ಬೆಂಗಳೂರು, (ಅ.20): ರಾಜರಾಜೇಶ್ವರಿ ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ಕಾಂಗ್ರೆಸ್ ಚುನಾವಣೆ ಆಯೋಗಕ್ಕೆ ದೂರು ನೀಡಿದೆ.

ಮುನಿರತ್ನ ಅವರು ಅಕ್ರಮವಾಗಿ ವೋಟರ್ ಐಡಿ ಸಂಗ್ರಹಿಸಿದ್ದಾರೆ. ತಲಾ 5 ಸಾವಿರ ರೂಒಆಯಿ ಕೊಟ್ಟು ಓಟರ್ ಐಡಿ ಸಂಗ್ರಹಿಸುತ್ತಿದ್ದಾರೆ. ಯಾರಿಗೆ ಐದು ಸಾವಿರ ರೂಪಾಯಿ ಕೊಟ್ಟು ಓಟರ್ ಐಡಿ ಸಂಗ್ರಹಿಸುತ್ತಿದ್ದಾರೆ ಎನ್ನುವ ವಿವರ ನೀಡಿ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹ್ಮದ್ ಚುನಾವಣೆ ಆಯೋಗಕ್ಕೆ ದೂರು ನಿಡಿದ್ದಾರೆ.

ಒಂದೇ ದಿನ ಮುನಿರತ್ನಗೆ ಡಬಲ್ ಧಮಾಕಾ..!

ಈ ಹಿಂದೆ 2018ರ ವಿಧಾನಸಬಾ ಚುನಾವಣೆ ವೇಳೆಯೂ ಮುನಿರತ್ನ ಅವರ ಬಳಿ ಅಕ್ರಮ ವೋಟರ್ ಐಡಿ ಕಾರ್ಡು ಪತ್ತೆಯಾಗಿದ್ದವು ಎಂದು ಬಿಜೆಪಿ ಆರೋಪಿಸಿತ್ತು. ಈ ಪ್ರಕರಣ ಹೈಕೋರ್ಟ್‌ ವರೆಗೂ ಹೋಗಿತ್ತು. 

ಇದೀಗ ಉಪಚುನಾವಣೆಯಲ್ಲೂ ಸಹ ಅಕ್ರಮ ಐಟಿ ಕಾರ್ಡ್‌ ವಾಸನೆ ಶುರುವಾಗಿದ್ದು, ಯಾರಿಗೂ ನಿಮ್ಮ ಐಡಿ ಕಾರ್ಡ್ ಕೊಡಬೇಡಿ ಎಂದು ಚುನಾವಣಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಬಿಜೆಪಿಯಿಂದ  ಮುನಿರತ್ನ, ಕಾಂಗ್ರೆಸ್‌ನಿಂದ ದಿ.ಡಿಕೆ ರವಿ ಅವರ ಪತ್ನ ಕುಸುಮಾ ಹಾಗೂ ಜೆಡಿಎಸ್‌ನಿಂದ ಕೃಷ್ಣಮೂರ್ತಿ ಅವರು ಆರ್.ಆರ್. ನಗರ ಬೈ ಎಲೆಕ್ಷನ್‌ಗೆ ಅಖಾಡದಲ್ಲಿದ್ದಾರೆ.

ಇನ್ನು ತುಮಕೂರು ಜಿಲ್ಲೆಯ ಶಿರಾ ಮತ್ತು ಬೆಂಗಳೂರಿನ ಆರ್.ಆರ್.ನಗರ ಕ್ಷೇತ್ರಗಳಿಗೆ ನ.03ರಂದು ಮತದಾನ ನಡೆಯಲಿದ್ದು, ನ.10ಕ್ಕೆ ಫಲಿತಾಂಶ ಪ್ರಕಟವಾಗಲಿದೆ.