಗ್ದಾಳಿ

ಕೇಂದ್ರ-ರಾಜ್ಯ ಸರಕಾರಗಳ ಅಭಿವೃದ್ದಿ ಯೋಜನೆಗಳನ್ನು ಜನರಿಗೆ ತಿಳಿಸಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವುದು ಜನ-ಸಂಕಲ್ಪ ಯಾತ್ರೆಯ ಉದ್ದೇಶವಾಗಿದೆ.ಆದ್ದರಿಂದ ಆದಷ್ಟುಹೆಚ್ಚಿನ ಸಂಖ್ಯೆಯ ಲ್ಲಿ ಜನರನ್ನು ಕರೆತನ್ನಿ ಎಂದರು.

ಸಂಸದ ಮುನಿಸ್ವಾಮಿ ಮಾತನಾಡಿ, ಜನ-ಸಂಕಲ್ಪ ಯಾತ್ರೆಗೆ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಯಿ, ಮಾಜಿ ಮುಖ್ಯ ಮಂತ್ರಿ ಯೂಡಿರಪ್ಪ ಆಗಮಿಸಲಿದ್ದು, ಜನ-ಸಂಕಲ್ಪ ಯಾತ್ರೆ ಅತ್ಯಂತ ಯಶ್ವವಿಯಾಗ ಬೇಕೆಂದು ಕರೆ ನೀಡಿ, ಕಾಂಗ್ರೆಸ್‌ ಪಕ್ಷದ ವೈಫಲ್ಯಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕೆಂದರು.

ಮಾಜಿ ಶಾಸಕರಾದ ಎಂ.ನಾರಾಯಣಸ್ವಾಮಿ, ಬಿ.ಪಿ.ವೆಂಕಟಮುನಿಯಪ್ಪ, ವೈ.ಸಂಪಂಗಿ, ಕೆಜಿಎಫ್‌ ಬ್ಲಾಕ್‌ ಬಿಜೆಪಿ ಮುಖಂಡ ಕಮಲ್‌ನಾಥ್‌, ಗ್ರಾಮಾಂತರ ಘಟಕದ ಜಯಪ್ರಕಾಶ್‌ ನಾಯ್ಡು, ಜಿಲ್ಲಾಧ್ಯಕ್ಷ ವೇಣುಗೋಪಾಲ್‌, ಮೋಹನ್‌ಕೃಷ್ಣ ಇದ್ದರು.

ಸಂಸದ ಮುನಿಸ್ವಾಮಿಗೆ ಅವಾಚ್ಯ ನಿಂದನೆ

ಕಾರ‍್ಯಕ್ರಮ ಪ್ರಾರಂಭವಾಗುವ ಮುನ್ನ ಸಂಸದ ಮುನಿಸ್ವಾಮಿ ಎಲ್ಲ ಕಾರ‍್ಯಕರ್ತರನ್ನು ಕುಳಿತುಕೊಳ್ಳುವಂತೆ ಸೂಚನೆ ನೀಡುತ್ತಿದ್ದರು, ಅದರಂತೆ ಸಂಪಂಗಿ ಬೆಂಬಲಿಗ ಬಂಡಿ ವೆಂಕಟೇಶ್‌ ವೇದಿಕೆಯತ್ತ ಬರುತ್ತಿದ್ದುಸನ್ನು ನೋಡಿ ‘ನೀವು ಕುಳಿತುಕೊಳ್ಳಿ ’ಎಂದಾಗ ನಾನು ಒಬ್ಬ ಮುಖಂಡ ನನ್ನನು ಕುಳಿತುಕೊಳ್ಳಿ ಎಂದು ಹೇಳಲು ನೀವು ಯಾರು? ನಾನು ಒಬ್ಬ ಮಾಜಿ ಅಭ್ಯರ್ಥಿ ಎಂದು ಸಂಸದರನ್ನು ಅವಾಚ್ಯ ಶಬ್ದಗಳಿಂದ ನಿಂದಿÜಸಿದ ಹಿನ್ನೆಲೆಯಲ್ಲಿ ಸಭೆಯಲ್ಲಿ ಮಾಜಿ ಶಾಸಕ ವೈ.ಸಂಪಂಗಿ ಮತ್ತು ಸಂಸದರ ಬೆಂಬಲಿಗರ ನಡುವೆ ವಾಗ್ವಾದ ನಡೆಯಿತು. ಮುಖಂಡರ ಮದ್ಯಸ್ಥಿಕೆಯಿಂದ ಗಲಾಟೆ ತಿಳಿಯಾಯಿತು. ಸಭೆಯಲ್ಲಿ ಮಾಜಿ ಶಾಸಕ ವೈ.ಸಂಪಂಗಿ ಬೆಂಬಲಿಗ ಬಂಡಿ ವೆಂಕಟೇಶ್‌ ಸಂಸದರ ವಿರುದ್ಧ ಬಳಿಸದ ಪದ ಬಳಕೆ ಮುಖಂಡರು ಖಂಡಿಸಿದರು.

ಮತದಾರರ ಮಾಹಿತಿ ಕಳವು: ಚಿಲುಮೆ ಸಂಸ್ಥೆಯ ಮುಖ್ಯಸ್ಥನ ಮನೆ ಮೇಲೆ ಪೊಲೀಸರ ದಾಳಿ

ರಾಹುಲ್‌ ಗಾಂಧಿ ಒಬ್ಬ ವಿಫಲ ನಾಯಕ. ರಾಹುಲ್‌ ಗಾಂಧಿ ಯಾವ ರಾಜ್ಯಕ್ಕೆ ಹೋಗುತ್ತಾರೋ ಅಲ್ಲಿ ಕಾಂಗ್ರೆಸ್‌ ನೆಲಕಚ್ಚುತ್ತದೆ. ಕರ್ನಾಟಕದಲ್ಲಿ ಪಾದಯಾತ್ರೆ ಮಾಡಿ ಹೋಗಿದ್ದಾರೆ.ಹೀಗಾಗಿ ಇಲ್ಲಿ ಕಾಂಗ್ರೆಸ್‌ಗೆ ಹುಲ್ಲು ಹುಟ್ಟುವುದಿಲ್ಲ ಎಂದು ಸ್ವಷ್ಟವಾಗಿ ಹೇಳುತ್ತೇನೆ.

- ಮುನಿಸ್ವಾಮಿ, ಸಂಸದ